ಮಾಜಿ ಡಿಸಿಎಂ ಲಕ್ಷ್ಮಣ್ ಸವದಿ ಇವರ 66ನೇ ಜನುಮದಿನದಂದು ಅನಾಪುರದಲ್ಲಿ ಹಮ್ಮಿಕೊಂಡ ಅಖಿಲ ಭಾರತೀಯ ಎ ಗ್ರೇಡ್ ಪುರುಷರ ಕಬ್ಬಡ್ಡಿ ಸ್ಪರ್ಧೆಯಲ್ಲಿ ಬೆಳಗಾವಿಯ ಪ್ರಣಯ ಪೂಜಾರಿ ತಂಡ ಮಹಾರಾಷ್ಟ್ರದ ಬಾರಾಮತಿ ಅನಿಕೆತನ ಮುಡಿಶನ್ ಇವರನ್ನು ನಾಲ್ಕು ಅಂಕಗಳಿಂದ ಸೋಲಿಸಿ, ಬೆಳಗಾವಿ ತಂಡ ಪ್ರಥಮ ಸ್ಥಾನ ಪಡೆದುಕೊಂಡಿದೆ.
ಐನಾಪುರದ ಸರ್ಕಾರಿ ಕನ್ನಡ ಶಾಲೆಯ ಆವರಣದಲ್ಲಿ ದಿನಾಂಕ 15 ಮತ್ತು 16ರಂದು ಜರುಗಿದ ಕಬ್ಬಡ್ಡಿ ಸ್ಪರ್ಧೆ ಜರುಗಿತು.

ಸ್ಪರ್ಧೆಯ ಸಂಯೋಜಕ ಲಕ್ಷ್ಮಣ್ ಸವದಿ ಇವರು ಸುಪುತ್ರ ಚಿದಾನಂದ ಸವದಿ ಇವರು ಮಾತನಾಡಿ ಗಂಡು ಮೆಟ್ಟಿನ ನಾಡು, ಕಬ್ಬಡ್ಡಿಯ ತವರೂರು ಆದ ಕಾಗವಾಡ ತಾಲೂಕಿನ ಐನಾಪೂರ ಪಟ್ಟಣದ ಕ್ರೀಡಾಭಿಮಾನಿಗಳ ಉತ್ಸಾಹ, ಅಭಿಮಾನ ಕಂಡು ಖುಷಿಯಾಗಿದೆ, ನಿಮ್ಮೆಲ್ಲರ ಪ್ರೀತಿ, ಅಭಿಮಾನ, ಆಶೀರ್ವಾದ ಹೀಗೆ ನಮ್ಮ ಮೇಲೆ ಇರಲಿ ಎಂದು ಬಹುಮಾನ ವಿತರಿಸಿ ಹೇಳಿದರು.
ಪ್ರಥಮ ಸ್ಥಾನಕ್ಕಾಗಿ ಪ್ರಣಯ ಪೂಜಾರಿಫೌಂಡೇಶನ್ ಬೆಳಗಾವಿ ತಂಡ ಹಾಗೂ ಅನಿಕೇತನ ಫೌಂಡೇಶನ್ ಬಾರಾವತಿ ತಂಡಗಳ ನಡುವಿನ ಭಾರಿ ಸೆನಸಾಟದಲ್ಲಿ ಕೊನೆ ಘಟ್ಟದಲ್ಲಿ ೪ ಅಂಕಗಳಿಂದ ಬೆಳಗಾವಿ ತಂಡ ಪ್ರಥಮ ಸ್ಥಾನ ಪಡೆದುಕೊಂಡು ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ.
ಕಬಡ್ಡಿ ಲೀಗ್ ಪಂದ್ಯಾವಳಿಗಳು ನಡೆಯುತ್ತಿದ್ದು, ಸೋಮವಾರ ತಡ ರಾತ್ರಿ ನಡೆದ ಫೈನಲ್ನಲ್ಲಿ ಬೆಳಗಾವಿಯ ಪ್ರಣಯ ಪೂಜಾರಿ ಫೌಂಡೇಶನ ತಂಡವು ೪೨ ಅನಿಕೇತನ ಪಾಟೀಲ ಫೌಂಡೇಶನ್ ತಂಡ ೩೮ ಅಂಕಗಳನ್ನು ಪಡೆಯುವ ಮೂಲಕ ೪ ಅಂಕಗಳಿಂದ ಬೆಳಗಾವಿ ತಂಡ ಗೆಲುವು ಸಾಧಿಸಿ. ಬಾರಾಮತಿಯ ತಂಡದ ಪ್ರಶಸ್ತಿ ಕನಸು ನುಚ್ಚು ನುರು ಮಾಡಿತು.
ಬೆಳಗಾವಿಯ ಪ್ರಣಯ ಪಾಟೀಲ ಫೌಂಡೇಶನ್ ತಂಡವು ಪ್ರಥಮ ಸ್ಥಾನ ಗಳಿಸಿ ೧ ಲಕ್ಷ ರೂ ನಗದು ಹಾಗೂ ಪಾರಿತೋಷಕವನ್ನು ಮುಡಿಗೇರಿಸಿಕೊಂಡಿದೆ. ಮಹಾರಾಷ್ಟçದ ಬಾರಾಮತಿ ಅನಿಕೇತನ ಪಾಟೀಲ ಫೌಂಡೇಶನ್ ತಂಡ ದ್ವೀತಿಯ ಸ್ಥಾನ ಪಡೆದು ೭೫ ಸಾವಿರ ರೂ ಹಾಗೂ ಟ್ರಾಫಿ ಪಡೆಯಿತು. ತೃತಿಯ ಸ್ಥಾನ ಬಾರಾಮತಿಯ ಅಕೆಡೆಮ್ ತಂಡ ಪಡೆದು ೫೦ ಸಾವಿರ ರೂ ಪಾರಿತೋಷಕ ಪಡೆದರೆ ರೈಸಿಂಗ್ ಬುಲ್ಸ್ ಬೆಂಗಳುರು ಚತುರ್ಥ ಸ್ಥಾನಕ್ಕೆ ತೃಪ್ತಿ ಪಡೆದು ೨೫ ಸಾವಿರ ರೂ ಬಹುಮಾನ ತನ್ನದಾಗಿಸಿಕೊಂಡಿತು.
ಈ ಕಬಡ್ಡಿ ಪಂದ್ಯಾಟಗಳ ರೂವಾರಿ ಯುವ ನಾಯಕ ಚಿದಾನಂದ ಸವದಿ ಬಹುಮಾನ ವಿತರಿಸಿದರು.
ಇಂದು ಆಡಂಬರದ ಹಲವು ಕ್ರೀಡೆಗಳ ನಡುವೆ ಗ್ರಾಮೀಣ ಸೊಗಡಿನ ಕಬಡ್ಡಿ ಮನಸ್ಸಿಗೆ ಮುದ ನೀಡುತ್ತದೆ ಎಂದು ಹೇಳಿದರು. ಸರಕಾರ ಯಾವುದೇ ಸೌಲಭ್ಯಗಳನ್ನು ಪಡೆಯದೆ ಗ್ರಾಮೀಣ ಭಾಗದ ಐನಾಪುರದಂಥ ಗ್ರಾಮದಲ್ಲಿ ಎರಡು ದಿನಗಳವರೆಗೆ ಇಂಥ ದೊಡ್ಡ ಪ್ರಮಾಣದ ಕಬಡ್ಡಿಯನ್ನು ಏರ್ಪಡಿಸಿದ ಲಕ್ಷö್ಮಣ ಸವದಿ ಅಭಿಮಾನಿಗಳ ತಂಡಕ್ಕೆ ಧನ್ಯವಾದಗಳನ್ನು ತಿಳಿಸುತ್ತ, ಗ್ರಾಮೀಣ ಭಾಗದಲ್ಲಿ ಇಷ್ಟೊಂದು ಪ್ರಮಾಣದಲ್ಲಿ ಅಚ್ಚು ಕಟ್ಟಾಗಿ ಫ್ರೋ ಕಬಡ್ಡಿಗಿಂತಲೂ ವ್ಯವಸ್ಥಿತವಾಗಿರುವದು ವಿಶೇಷ, ಶ್ರೀಮಂತ ಮಕ್ಕಳಿಗಿಂತ ಗ್ರಾಮೀಣ ಭಾಗದ ಬಡ ಮಕ್ಕಳಲ್ಲಿ ಹೆಚ್ಚಿನ ಪ್ರತಿಭೆ ಇರುತ್ತದೆ. ಕಬಡ್ಡಿ ಖೋಖೋ, ಕುಸ್ತಿಗಳಿಗೆ ಸರಕಾರ ಹೆಚ್ಚಿನ ಮಹತ್ವ ನೀಡಿ ಪ್ರತಿಭೆ ಇರುವ ಕ್ರೀಡಾಪಟುಗಳನ್ನು ಸರಕಾರ ಗುರುತಿಸಿ ನೌಕರಿ ನೀಡಬೇಕೆಂದು ಚಿದಾನಂದ ಸವದಿ ನುಡಿದರು.
ರಾಜ್ಯ, ಅಂತರಾಷ್ಟೀಯ ಹಾಗೂ ಪ್ರೋ ಕಬ್ಬಡ್ಡಿ ಕ್ರೀಡಾ ಪಟುಗಳು ವಹಿಸಿದ್ದರು.ಅತ್ತೂತ್ತಮ ದಾಳಿಗಾರ ಬಾರಾಮತಿಯ ವಿರೇಂದ್ರ, ಅತ್ತೆöÊತ್ತಮ್ ಹಿಡಿತಗಾರರೈಸಿಂಗ್ ಬುಲ್ ಬೆಂಗಳೂರಿನ ರಜತ್,ಸರ್ವೋತ್ತಮ ಆಟಗಾರಪ್ರಣಯ ಪೂಜಾರಿ ಫೌಂಡೇಶನದ ಗಣೇಶನಿಗೆ ಪಾರಿತೋಷತ್ ಚಿದಾನಂದ ಸವದಿ, ಶಿವಕುಮಾರ ಸವದಿ, ಪ್ರವೀಣ ಗಾಣಿಗೇರ ನೀಡಿ ಗೌರವಿಸಿದರು.
ಈ ವೇಳೆ ಯುವ ನಾಯಕ ಹಾಗೂ ಉದ್ಯಮಿ ಶಿವಕುಮಾರ ಸವದಿ, ಪಂದ್ಯಾಟಗಳ ರೂವಾರಿ ಪ್ರವೀಣ ಗಾಣಿಗೇರ ಪಟ್ಟಣ ಪಂಚಾಯತ್ ಸದಸ್ಯರಾದ ಪ್ರವೀಣ ಗಾಣಿಗೇರ, ಅರುಣ ಗಾಣಿಗೇರ, ಸಂಜಯ ಕುಚನೂರೆ, ಸಂಜಯ ಭಿರಡಿ, ಮುಖಂಡರಾದ ಚಮನರಾವ್ ಪಾಟೀಲ,ವಿನಾಯಕ ಬಾಗಡಿ, ವಿಶಾಲ ನಿಂಬಾಳ, ಸಂತೋಷ ಸಾವಡಕರ, ರಮೇಶ ಚೌಗಲಾ, ಅಪ್ಪು ನ್ಯಾಮಗೌಡರ,ಯಶವಂತ ಪಾಟೀಲ, ಸತೀಶ ಸಪರಾಜ ,ಗುಂಡು ಖವಟಗೊಪ್ಪ,ಶಿವಾನಂದ ಗೊಲಭಾಂವಿ, ಪ್ಪು ಪೂಜಾರಿ, ಸುರೇಶ ವಾಘಮೊಡೆ,ಜ್ಯೋತಿಕುಮಾರ ಪಾಟೀಲ, ವಿಶ್ವನಾಥ ಪಾಟೀಲ, ಮಹಾಂತೇಶ ಠಕ್ಕನ್ನವರ, ಸಚಿನ ಚೌಗಲಾ, ನವೀಣ ಗಾಣಿಗೇರ, ಪ್ರಕಾಶ ಗಾಣಿಗೇರ, ಬಾಹುಬಲಿ ಕುಸನಾಳೆ, ಗುಂಡು ಶೇಡಶಾಳೆ, ಸಂತೋಷ ಪಾಟೀಲ, ಸೇರಿದಂತೆ ಅನೇಕರು ಇದ್ದರು.
