Vijaypura

ಯತ್ನಾಳ್ ಕಿಡಿ: “ವಿಜಯೇಂದ್ರ ಶಿಖಾರಿಪುರ ನೋಡಿಕೊಳ್ಳಲಿ, ರಾಜ್ಯದಲ್ಲಿ ಜೆಸಿಬಿ ಸರ್ಕಾರ ಬರಲಿದೆ!”

Share

ವಿಜಯಪುರದಲ್ಲಿಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಹಾಗೂ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಅಕ್ಷರಶಃ ಗುಡುಗಿದ್ದಾರೆ. “ನಾನು ಸಿಎಂ ಆಗುವುದು ಖಚಿತ” ಎಂದು ಭವಿಷ್ಯ ನುಡಿದ ಯತ್ನಾಳ್, ವಿಜಯೇಂದ್ರ ಅವರಿಗೆ ರಾಜೀನಾಮೆ ನೀಡುವಂತೆ ಸಲಹೆ ನೀಡಿದ್ದಾರೆ.

ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರ ಹೇಳಿಕೆಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಯತ್ನಾಳ್, “ವಿಜಯೇಂದ್ರ ಮೊದಲು ತಮ್ಮ ಶಿಖಾರಿಪುರ ಕ್ಷೇತ್ರವನ್ನು ಗಟ್ಟಿ ಮಾಡಿಕೊಳ್ಳಲಿ, ಅಲ್ಲಿ ಅವರ ಕುರ್ಚಿ ಅಲುಗಾಡುತ್ತಿದೆ. ವಿಜಯಪುರ, ಬಾಗಲಕೋಟೆ ಬಗ್ಗೆ ಅವರಿಗೆ ಚಿಂತೆ ಬೇಡ,” ಎಂದು ವ್ಯಂಗ್ಯವಾಡಿದರು. ಅಧಿವೇಶನದಲ್ಲಿ ಹಗರಣಗಳ ಬಗ್ಗೆ ಮಾತನಾಡದ ವಿಜಯೇಂದ್ರ ರಾಜ್ಯಾಧ್ಯಕ್ಷರಾಗಿ ವಿಫಲರಾಗಿದ್ದಾರೆ. ವಿರೋಧ ಪಕ್ಷದ ನಾಯಕರಾಗಿ ಆರ್. ಅಶೋಕ ಹಾಗೂ ಸುನೀಲ್ ಕುಮಾರ್ ಅಟ್ಯಾಕ್ ಮಾಡಿದರೆ, ವಿಜಯೇಂದ್ರ ಮಾತ್ರ ಮೌನವಾಗಿದ್ದರು. ಈ ರೀತಿ ಜವಾಬ್ದಾರಿಯಲ್ಲಿ ವಿಫಲರಾದವರು ಮನೆಯಲ್ಲಿ ಇರುವುದು ಒಳಿತು ಎಂದು ಕುಟುಕಿದರು. ನವೆಂಬರ್‌ನಲ್ಲಿ ವಿಜಯೇಂದ್ರ ಬದಲಾವಣೆ ಕುರಿತು ಪ್ರತಿಕ್ರಿಯಿಸಿದ ಅವರು, ಯಾವುದೇ ಕ್ಷೇತ್ರದಲ್ಲಿ ಸಕ್ಸಸ್ ಕಾಣದ ವಿಜಯೇಂದ್ರ ರಾಜೀನಾಮೆ ನೀಡುವುದೇ ಏಕೈಕ ಪರಿಹಾರ ಎಂದರು.

ಇದೇ ವೇಳೆ ಕಾಂಗ್ರೆಸ್ ಸರ್ಕಾರದ ಒಳಜಗಳದ ಬಗ್ಗೆಯೂ ಮಾತನಾಡಿದ ಯತ್ನಾಳ್, ಡಿ.ಕೆ. ಶಿವಕುಮಾರ್ ಅವರಿಗೆ ಇದು ಸಿಎಂ ಆಗಲು ಕೊನೆಯ ಅವಕಾಶ. ಆದರೆ ಸಿದ್ದರಾಮಯ್ಯ ಅವರಿಗೆ ಶಾಸಕರ ಬಲವಿದ್ದು, ಕುರ್ಚಿ ಬಿಡುತ್ತಿಲ್ಲ. ಈ ಜಗಳದಿಂದಾಗಿ ವಿಧಾನಸಭೆ ವಿಸರ್ಜನೆಯಾದರೂ ಅಚ್ಚರಿಯಿಲ್ಲ ಎಂದು ಭವಿಷ್ಯ ನುಡಿದರು. ಇನ್ನು ಸಿಎಂ ಪುತ್ರ ಯತೀಂದ್ರ ಹಾಗೂ ವಿಜಯೇಂದ್ರ ನಡುವೆ ವಸೂಲಿ ತರಬೇತಿ ನಡೆಯುತ್ತಿದೆ ಎಂದು ಗಂಭೀರ ಆರೋಪ ಮಾಡಿದರು. “2028ಕ್ಕೆ ಕರ್ನಾಟಕದ ಮುಖ್ಯಮಂತ್ರಿಯಾಗಿ ನಾನು ಪ್ರಮಾಣ ವಚನ ಸ್ವೀಕರಿಸುವುದು ಖಚಿತ. ರಾಜ್ಯದ ಅನ್ಯಾಯ ತಡೆಯಲು ‘ಜೆಸಿಬಿ’ ಸರ್ಕಾರವೇ ಬರಲಿದೆ,” ಎಂದು ಪರೋಕ್ಷವಾಗಿ ಹೊಸ ರಾಜಕೀಯ ದಿಕ್ಸೂಚಿಯನ್ನು ಹರಿಸಿದರು.

 

Tags:

error: Content is protected !!