Belagavi

ಬೆಳಗಾವಿ ಪೊಲೀಸ್ ಕೇಂದ್ರಸ್ಥಾನದಲ್ಲಿ ಶ್ರೀ ವೀರಭದ್ರೇಶ್ವರ ಜಾತ್ರಾ ಮಹೋತ್ಸವ ಸಂಪನ್ನ: ವೈಭವದ ರಥೋತ್ಸವಕ್ಕೆ ಸಾಕ್ಷಿಯಾದ ಭಕ್ತಸಾಗರ!

Share

• ಪೊಲೀಸ್ ಕೇಂದ್ರಸ್ಥಾನದಲ್ಲಿ ವೀರಭದ್ರೇಶ್ವರ ಜಾತ್ರಾ ಸಡಗರ
• ರಥೋತ್ಸವಕ್ಕೆ ಚಾಲನೆ ನೀಡಿದ ಪೊಲೀಸ್ ಅಧಿಕಾರಿಗಳು
• ಅಹಹಾ ಸಲ್ಲ ಬಂದ…
• ಮೂರು ದಿನಗಳ ಕಾಲ ಮೊಳಗಿದ ಶಿವನಾಮ ಸ್ಮರಣೆ

ಬೆಳಗಾವಿಯ ಪೊಲೀಸ್ ಹೆಡ್‌ಕ್ವಾರ್ಟರ್ಸ್ ಆವರಣದಲ್ಲಿ ಕಳೆದ ಮೂರು ದಿನಗಳಿಂದ ನಡೆದ ಶ್ರೀ ವೀರಭದ್ರೇಶ್ವರ ಜಾತ್ರಾ ಮಹೋತ್ಸವವು ಅತ್ಯಂತ ವಿಜೃಂಭಣೆಯಿಂದ ಜರುಗಿತು. ಭಕ್ತಿ, ಸಂಸ್ಕೃತಿ ಹಾಗೂ ಪೊಲೀಸ್ ಇಲಾಖೆಯ ಸೌಹಾರ್ದತೆಗೆ ಸಾಕ್ಷಿಯಾದ ಈ ಸಂಭ್ರಮದ ಸಮಗ್ರ ವರದಿ ಇಲ್ಲಿದೆ.
ಬೆಳಗಾವಿಯ ಜಿಲ್ಲಾ ಪೊಲೀಸ್ ಕೇಂದ್ರಸ್ಥಾನದ ಆವರಣದಲ್ಲಿರುವ ಪುರಾತನ ಶ್ರೀ ವೀರಭದ್ರೇಶ್ವರ ದೇವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವವು ಫೆಬ್ರವರಿ 14 ರಿಂದ 16 ರವರೆಗೆ ಅದ್ಧೂರಿಯಾಗಿ ನೆರವೇರಿತು. ಶನಿವಾರ ಮುಂಜಾನೆ ನಾಗನೂರು ರುದ್ರಾಕ್ಷಿಮಠದ ಡಾ. ಅಲ್ಲಮಪ್ರಭು ಮಹಾಸ್ವಾಮಿಗಳ ಅಮೃತ ಹಸ್ತದಿಂದ ಚಾಲನೆ ಪಡೆದ ಈ ಜಾತ್ರೆಯು, ಮಹಾಶಿವರಾತ್ರಿಯ ಪುಣ್ಯಕಾಲದಂದು ಭಕ್ತಿಯ ಪರಾಕಾಷ್ಠೆ ತಲುಪಿತ್ತು. ರವಿವಾರ ಮುಂಜಾನೆ ದೇವರಿಗೆ ವಿಶೇಷ ರುದ್ರಾಭಿಷೇಕ ಜರುಗಿದ ನಂತರ, ವೈಭವದ ಪಲ್ಲಕ್ಕಿ ಮಹೋತ್ಸವವು ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಕಪಿಲೇಶ್ವರ ಮಂದಿರಕ್ಕೆ ತೆರಳಿ ಮರಳಿ ದೇವಸ್ಥಾನಕ್ಕೆ ಬಂದಿತು.
ಜಾತ್ರೆಯ ಪ್ರಮುಖ ಆಕರ್ಷಣೆಯಾದ ರಥೋತ್ಸವಕ್ಕೆ ನಗರ ಪೊಲೀಸ್ ಆಯುಕ್ತರಾದ ಭೂಷಣ್ ಬೋರಸೆ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್ ಅವರು ಚಾಲನೆ ನೀಡಿದರು. ರಥವು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ವೃತ್ತ ಹಾಗೂ ಹಳೆಯ ಪಿ.ಬಿ. ರಸ್ತೆಯ ಮೂಲಕ ಸಾಗಿ ಬರುತ್ತಿದ್ದಂತೆ ಸಾವಿರಾರು ಭಕ್ತರು ಹಣ್ಣು-ಜವನ ಅರ್ಪಿಸಿ ಪುನೀತರಾದರು. ವೀರಗಾಸೆ ತಂಡದ ಒಡಪುಗಳು ಎಲ್ಲರ ಗಮನ ಸೆಳೆದವು. (ಫ್ಲೋ)
ಜಿಲ್ಲಾ ಪೊಲೀಸ್ ಅಧೀಕ್ಷಕರು ಹಾಗೂ ದೇವಸ್ಥಾನದ ಆಡಳಿತ ಮಂಡಳಿಯ ನೇತೃತ್ವದಲ್ಲಿ ನಡೆದ ಈ ಜಾತ್ರೆಯು ಶಿಸ್ತುಬದ್ಧ ಹಾಗೂ ಭಕ್ತಿಪೂರ್ವಕವಾಗಿ ಮುಕ್ತಾಯಗೊಂಡಿತು. ಸೋಮವಾರ ರಾತ್ರಿ ಪೊಲೀಸ್ ಹೆಡ್‌ಕ್ವಾರ್ಟರ್ಸ್‌ನ ವೀರಭದ್ರೇಶ್ವರ ನಾಟ್ಯ ಸಂಘದಿಂದ ಪ್ರದರ್ಶನಗೊಂಡ ‘ರೈತ ನಕ್ಕರೆ ಜಗವೆಲ್ಲಾ ಸಕ್ಕರೆ’ ಎಂಬ ಸಾಮಾಜಿಕ ನಾಟಕವು ಪ್ರೇಕ್ಷಕರ ಮನಸೂರೆಗೊಳ್ಳಲಿದೆ.

Tags:

error: Content is protected !!