ಗುಡಿಸಾಗರ ಗ್ರಾಮದಲ್ಲಿ ಜಿಲ್ಲಾ ಪಂಚಾಯತ, ತಾಲ್ಲೂಕು ಪಂಚಾಯತ್ ಹಾಗೂ ಗ್ರಾಮ ಪಂಚಾಯತ್ ನೇತೃತ್ವದಲ್ಲಿ ನಡೆಯುತ್ತಿರುವ ಕೆರೆ ಅಭಿವೃದ್ಧಿ ಕಾಮಗಾರಿಯನ್ನು ಶಾಸಕರಾದ ಎನ್ ಹೆಚ್ ಕೊನರೆಡ್ಡಿಯವರು ಪರಿಶೀಲನೆ ಮಾಡಿ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು.



ವೈ- ಧಾರವಾಡ ಜಿಲ್ಲೆ ನವಲಗುಂದ ತಾಲೂಕಿನ ಗುಡಿಸಾಗರ ಗ್ರಾಮಕ್ಕೆ ಭೇಟಿ ನೀಡಿದ ಶಾಸಕರಾದ ಎನ್ ಹೆಚ್ ಕೊನರೆಡ್ಡಿಯವರು, ಗ್ರಾಮದ ಪ್ರಮುಖರ ಜತೆ ಕೂಡಿಕೊಂಡು ಗ್ರಾಮದ ಕೆರೆ ಅಭಿವೃದ್ಧಿ ಸ್ಥಳಕ್ಕೆ ಭೇಟಿ ನೀಡಿದರು. ಇನ್ನೂ ಭೇಟಿ ವೇಳೆ ಅಧಿಕಾರಿಗಳಿಗೆ ಕಾಮಗಾರಿ ಪರಿಣಾಮಕಾರಿಯಾಗಿ ನಿಗದಿತ ಸಮಯದಲ್ಲಿ ಪೂರ್ಣಗೊಳಿಸಬೇಕು ಎಂದು ಖಡಕ್ ಸೂಚನೆ ನೀಡಿದರು. ಇದೇ ವೇಳೆ ಸ್ವಚ್ಚ ಗ್ರಾಮ ಸುಂದರ ಹಾಗೂ ಆರೋಗ್ಯ ಗ್ರಾಮದ ಸಂಕಲ್ಪದೊಂದಿಗೆ ಕೈಗೊಂಡ ಗ್ರಾಮಸ್ವಚ್ಚತೆಗೆ ಶಾಸಕರಾದ ಎನ್ ಹೆಚ್ ಕೊನರೆಡ್ಡಿ ಚಾಲನೆ ನೀಡಿದರು. ಗ್ರಾಮಸ್ಥರ ಸಹಭಾಗಿತ್ವದಲ್ಲಿ ಸ್ವಚ್ಛ ಗ್ರಾಮಕ್ಕೆ ಚಾಲನೆ ನೀಡಿದರು. ಜತೆಗೆ ಗ್ರಾಮಗಳಲ್ಲಿ ಕೈಗೊಳಗಳಬೇಕಾದ ಅಭಿವೃದ್ಧಿ ಕಾಮಗಾರಿಗಳ ಕುರಿತು ಸ್ಥಳೀಯ ಶಾಸಕರು ಹಾಗೂ ಗ್ರಾಮದ ಪ್ರಮುಖರು ಚರ್ಚೆ ನಡೆಸಿದರು.

