Vijaypura

ಕಾಲುವೆಯಲ್ಲಿ ಈಜಲು ಹೋಗಿದ್ದ ಯುವಕ ಶವವಾಗಿ ಪತ್ತೆ

Share

ಕಾಲುವೆಯಲ್ಲಿ ಈಜಲು ಹೋಗಿದ್ದ ಯುವಕ ಶವವಾಗಿ ಪತ್ತೆಯಾಗಿರುವ ಘಟನೆ ವಿಜಯಪುರ ಜಿಲ್ಲೆಯ ತಾಳಿಕೋಟೆ ತಾಲೂಕಿನ ವನಹಳ್ಳಿ ಗ್ರಾಮದಲ್ಲಿ ನಡೆದಿದೆ. ಶಿವುಕುಮಾರ ಚೆಟೇರಿ(24) ನೀರು ಪಾಲಾದ ಯುವಕ. ನೀರಿನ ರಭಸಕ್ಕೆ ಶಿವಕುಮಾರ್ ಕೊಚ್ಚಿಹೋಗಿದ್ದಾನೆ. ಮೃತ ಯುವಕನ ಶವ ಪೊಲೀಸರು ಹೊರಕ್ಕೆ ತೆಗೆದಿದ್ದಾರೆ. ಇಬ್ಬರು ಸೇರಿ ಕಾಲುವೆಯಲ್ಲಿ ಈಜಲು ಹೋಗಿದ್ದರು. ಓರ್ವ ಈಜಿ ಪೈಪ್ ಸಹಾಯದಿಂದ ಬಚಾವ್ ಆಗಿದ್ದಾನೆ. ಶಿವುಕುಮಾರ ನೀರಿನ ರಭಸಕ್ಕೆ ಕೊಚ್ಚಿಹೋಗಿದ್ದಾನೆ. ಈ ವೇಳೆ ಪೊಲೀಸರು ಕಾಲುವೆ ನೀರು ಕಡಿಮೆ ಮಾಡಿ ಶವ ಪತ್ತೆ ಹಚ್ಚಿದ್ದಾರೆ. ತಾಳಿಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Tags:

error: Content is protected !!