Chikkodi

ಹುಕ್ಕೇರಿ ಸಾರಥ್ಯದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿ ಚಾಲನೆ ಎರಡು ಕಿಲೋಮೀಟರ್ ರಸ್ತೆಗೆ ಎಪ್ಪತ್ತು ಲಕ್ಷ ಅನುದಾನ

Share

ಚಿಕ್ಕೋಡಿ:ಶಾಸಕ ಗಣೇಶ ಹುಕ್ಕೇರಿ ಹಾಗೂ ಎಂಎಲ್ಸಿ ಪ್ರಕಾಶ ಹುಕ್ಕೇರಿ ಅವರ ಪ್ರಯತ್ನದಿಂದ 70 ಲಕ್ಷ ರೂಪಾಯಿಗಳ ಅನುದಾನದಲ್ಲಿ ಚಿಕ್ಕೋಡಿ ತಾಲ್ಲೂಕಿನ ಮಾಂಜರಿ – ಯಡೂರವಾಡಿ ಗ್ರಾಮದ ರಸ್ತೆ ಅಭಿವೃಧಿ ಕಾಮಗಾರಿಗೆ ಚಾಲನೆ ನೀಡಲಾಯಿತು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ ಸದಸ್ಯರು ಹಾಗೂ ಹಿರಿಯ ಮುಖಂಡರಾದ ಪಾಂಡುರಂಗ ಮಾನೆ ಮಾತನಾಡಿ ಮಾಂಜರಿ ಮತ್ತು ಯಡೂರವಾಡಿ ನಡುವಿನ ರಸ್ತೆ ಕೆಟ್ಟ ಸ್ಥಿತಿಯಲ್ಲಿತ್ತು. ಈ ರಸ್ತೆಯು ವಿದ್ಯಾರ್ಥಿಗಳು ಮತ್ತು ಪ್ರದೇಶದ ಕಾರ್ಮಿಕ ವರ್ಗಕ್ಕೆ ಅನಾನುಕೂಲವಾಗಿತ್ತು. ಈ ರಸ್ತೆಯನ್ನು ಸುಧಾರಣಾ ಕಾಮಗಾರಿ ಕೈಗೊಳ್ಳಬೇಕೆಂದು ಸ್ಥಳೀಯ ನಾಗರಿಕರ ಬೇಡಿಕೆಯನ್ನು ಗಮನಿಸಿದ ಎಂಎಲ್ಸಿ ಪ್ರಕಾಶ ಹುಕ್ಕೇರಿ ಮತ್ತು ಶಾಸಕ ಗಣೇಶ ಹುಕ್ಕೇರಿ ಅವರು ಎರಡು ಕಿಲೋಮೀಟರ್ ರಸ್ತೆಗೆ 70 ಲಕ್ಷ ರೂ.ಗಳನ್ನು ಮಂಜೂರು ಮಾಡಿದ್ದಾರೆ..ಇಂದು ಕಾಮಗಾರಿಯನ್ನು ಚಾಲನೆ ನೀಡಲಾಗಿದೆ ಎಂದು ಹೇಳಿದರು.
ಪ್ರಾರಂಭದಲ್ಲಿ ಯಡೂರವಾಡಿ ಮತ್ತು ಮಾಂಜರಿ ಗ್ರಾಮದ ಗಣ್ಯರು ಹಾಗೂ ಮುಖಂಡರು ಕಾಮಗಾರಿಗೆ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ, ಡಾ.ರಾಜು ಚವ್ಹಾಣ ಹಾಗೂ ಅಜೀತ ಕಿಲೇದಾರಯವರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿ ಎಂಎಲ್ಸಿ ಪ್ರಕಾಶ ಹುಕ್ಕೇರಿ ಮತ್ತು ಶಾಸಕ ಗಣೇಶ ಹುಕ್ಕೇರಿ ಅವರ ಪ್ರಯತ್ನದಿಂದಾಗಿ ಈ ಪ್ರದೇಶದ ಸುಮಾರು 250 ಎಕರೆ ಸವಳು-ಜವಳು ಯೋಜನೆಯನ್ನು ಜಾರಿಗೆ ತರಲಾಗಿದೆ ಎಂದರು.
ಮಾಂಜರಿ ಮತ್ತು ಯಡೂರವಾಡಿ ಪ್ರದೇಶದ ಜನರ ಪರವಾಗಿ, ಹುಕ್ಕೇರಿ ತಂದೆ-ಮಗನಿಗೆ ಧನ್ಯವಾದಗಳನ್ನು ಅರ್ಪಿಸುತ್ತೇನೆ ಎಂದು ಹೇಳಿದರು.

ಗ್ರಾ.ಪಂ.ಮಾಜಿ ಅಧ್ಯಕ್ಷ ಬಸ್ವಾನಿ ನರವಾಡೆ, ಗ್ರಾ.ಪಂ.ಸದಸ್ಯರಾದ ಪಾಂಡುರಂಗ ಮಾನೆ, ಅಶೋಕ ಹವಳೆ, ಸುಭಾಷ ನರವಾಡೆ, ಅರ್ಜುನ್ ವಾಡ್ಕರ, ಚಂದ್ರಕಾಂತ ಮಿರಾಜೆ, ಪೋಪಟ್ ಲಮಕಾಣೆ, ನಿತಿನ ಮಾಯನ್ನವರ, ಬಾಳಾಸಾಹೇಬ ಧಾಯರಕರ, ಸಂಜಯ ನರವಾಡೆ, ಅಪ್ಪಾಸಾಹೇಬ ಲೋಕುರೆ, ಸಂಜಯ ಕೋಕಾಣೆ, ಧನದಾಜಿ ಭಿಲ್ವಡೆ, ಲಕ್ಷ್ಮಣ ಮಾಯಣ್ಣನವರ, ಸಾವಂತ ಮಿರ್ಜೆ, ಯಡೂರವಾಡಿಯ ವಿಶ್ವನಾಥ ಮಾನೆ, ಡಾ.ರಾಜು ಚವ್ಹಾಣ, ಅಜಿತ ಕಿಲ್ಲೇದಾರ, ಸಂಜು ಪಿರಾಜಿ, ನಿಂಗಪ್ಪ ಪಿರಾಜಿ, ಗಣಪತಿ ಮಾನೆ, ಸುನೀಲ್ ಮಾನೆ, ಬಾಳಕೃಷ್ಣ ಮಾನೆ, ಸಂಜು ಖೋತ ಹಾಗೂ ರೈತರು ಗ್ರಾಮಸ್ಥರು ಉಪಸ್ಥಿತರಿದ್ದರು.

Tags:

error: Content is protected !!