• ಇಂಡಿಯಾ-ಪಾಕ್ ಹೈವೋಲ್ಟೇಜ್ ಪಂದ್ಯದ ಕ್ರೇಜ್
• ಬಾಗಲಕೋಟೆಯಲ್ಲಿ ಶುರುವಾಯ್ತು ಕ್ರಿಕೆಟ್ ಫೀವರ್
• ಟೀಮ್ ಇಂಡಿಯಾ ಗೆಲುವಿಗೆ ಅಭಿಮಾನಿಗಳ ಹಾರೈಕೆ
• ಪಾಕ್ ವಿರುದ್ಧ ಗೆಲುವು ನಮ್ಮದೇ ಎಂದ ಫ್ಯಾನ್ಸ್

ಇಡೀ ವಿಶ್ವವೇ ಕಾಯುತ್ತಿರುವ ಇಂಡಿಯಾ ವರ್ಸಸ್ ಪಾಕಿಸ್ತಾನ್ ಹೈವೋಲ್ಟೇಜ್ ಪಂದ್ಯಕ್ಕೆ ಕ್ಷಣಗಣನೆ ಶುರುವಾಗಿದೆ. ಈ ಪಂದ್ಯದ ಕಿಚ್ಚು ಈಗ ಬಾಗಲಕೋಟೆಗೂ ತಟ್ಟಿದ್ದು, ಕ್ರಿಕೆಟ್ ಪ್ರೇಮಿಗಳು ಟೀಮ್ ಇಂಡಿಯಾಗೆ ಭರ್ಜರಿ ಶುಭಾಶಯ ಕೋರುತ್ತಿದ್ದಾರೆ. ಪಾಕಿಸ್ತಾನ ತಂಡದ ವಿರುದ್ಧ ಭಾರತಕ್ಕೆ ಮತ್ತೊಂದು ಐತಿಹಾಸಿಕ ಗೆಲುವು ಖಚಿತ ಎನ್ನುವ ಮಾತುಗಳು ಬಾಗಲಕೋಟೆ ಫ್ಯಾನ್ಸ್’ಗಳಲ್ಲಿ ಕೇಳಿ ಬರುತ್ತಿವೆ.
ಟಿ20 ವಿಶ್ವಕಪ್‌ನಲ್ಲಿ ನಡೆಯಲಿರುವ ಭಾರತ ಮತ್ತು ಪಾಕಿಸ್ತಾನ ನಡುವಿನ ಹೈವೋಲ್ಟೇಜ್ ಪಂದ್ಯದ ಹಿನ್ನೆಲೆಯಲ್ಲಿ ಬಾಗಲಕೋಟೆ ಜಿಲ್ಲೆಯಾದ್ಯಂತ ಕ್ರಿಕೆಟ್ ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟಿದೆ. ಬಾಗಲಕೋಟೆಯ ವಿವಿಧ ರಸ್ತೆಗಳಲ್ಲಿ ಟೀಮ್ ಇಂಡಿಯಾದ ಜೆರ್ಸಿ ಧರಿಸಿ ಕ್ರಿಕೆಟ್ ಪ್ರೇಮಿಗಳು ತಂಡಕ್ಕೆ ಶುಭಾಶಯ ಸಲ್ಲಿಸುತ್ತಿದ್ದಾರೆ. “ವಿಶ್ವಕಪ್ ಇತಿಹಾಸವನ್ನು ಒಮ್ಮೆ ತಿರುಗಿ ನೋಡಿದರೆ ಪಾಕಿಸ್ತಾನ ತಂಡ ಭಾರತದ ಮುಂದೆ ಏನೂ ಅಲ್ಲ. ಈವರೆಗೂ ವಿಶ್ವಕಪ್ ವೇದಿಕೆಯಲ್ಲಿ ಪಾಕ್ ನಮ್ಮನ್ನು ಸೋಲಿಸಿದ ಇತಿಹಾಸವೇ ಇಲ್ಲ, ಈ ಬಾರಿಯೂ ನಮ್ಮ ವಿಜಯ ಪತಾಕೆ ಹಾರಲಿದೆ” ಎಂದು ಅಭಿಮಾನಿಗಳು ವಿಶ್ವಾಸ ವ್ಯಕ್ತಪಡಿಸಿದ್ದಾರೆ.ಅಭಿಮಾನಿಗಳ ಉತ್ಸಾಹ ಎಷ್ಟಿದೆ ಎಂದರೆ, “ಪಂದ್ಯ ಶುರುವಾಗುವ ಮೊದಲೇ ಇಂಡಿಯಾ ಗೆದ್ದಾಗಿದೆ ಎಂದು ನಾವು ನಿರ್ಧರಿಸಿದ್ದೇವೆ, ಆ ಖುಷಿಯಲ್ಲೇ ನಾವು ಟಿವಿ ನೋಡುತ್ತೇವೆ” ಎಂದು ಫ್ಯಾನ್ಸ್ ಹೇಳುತ್ತಿದ್ದಾರೆ. ಭಾರತೀಯ ಆಟಗಾರರ ಫಾರ್ಮ್ ಮತ್ತು ಪಾಕಿಸ್ತಾನದ ವಿರುದ್ಧದ ಈವರೆಗಿನ ದಾಖಲೆಗಳನ್ನು ಗಮನಿಸಿದರೆ ಟೀಮ್ ಇಂಡಿಯಾ ಗೆಲುವು ಸಾಧಿಸುವುದರಲ್ಲಿ ಎರಡು ಮಾತಿಲ್ಲ ಎಂಬುದು ಜಿಲ್ಲೆಯ ಕ್ರೀಡಾ ಪ್ರೇಮಿಗಳ ಖಚಿತ ನಿಲುವು. ಇಡೀ ಬಾಗಲಕೋಟೆ ನಗರವೇ ಈಗ ನೀಲಿ ಬಣ್ಣಕ್ಕೆ ತಿರುಗಿದ್ದು, ಭಾರತದ ಗೆಲುವಿನ ಘೋಷಣೆಗಳು ಎಲ್ಲೆಡೆ ಮೊಳಗುತ್ತಿವೆ.

