1. ಅಕ್ಸಾ ಮಸೀದಿ ಸಭಾಂಗಣದಲ್ಲಿ ಉಚಿತ ಕಣ್ಣಿನ ಶಿಬಿರ
2. ಕಂಪ್ಯೂಟರೀಕೃತ ಕಣ್ಣಿನ ಪರೀಕ್ಷೆ ಮತ್ತು ಸಲಹೆ ಉಚಿತ
3. ಕನಿಷ್ಠ ದರದಲ್ಲಿ ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆ ಲಭ್ಯ
4. ಎಂ. ಎಂ. ಜೋಶಿ ಕಣ್ಣಿನ ಆಸ್ಪತ್ರೆಯಿಂದ ಸೇವೆ

ಬೆಳಗಾವಿಯ ಅಶೋಕ ನಗರದ ಅಕ್ಸಾ ಮಸೀದಿ ಸಭಾಂಗಣದಲ್ಲಿಂದು ಎಂ. ಎಂ. ಜೋಶಿ ಕಣ್ಣಿನ ಆಸ್ಪತ್ರೆ ಹಾಗೂ ಅಲ್-ಇಕ್ರಾ ಶಿಕ್ಷಣ ಮತ್ತು ಸಮಾಜ ಕಲ್ಯಾಣ ಸಂಸ್ಥೆಯ ಸಹಯೋಗದಲ್ಲಿ ಬೃಹತ್ ಉಚಿತ ಕಣ್ಣಿನ ತಪಾಸಣಾ ಶಿಬಿರ ಹಮ್ಮಿಕೊಳ್ಳಲಾಗಿತ್ತು.

ಬೆಳಗಾವಿಯ ಪ್ರತಿಷ್ಠಿತ ಎಂ. ಎಂ. ಜೋಶಿ – ಕೊಡಕಣಿ ಕಣ್ಣಿನ ಸಂಸ್ಥೆ, ಅಲ್-ಇಕ್ರಾ ಶಿಕ್ಷಣ ಮತ್ತು ಸಮಾಜ ಕಲ್ಯಾಣ ಸಂಸ್ಥೆ ಹಾಗೂ ಯಂಗ್ ಕಮಿಟಿಯ ಸಂಯುಕ್ತಾಶ್ರಯದಲ್ಲಿ ಸಾರ್ವಜನಿಕರಿಗಾಗಿ ವಿಶೇಷ ಕಣ್ಣಿನ ತಪಾಸಣಾ ಶಿಬಿರವನ್ನು ಆಯೋಜಿಸಲಾಗಿತ್ತು. ಈ ಶಿಬಿರದಲ್ಲಿ ನೂರಾರು ಜನರು ಆಗಮಿಸಿ ತಪಾಸಣೆ ಮಾಡಿಸಿಕೊಂಡರು. ಆಧುನಿಕ ಕಂಪ್ಯೂಟರೀಕೃತ ಯಂತ್ರಗಳ ಮೂಲಕ ಕಣ್ಣಿನ ಪರೀಕ್ಷೆ ನಡೆಸಲಾಯಿತು ಹಾಗೂ ಕಣ್ಣಿನ ಪೊರೆ ಮತ್ತು ಗ್ಲುಕೋಮಾದಂತಹ ಸಮಸ್ಯೆಗಳ ಬಗ್ಗೆ ತಪಾಸಣೆ ನಡೆಸಿ ಸೂಕ್ತ ಮಾರ್ಗದರ್ಶನ ನೀಡಲಾಯಿತು.
ಮಧುಮೇಹ ಹೊಂದಿರುವ ರೋಗಿಗಳಿಗೆ ವಿಶೇಷವಾಗಿ ‘ಡಯಾಬಿಟಿಕ್ ರೆಟಿನೋಪತಿ’ ಸ್ಕ್ರೀನಿಂಗ್ ಮಾಡಲಾಯಿತು. ನುರಿತ ವೈದ್ಯರ ತಂಡವು ದೃಷ್ಟಿ ದೋಷವಿರುವವರಿಗೆ ಉಚಿತವಾಗಿ ಸಲಹೆಗಳನ್ನು ನೀಡಿತು. ಇದೇ ಸಂದರ್ಭದಲ್ಲಿ ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆಯ ಅಗತ್ಯವಿದ್ದ ರೋಗಿಗಳನ್ನು ಗುರುತಿಸಲಾಗಿದ್ದು, ಅವರಿಗೆ ಎಂ. ಎಂ. ಜೋಶಿ ಆಸ್ಪತ್ರೆಯಲ್ಲಿ ಅತ್ಯಂತ ಕಡಿಮೆ ದರದಲ್ಲಿ ಶಸ್ತ್ರಚಿಕಿತ್ಸೆ ಮಾಡಲು ನಿರ್ಧರಿಸಲಾಯಿತು. ಅಲ್-ಇಕ್ರಾ ಸಂಸ್ಥೆಯ ಪದಾಧಿಕಾರಿಗಳು ಮತ್ತು ಶಹನವಾಜ್ ಸರ್ ನೇತೃತ್ವದ ತಂಡವು ಶಿಬಿರದ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ನಿರ್ವಹಿಸಿತು.
