BELAGAVI

ಬಿಮ್ಸ್ ಸಿಬ್ಬಂದಿಗೆ ಕಚ್ಚಿದ ರೋಗಿ…ಕುಟುಂಬಸ್ಥರಿಂದ ಸಿಬ್ಬಂದಿ ಮೇಲೆ ಹಲ್ಲೆ!!!

Share

ಬೆಳಗಾವಿ ಬಿಮ್ಸ್ ಆಸ್ಪತ್ರೆಯಲ್ಲಿ ಮಾನಸಿಕ ರೋಗಿಯೊಬ್ಬಳು ಕರ್ತವ್ಯದಲ್ಲಿದ್ದ ನರ್ಸಿಂಗ್ ಆಫೀಸರ್’ನ್ನ ಕಚ್ಚಿದ್ದು, ಕುಟುಂಬಸ್ಥರು ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ ಪರಿಣಾಮ ಸಿಬ್ಬಂದಿ ಗಾಯಗೊಂಡಿದ್ದಾರೆ. ಈ ಘಟನೆಯನ್ನು ಖಂಡಿಸಿ ರಕ್ಷಣೆಗಾಗಿ ಆಗ್ರಹಿಸಿ ಸಿಬ್ಬಂದಿಗಳು ಇಂದು ಬಿಮ್ಸ್ ಎದುರು ಪ್ರತಿಭಟನೆಯನ್ನು ನಡೆಸಿದರು.

ಸಿಬ್ಬಂದಿ ಮೇಲೆ ನಡೆಸಿದ ಹಲ್ಲೆಯನ್ನು ಖಂಡಿಸಿ ಹಲ್ಲೆಕೋರರ ವಿರುದ್ಧ ಕ್ರಮಕ್ಕಾಗ್ರಹಿಸಿ ಇಂದು ಬೆಳಗಾವಿ ಬಿಮ್ಸ್ ಎದುರು ನರ್ಸಿಂಗ್ ಸಿಬ್ಬಂದಿಗಳು ಪ್ರತಿಭಟನೆಯನ್ನು ನಡೆಸಿದರು.

ಬೆಳಗಾವಿಯ ಬಿಮ್ಸ್ ಆಸ್ಪತ್ರೆಯಲ್ಲಿ ನಿನ್ನೆ ಸಂಜೆ ಭೀಕರ ಘಟನೆಯೊಂದು ಜರುಗಿದೆ. ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ದಾಖಲಾಗಿದ್ದ ಮಾನಸಿಕ ರೋಗಿ ಯುವತಿಯೊಬ್ಬಳು ನೀರು ತರುವ ವಿಚಾರದಲ್ಲಿ ಗಲಾಟೆ ತೆಗೆದು, ಕರ್ತವ್ಯದಲ್ಲಿದ್ದ ನರ್ಸಿಂಗ್ ಆಫೀಸರ್ ಅವರ ಕೈಗೆ ಕಚ್ಚಿದ್ದಾಳೆ. ಈ ವೇಳೆ ಯುವತಿಯ ಕುಟುಂಬಸ್ಥರು ಅಮಾನವೀಯವಾಗಿ ನಡೆದುಕೊಂಡು, ನರ್ಸಿಂಗ್ ಆಫೀಸರ್ ಬಸವರಾಜ್ ಕಬಾಡಗಿ ಅವರ ಮೇಲೆ ಗುಂಪು ಹಲ್ಲೆ ನಡೆಸಿದ್ದಾರೆ. ಹಲ್ಲೆಯಿಂದಾಗಿ ಬಸವರಾಜ್ ಗಂಭೀರವಾಗಿ ಗಾಯಗೊಂಡಿದ್ದಾರೆ.

350ಕ್ಕೂ ಹೆಚ್ಚು ವೈದ್ಯಕೀಯ ಸಿಬ್ಬಂದಿಗಳಿದ್ದು, ಹಗಲು ರಾತ್ರಿ ರೋಗಿಗಳಿಗೆ ಪ್ರಾಮಾಣಿಕ ಸೇವೆ ಸಲ್ಲಿಸಲಾಗುತ್ತಿದೆ. ಅದರೇ, ನರ್ಸಿಂಗ್ ಆಫೀಸರ್ ಬಸವರಾಜ್ ಕಬಾಡಗಿ ಎಂಬಾತರ ಮೇಲೆ ಗುಂಪು ಹಲ್ಲೆ ನಡೆಸಲಾಗಿದ್ದು, ಗಂಭೀರವಾಗಿ ಗಾಯಗೊಂಡಿದ್ದಾರೆ. ಹಲ್ಲೆ ನಡೆಸಿದವರ ವಿರುದ್ಧ ಬಿಮ್ಸ್ ವಿರುದ್ಧ ದೂರು ಸಲ್ಲಿಸಬೇಕೆಂದು ಆಗ್ರಹಿಸಿ ಪ್ರತಿಭಟನೆಯನ್ನು ನಡೆಸುತ್ತಿದ್ದೇವೆ. ಸೇವೆ ಸಲ್ಲಿಸುವವರ ಮೇಲೆ ಹಲ್ಲೆ ನಡೆಸಿದರೇ, ಸೇವೆ ಸಲ್ಲಿಸುವುದಾದರೂ ಹೇಗೆ? ಇಲ್ಲಿರುವ ಸಿಬ್ಬಂದಿಗಳ ಸುರಕ್ಷತೆ ಒದಗಿಸಬೇಕೆಂದು ನರ್ಸಿಂಗ್ ಆಫೀಸರ್ ಖಾದೀರ್ ಮುಜಾವರ ಆಗ್ರಹಿಸಿದರು.

ಸ್ಥಳಕ್ಕಾಗಮಿಸಿದ ಬಿಮ್ಸ್ ನಿರ್ದೇಶಕರಾದ ಅಶೋಕ್’ಕುಮಾರ್ ಶೆಟ್ಟಿ ಅವರು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ಮಾನಸೀಕ ರೋಗಿ ಯುವತಿ ಚಿಕಿತ್ಸೆಗೆ ದಾಖಲಾಗಿದ್ದಾಳೆ. ಕುಡಿಯುವ ನೀರಿಗಾಗಿ ಇದ್ದ ವ್ಯವಸ್ಥೆ ಬಿಟ್ಟು ಬೇರೆ ವಾರ್ಡಿಗೆ ಬಂದಾಗ ಅಲ್ಲಿದ್ದ ಸಿಬ್ಬಂದಿ ನೀನು ನಿನ್ನ ವಾರ್ಡ್ ಬಿಟ್ಟು ಇಲ್ಲಿಗೇಕೆ ನೀರು ತರಲು ಬಂದೆ ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ಅವಾಚ್ಯ ಶಬ್ದ ಬಳಸಿ ಆ ಯುವತಿ ಸಿಬ್ಬಂದಿಯನ್ನು ನಿಂದಿಸಿದ್ದಾಳೆ. ಇದಕ್ಕೆ ಸಿಬ್ಬಂದಿ ಆಕೆಯ ಕೈ ಹಿಡಿದು ಇಷ್ಟು ಚಿಕ್ಕವಳಾಗಿ ಇಂತಹ ಮಾತು ಆಡಿದ್ದೇಕೆ ಎಂದು ಕೇಳಿದ್ದಾರೆ. ಇದಕ್ಕೆ ಕುಪಿತಗೊಂಡ ಯುವತಿ ನರ್ಸಿಂಗ್ ಆಫೀಸರ್ ಕೈಗೆ ಕಚ್ಚಿದ್ದಾಳೆ. ಯುವತಿಯ ಮನೆಯವರು ಸಿಬ್ಬಂದಿ ಹೊಡೆದಿದ್ದಾರೆಂದು ಆರೋಪಿಸಿ ಹಲ್ಲೆ ನಡೆಸಿದ್ದಾರೆ. ಹಲ್ಲೆಗೊಳಗಾದ ನರ್ಸಿಂಗ್ ಆಫೀಸರನನ್ನು ಚಿಕಿತ್ಸೆ ನೀಡಲಾಗುತ್ತಿದೆ. ಈಗಾಗಲೇ ಬಿಮ್ಸ್ ಎಪಿಎಂಸಿ ಪೊಲೀಸರಲ್ಲಿ ದೂರು ನೀಡಿದೆ. ಕೂಡಲೇ ಭೇಟಿ ನೀಡಿ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಈಗಾಗಲೇ ನಾವು ಡಿಸಿ ಮತ್ತು ಪೊಲೀಸ್ ಕಮಿಷ್ನರ್’ಗೆ ರಕ್ಷಣೆಗೆ ಆಗ್ರಹಿಸಿ ಪತ್ರ ಬರೆಯಲಾಗುತ್ತಿದೆ. ಇಂತಹ ಅಹಿತಕರ ಘಟನೆ ನಡೆಯಬಾರದಿತ್ತು. ಪೊಲೀಸ್ ಈ ಕುರಿತು ತನಿಖೆ ನಡೆಸಿ ಕ್ರಮಕೈಗೊಳ್ಳಲಿದೆ. ಇನ್ನು ನಮ್ಮದು ತುರ್ತು ಸೇವೆಯಾಗಿದ್ದ ಹಿನ್ನೆಲೆ ಪ್ರತಿಭಟನೆಗೆ ಅವಕಾಶವಿಲ್ಲ. ಈ ಹಿನ್ನೆಲೆ ಡಿಸಿ ಮತ್ತು ಕಮಿಷ್ನರ್’ಗೆ ರಕ್ಷಣೆ ಕೇಳಿ ಪತ್ರ ಬರೆಯಲಾಗುವುದು ಎಂದರು. ಬೈಟ್

ನಿರ್ದೇಶಕರು ದೂರು ದಾಖಲಿಸುವ ಭರವಸೆ ನೀಡಿದ ಹಿನ್ನೆಲೆ ಸದ್ಯಕ್ಕೆ ನರ್ಸಿಂಗ್ ಸಿಬ್ಬಂದಿಗಳು ತಮ್ಮ ಪ್ರತಿಭಟನೆಯನ್ನು ತಾತ್ಕಾಲಿಕವಾಗಿ ಹಿಂಪಡೆದಿದ್ದು, ಒಂದು ವೇಳೆ ಕ್ರಮಕೈಗೊಳ್ಳದಿದ್ದರೇ ಮತ್ತೇ ಉಗ್ರ ಪ್ರತಿಭಟನೆ ನಡೆಸುವ ಎಚ್ಚರಿಕೆಯನ್ನು ನೀಡಿದ್ದಾರೆ.

Tags:

error: Content is protected !!