ದಾರಿ ಬಿಡುವ ವಿಚಾರಕ್ಕೆ ಬಸ್ ಹಾಗೂ ಆಟೋ ಚಾಲಕನ ನಡುವೆ, ನಡು ರಸ್ತೆಯಲ್ಲೇ ಗಲಾಟೆ ನಡೆದು ಮಾರಾಮಾರಿಗೆ ತಿರುಗಿದ ಘಟನೆ ನಗರದಲ್ಲಿ ನಡೆದಿದೆ.

ಚೆನ್ನಮ್ಮ ವೃತ್ತದ ನೂರಾಣಿ ರಸ್ತೆಯ ಆಶ್ರಯ ಲಾಡ್ಜ್ ಸಮೀಪ ಎದುರುಬದುರಾಗಿ ನಿಂತ ಎರಡು ವಾಹನಗಳ ನಡುವೆ ಮಾತಿನ ಚಕಮಕಿ ಉಂಟಾಗಿ ಏಕಾಏಕಿ ಹೊಡೆದಾಟ ನಡೆದಿದ. ಕೆಎ–63 ಎಫ್ 0046 ಸಂಖ್ಯೆಯ ಸಾರಿಗೆ ಬಸ್ ಚಾಲಕನು ಆಟೋ ಚಾಲಕನಿಗೆ ಹಿಗ್ಗಾಮುಗ್ಗಾ ಥಳಿಸಿದ್ದು, ಆಟೋ ಚಾಲಕನು ಕೂಡ ಹಲ್ಲೆಗೆ ಮುಂದಾಗಿದ್ದಾನೆ, ಗಲಾಟೆಯ ವಿಡಿಯೋ ಸಾರ್ವಜನಿಕರು ತಮ್ಮ ಮೊಬೈಲ್ ನಲ್ಲಿ ಸೆರೆಹಿಡಿದಿದ್ದಾರೆ.
ಗಲಾಟೆ ತೀವ್ರವಾಗುತ್ತಿದ್ದಂತೆ ಸ್ಥಳೀಯರು ಮಧ್ಯಪ್ರವೇಶಿಸಿ ಇಬ್ಬರನ್ನು ಬೇರ್ಪಡಿಸಲು ಹರಸಾಹಸಪಟ್ಟರು. ಈ ಘಟನೆ ವೇಳೆ ಕೆಲಕಾಲ ಸಂಚಾರ ಅಸ್ತವ್ಯಸ್ತಗೊಂಡ ಸ್ಥಿತಿ ನಿರ್ಮಾಣವಾಗಿತ್ತು. ಇಷ್ಟೆಲ್ಲ ಗಲಾಟೆ ನಡೆದರೂ ಸ್ಥಳಕ್ಕೆ ಯಾವ ಸಂಚಾರಿ ಪೊಲೀಸರ ಆಗಮಿಸಿಲ್ಲ ಎಂಬ ಆರೋಪ ಕೇಳಿಬಂದಿದೆ.
ಘಟನೆ ಹುಬ್ಬಳ್ಳಿ ಉಪನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
