Rescue

ಮದುವೆಗೆ ಆಗಮಿಸಿದ್ದ ಮಹಿಳೆ ಕೊಲೆಯ ಶಂಕೆ, ಮಲ್ಪೆ ತಂಡದಿಂದ ಶೋಧ… 30 ಲಕ್ಷದ ಒಡವೆ ಸಮೇತ ನಾಪತ್ತೆಯಾಗಿದ್ದ ಮಹಿಳೆ ಪ್ರಿಯಕರನ ಜೊತೆ ಪ್ರತ್ಯಕ್ಷ!!!

Share

• ನಾಪತ್ತೆಯಾಗಿದ್ದ ಮಹಿಳೆ ಪ್ರಿಯಾಂಕ ಪ್ರಿಯಕರನ ಜೊತೆ ಪತ್ತೆ.
• 30 ಲಕ್ಷದ ಒಡವೆಗಾಗಿ ಕೊಲೆಯ ಶಂಕೆ ಹುಸಿಯಾಯ್ತು.
• ಈಶ್ವರ್ ಮಲ್ಪೆ ತಂಡದಿಂದ ನಡೆದಿತ್ತು ಭರ್ಜರಿ ಶೋಧ.
• ಬೇಲೂರು ಪೊಲೀಸರ ವಶದಲ್ಲಿ ಪ್ರಿಯಾಂಕ-ಡೇವಿಡ್ ಜೋಡಿ.

ರಾಜ್ಯಾದ್ಯಂತ ತೀವ್ರ ಕುತೂಹಲ ಕೆರಳಿಸಿದ್ದ ಕುಣಿಗಲ್ ಮೂಲದ ಮಹಿಳೆ ಪ್ರಿಯಾಂಕ ನಾಪತ್ತೆ ಪ್ರಕರಣಕ್ಕೆ ಈಗ ಬಿಗ್ ಟ್ವಿಸ್ಟ್ ಸಿಕ್ಕಿದೆ. ಕೊಲೆಯಾಗಿರಬಹುದು ಎಂದು ಶಂಕಿಸಲಾಗಿದ್ದ ಮಹಿಳೆ, ಇದೀಗ ಪ್ರಿಯಕರನ ಜೊತೆ ಜೀವಂತವಾಗಿ ಪತ್ತೆಯಾಗಿದ್ದು, ಪೊಲೀಸರ ದಿಕ್ಕೆಡಿಸಿದ್ದ ನಿಗೂಢತೆಗೆ ತೆರೆ ಬಿದ್ದಿದೆ.

ಸುಮಾರು 30 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ ಧರಿಸಿ ಮದುವೆಗೆ ಬಂದಿದ್ದ ಮಹಿಳೆ ನಾಪತ್ತೆಯಾದ ಪ್ರಕರಣ ಸಿನಿಮಾ ಮಾದರಿಯ ತಿರುವು ಪಡೆದುಕೊಂಡಿದೆ. ಚಿಕ್ಕಮಗಳೂರಿನ ಮದುವೆಗೆ ಬಂದಿದ್ದ ಪ್ರಿಯಾಂಕ ಎಂಬಾಕೆ ಹಾಸನ ತಾಲ್ಲೂಕಿನ ಕಲ್ಕೆರೆ ಬಳಿ ಬಟ್ಟೆ, ಚಪ್ಪಲಿ ಹಾಗೂ ವ್ಯಾನಿಟಿ ಬ್ಯಾಗ್ ಬಿಟ್ಟು ನಾಪತ್ತೆಯಾಗಿದ್ದರು. ಮಹಿಳೆಯ ಒಡವೆಗಾಗಿ ಅತ್ಯಾಚಾರ ಎಸಗಿ ಕೊಲೆ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿದ್ದರಿಂದ ಪೊಲೀಸರು ಹೈ ಅಲರ್ಟ್ ಆಗಿದ್ದರು. ಅಗ್ನಿಶಾಮಕ ದಳ ಹಾಗೂ ಖ್ಯಾತ ಮುಳುಗು ತಜ್ಞ ಈಶ್ವರ್ ಮಲ್ಪೆ ತಂಡದಿಂದ ಸ್ಥಳೀಯ ಕೆರೆಯಲ್ಲಿ ದಿನವಿಡೀ ಶೋಧ ಕಾರ್ಯ ನಡೆಸಲಾಗಿತ್ತು, ಡ್ರೋನ್ ಕ್ಯಾಮೆರಾಗಳನ್ನೂ ಬಳಸಲಾಗಿತ್ತು.
ಆದರೆ, ಪೊಲೀಸರ ಎಲ್ಲಾ ತರ್ಕಗಳನ್ನು ಸುಳ್ಳು ಮಾಡಿರುವ ಪ್ರಿಯಾಂಕ, ಪ್ರಿಯಕರ ಡೇವಿಡ್ ಎಂಬಾತನ ಜೊತೆ ಚಿಕ್ಕಮಗಳೂರು ಬಳಿ ಪತ್ತೆಯಾಗಿದ್ದಾರೆ. ಒಡವೆ ಸಮೇತ ನಾಪತ್ತೆಯಾಗಿದ್ದ ಈ ಜೋಡಿಯನ್ನು ಬೇಲೂರು ಪೊಲೀಸರು ವಶಕ್ಕೆ ಪಡೆದಿದ್ದು, ವಿಚಾರಣೆ ನಡೆಸುತ್ತಿದ್ದಾರೆ. ಮಹಿಳೆಯ ನಾಪತ್ತೆಯಿಂದ ಕಂಗಾಲಾಗಿದ್ದ ಪೊಲೀಸ್ ಇಲಾಖೆ ಹಾಗೂ ಆಕ್ರೋಶಗೊಂಡಿದ್ದ ಸಂಬಂಧಿಕರಿಗೆ ಇದೀಗ ಅಸಲಿ ಸತ್ಯ ತಿಳಿದು ಶಾಕ್ ಆಗಿದೆ. ಈ ಕುರಿತು ಹಾಸನ ಎಸ್ಪಿ ಶುಭಾನ್ವಿತಾ ಅವರು ಮಾಹಿತಿ ನೀಡಿದ್ದು, ಹೆಚ್ಚಿನ ತನಿಖೆ ಮುಂದುವರಿದಿದೆ. ಬೈಟ್

Tags:

error: Content is protected !!