• ಲೈನ್ ಬಜಾರ್ ಜೈನ ಮಂದಿರ ಕಳ್ಳನ ಬಂಧನ
• ಬಂಧಿತನಿಂದ ₹3.40 ಲಕ್ಷದ ಸ್ವತ್ತು ಜಪ್ತಿ
• ಪೊಲೀಸ್ ಇನ್ಸ್ಪೆಕ್ಟರ್ ಗುರುನಾಥ ಚೌವ್ಹಾನ್ ಭರ್ಜರಿ ಕಾರ್ಯಾಚರಣೆ
• ವಾಚ್ಮನ್ ಕೆಲಸ ಮಾಡುತ್ತಲೇ ಕಳ್ಳತನಕ್ಕಿಳಿದ ಆರೋಪಿ

ಕಳೆದ ಜನೆವರಿ 20ರಂದು ಧಾರವಾಡದ ಲೈನ್ ಬಜಾರ್ನ ಶ್ರೀ ಶೀತಲನಾಥ ಜೈನ ಮಂದಿರದಲ್ಲಿ ನಡೆದಿದ್ದ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಧಾರವಾಡ ಶಹರ ಠಾಣೆಯ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಓರ್ವ ಅಂತರ ಜಿಲ್ಲಾ ಕಳ್ಳನನ್ನು ಬಂಧನ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

ಬೆಳಗಾವಿ ಜಿಲ್ಲೆಯ ಕಿತ್ತೂರು ತಾಲೂಕಿನ ಹುಣಸಿಕಟ್ಟಿ ಗ್ರಾಮದ ನಿವಾಸಿ 31 ವರ್ಷದ ಮಲ್ಲಪ್ಪ ತಂದೆ ಬಸಪ್ಪ ಅಕಮಡ್ಡಿ ಬಂಧಿತ ಅಂತರ ಜಿಲ್ಲಾ ಕಳ್ಳನೆಂದು ಗುರುತಿಸಲಾಗಿದೆ. ಕಳೆದ ಜನವರಿ 20ರಂದು ಬೆಳಗಿನ ಜಾವ ಧಾರವಾಡದ ಲೈನ ಬಜಾರ ಬಳಿಯ ಶ್ರೀ ಶೀತಲನಾಥ ಜೈನ ಮಂದಿರದಲ್ಲಿ ಕಳ್ಳತನ ನಡೆದಿತ್ತು. ಈ ಕುರಿತು ಪ್ರಕರಣ ದಾಖಲಿಸಿಕೊಂಡ ಶಹರ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಗುರುನಾಥ ಚೌವ್ಹಾನ್, ಪಿಎಸ್.ಐ ವಿನೋಧ ಡಿ ನೇತೃತ್ವದ ತಂಡ ಕಾರ್ಯಚರಣೆ ನಡೆಸಿದ ಅಂತರ ಜಿಲ್ಲಾ ಕಳ್ಳನನ್ನು ಬಲೆಗೆ ಕೆಡುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತನಿಂದ 1,565 ಗ್ರಾಂ ಬೆಳ್ಳಿ ಹಾಗೂ 30ಸಾವಿರ 274ರೂಪಾಯಿ ನಗದು ಸೇರಿ ಒಟ್ಟು ಅಂದಾಜು 3ಲಕ್ಷ40 ಸಾವಿರ474ರೂಪಾಯಿ ವಶಕ್ಕೆ ಪಡೆದುಕೊಂಡಿದ್ದಾರೆ. ಇನ್ನೂ ಆರೋಪಿಯನ್ನು ಧಾರವಾಡ ಟಿಕಾರೆ ರೋಡ ಮಹಾವೀರ ಪ್ಲಾಜಾ ಬಳಿಯಲ್ಲಿ ಅರೋಪಿಯನ್ನು ದಸ್ತಗೀರ ಮಾಡಲಾಗಿದೆ. ಬಂಧಿತ ಆರೋಪಿ ಕಳ್ಳತನ ನಡೆದ ಪ್ರದೇಶದಲ್ಲಿ ವಾಚಮನ್ ಕೆಲಸ ನಿರ್ವಹಿಸುತ್ತಿದ್ದ ಎಂದು ತಿಳಿದು ಬಂದಿದೆ. ಮಂದಿರವನ್ನು ಕೀಲಿ ಹಾಕಿಕೊಂಡು ಹೋದ ವೇಳೆಯಲ್ಲಿ ಮಂದಿರದ ಬಾಗಿಲಿನ ಕೀಲಿ ಕೊಂಡಿಯನ್ನು ಮೀಟಿ ಮುರಿದು, ಒಳಗೆ ಪ್ರವೇಶಿಸಿ ನಂತರ ಕಾಣಿಕೆ ಪೆಟ್ಟಿಗೆಯ ಕೀಲಿಗಳನ್ನು ಮೀಟಿ ಮುರಿದು ಅದರಲ್ಲಿಯ ನಗದು ಹಣ ಹಾಗೂ ಬೆಳ್ಳಿಯ ಆಭರಣಗಳನ್ನು ಕಳ್ಳತನ ಮಾಡಿಕೊಂಡು ಆರೋಪಿ ಪರಾರಿಯಾಗಿದ್ದನಂತೆ. ಸದ್ಯ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಆರೋಪಿಯನ್ನು ಬಂಧನ ಮಾಡಲಾಗಿದೆ. ಈ ಕುರಿತು ಧಾರವಾಡ ಶಹರ ಪೊಲೀಸ್ ಠಾಣೆಯಲ್ಲಿ ಪ್ರಲರಣ ದಾಖಲಾಗಿದೆ.
