Belagavi

ಕಂಗ್ರಾಳಿ ಕೆ.ಎಚ್‌ನಲ್ಲಿ ಸಂತ ಸೇವಾಲಾಲ್ ಜಯಂತಿ ಸಂಭ್ರಮ: ಬಂಜಾರ ಸಂಸ್ಕೃತಿಯ ಉಡುಗೆ ತೊಟ್ಟು ಕುಣಿದು ಕುಪ್ಪಳಿಸಿದ ಸಮುದಾಯ!

Share

ಬೆಳಗಾವಿ : ನಗರದ ಜ್ಯೋತಿನಗರ ಕಂಗ್ರಾಳಿ ಕೆ.ಎಚ್‌ನಲ್ಲಿ ಬಂಜಾರ ಸಮುದಾಯದ ಆರಾಧ್ಯ ದೈವ ಶ್ರೀ ಸಂತ ಸೇವಾಲಾಲ್ ಅವರ 287ನೇ ಜಯಂತಿಯನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಯಿತು. ಸಮುದಾಯದ ವೇಷಭೂಷಣ ತೊಟ್ಟ ಭಕ್ತರು ಜಾನಪದ ಸೊಗಡಿನೊಂದಿಗೆ ಸಂಭ್ರಮಿಸಿದರು.

ಬೆಳಗಾವಿ ನಗರದ ಕಂಗ್ರಾಳಿ ಕೆ.ಎಚ್‌ ಜ್ಯೋತಿನಗರದ ಶ್ರೀ ತುಳಜಾಭವಾನಿ ಕಾಲನಿಯಲ್ಲಿ ಪ್ರತಿವರ್ಷದಂತೆ ಈ ವರ್ಷವೂ ಶ್ರೀ ಸಂತ ಸೇವಾಲಾಲ್ ಮಹಾರಾಜರ 287ನೇ ಜಯಂತಿಯನ್ನು ಸಡಗರದಿಂದ ಆಚರಿಸಲಾಯಿತು. ಈ ಸಂದರ್ಭದಲ್ಲಿ ಬಂಜಾರ ಸಮುದಾಯದ ಮಹಿಳೆಯರು ಮತ್ತು ಪುರುಷರು ತಮ್ಮ ಸಾಂಪ್ರದಾಯಿಕ ವೇಷಭೂಷಣಗಳನ್ನು ಧರಿಸಿ, ಜಾನಪದ ಹಾಡುಗಳಿಗೆ ಹೆಜ್ಜೆ ಹಾಕುವ ಮೂಲಕ ಸಂಭ್ರಮಿಸಿದರು. ಬಂಜಾರ ಸಂಸ್ಕೃತಿಯ ಅನನ್ಯತೆಯನ್ನು ಪ್ರತಿಬಿಂಬಿಸುವ ಈ ಕಾರ್ಯಕ್ರಮದಲ್ಲಿ ಇಡೀ ಕಾಲನಿ ಹಬ್ಬದ ಕಳೆ ಪಡೆದಿತ್ತು.
ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಕೃಷ್ಣ ಪಮ್ಮಾರ್ ಅವರು ಮಾತನಾಡಿ, ಬಂಜಾರ ಸಮುದಾಯದ ಸಂಸ್ಕೃತಿ ಮತ್ತು ವೇಷಭೂಷಣಗಳು ನಮ್ಮ ಹೆಮ್ಮೆ. ಇಂದಿನ ಯುವ ಪೀಳಿಗೆ ಈ ಶ್ರೀಮಂತ ಪರಂಪರೆಯನ್ನು ಉಳಿಸಿ ಬೆಳೆಸಬೇಕೆಂದು ಕರೆ ನೀಡಿದರು.

ಈ ವೇಳೆ ಶೇಖರ್ ರಾಥೋಡ್, ಸಂತೋಷ್ ರಾಥೋಡ್, ಸುರೇಶ್ ಚವಾನ್, ಗಣಪತಿ ನಾಯಕ್ ಸೇರಿದಂತೆ ಕಾಲೋನಿಯ ಹಿರಿಯರು ಮತ್ತು ಮುಖಂಡರು ಉಪಸ್ಥಿತರಿದ್ದು, ಸಂತ ಸೇವಾಲಾಲರ ತತ್ವ ಆದರ್ಶಗಳನ್ನು ಸ್ಮರಿಸಿದರು.

Tags:

error: Content is protected !!