ಬೆಳಗಾವಿಯ ಅನಗೋಳ ಮುಸ್ಲಿಂ ಗಲ್ಲಿಯ ರಹಿವಾಸಿ ಶ್ರೀಕಾಂತ್ ಯಲ್ಲಪ್ಪ ಅನಗೋಳಕರ (57) ಅವರು ಅಲ್ಪಕಾಲದ ಅನಾರೋಗ್ಯದಿಂದ ನಿಧನರಾದರು.

ಮೃತರು ತಾಯಿ, ಮೂವರು ಸಹೋದರರು, ಪತ್ನಿ, ಇಬ್ಬರು ಸುಪುತ್ರಿಯರು, ಅಳಿಯಂದಿರು, ಮೊಮ್ಮಕ್ಕಳು ಸೇರಿದಂತೆ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.
ಸೋಮವಾರ ಬೆಳಿಗ್ಗೆ 8 ಗಂಟೆಗೆ ಅನಗೋಳ ಸ್ಮಶಾನದಲ್ಲಿ ಅಸ್ಥಿ ವಿಸರ್ಜನೆ ನಡೆಯಲಿದೆ.
