Bagalkot

ಇಟ್ಟಿಗೆ ಭಟಿಯಲ್ಲಿ ಓಡಿಸಾ ಕಾರ್ಮಿಕರು ಜೀತ ಪದ್ಧತಿ ಜೀವಂತ

Share

ಆತ ಇಟ್ಟಿಗೆ ಭಟ್ಟಿ ನಡೆಸುತ್ತಿದ್ದ.ಆ ಇಟ್ಟಿಗೆ ತಯಾರಿಸಲು ಓಡಿಸ್ಸಾ ಕಾರ್ಮಿಕರನ್ನ ಕರೆತಂದಿದ್ದ.24 ಕಾರ್ಮಿಕರ ಕುಟಂಬಕ್ಕೆ ಒಟ್ಟು  10 ಲಕ್ಷ ಹಣ ನೀಡಿ ಕಾರ್ಮಿಕರನ್ನ ಜೀತ ಇಟ್ಟುಕೊಂಡು ದುಡಿಸುತ್ತಿದ್ದ. ಇಟ್ಟಿಗೆ ಭಟ್ಟಿಯಲ್ಲಿ ಮಕ್ಕಳ ಸಮೇತ ದುಡಿಯುತ್ತಿದ್ರು. ಖಚಿತ ಮಾಹಿತಿ ಮೇರೆಗೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.ಭೇಟಿ ವೇಳೆ ಓಡಸ್ಸಾದ 24ಜನ ಕಾರ್ಮಿಕರನ್ನ ರಕ್ಷಣೆ ಮಾಡಲಾಗಿದೆ.ಈ ಕುರಿತು ಒಂದು ರಿಪೋರ್ಟ್ ಇಲ್ಲಿದೆ ನೋಡಿ…

ಒಂದೆಡೆ ಜೀತದಾಳಾಗಿ ಇಟ್ಟಿಗೆ ಭಟಿಯಲ್ಲಿ ದುಡಿಯುತ್ತಿದ್ದ ಕಾರ್ಮಿಕರು.ಮತ್ತೊಂದೆಡೆ ಖಚಿತ ಮಾಹಿತಿ ಮೇರೆಗೆ ತಹಶಿಲ್ದಾರ ಹಾಗೂ ಕಾರ್ಮಿಕ ಇಲಾಖೆ ಅಧಿಕಾರಿಗಳ ಭೇಟಿ ಪರಿಶೀಲನೆ. ಇಂತಹ ದೃಶ್ಯ ಕಂಡು ಬಂದಿದ್ದು ಬಾಗಲಕೋಟೆ ಜಿಲ್ಲೆ ಇಳಕಲ್ ತಾಲ್ಲೂಕಿನ ಸಂಕಲಾಪೂರ ಗ್ರಾಮದ ಇಟ್ಟಿಗೆ ಭಟಿಯಲ್ಲಿ.ಹೌದು ಸಂಕಲಾಪೂರ ಗ್ರಾಮದ ಈರಪ್ಪ ಕುಂಬಾರ ಇಟ್ಟಿಗೆ ಭಟಿ ನಡೆಸುತ್ತಿದ್ದ.ಇಟ್ಟಿಗೆ ತಯಾರಿಸಲು ಓಡಿಸ್ಸಾದಿಂದ 24 ಕಾರ್ಮಿಕ ಕುಟುಂಬಗಳಿಗೆ 10 ಲಕ್ಷ ಹಣ ನೀಡಿ ಕರೆತಂದಿದ್ರು.ಇಟ್ಟಿಗೆ ಭಟಿಯಲ್ಲಿ ಜೀತ ಪದ್ದತಿ ರೀತಿಯಲ್ಲಿ ಕೆಲಸ ಮಾಡ್ತಿದ್ರು.ಖಚಿತ ಮಾಹಿತಿ ಮೇರೆಗೆ ಇಲಕಲ್ ತಹಶಿಲ್ದಾರ ಅಮರೇಶ್ ಪಮ್ಮಾರ ಹಾಗೂ ಕಾರ್ಮಿಕ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಇಟ್ಡಿಗೆ ಭಟಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದ 24 ಜನ ಓಡಿಸ್ಸಾ ಕಾರ್ಮಿಕರ ರಕ್ಷಣೆ ಮಾಡಲಾಗಿದೆ…

ಇನ್ನು ಓಡಿಸ್ಸಾದಿಂದ ಇಟ್ಟಿಗೆ ತಯಾರಿಸಲು ಕಾರ್ಮಿಕರನ್ನ ಕರೆತಂದು ಜೀತ ಪದ್ದತಿ ರೀತಿ ದುಡಿಸಿಕೊಳ್ತಿರೋ ಮಾಹಿತಿ ಆದರಿಸಿ ಸ್ಥಳಕ್ಕೆ ಭೇಟಿ ನೀಡದ ಅಧಿಕಾರಿಗಳು ಪರಿಶೀಲನೆ ನಡೆಸಿದ್ದು,ಸ್ಥಳದಲ್ಲಿ ಚಿಕ್ಕ ಮಕ್ಕಳು ಕೆಲಸ ಮಾಡ್ತಿರೋದು ಕಂಡು ಬಂದಿದೆ.ಕಾರ್ಮಿಕ ಇಲಾಖೆ ಅಧಿಕಾರಿಗಳು ಬಾಲಕಾರ್ಮಿಕರ ಕುರಿತು ಮಾಹಿತಿ ಸಂಗ್ರಹಿಸಿದ್ದು,ಇಲಕಲ್ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ಮುಂದುವರೆಸಿದ್ದಾರೆ….

ಒಟ್ಟಿನಲ್ಲಿ ಬಾಗಲಕೋಟೆ ಜಿಲ್ಲೆಯಲ್ಲಿ ಜೀತ ಪದ್ದತಿ ಗ್ರಾಮೀಣ ಭಾಗದ ಇಟ್ಟಿಗೆ ಭಟಿಯಲ್ಲಿ ಜೀವಂತ ಇದೀಯಾ ಅನ್ನೋ ಅನುಮಾನ ಹೆಚ್ಚಿದ್ದು,ಕಾರ್ಮಿಕ ಇಲಾಖೆ ಹಾಗೂ ಪೊಲೀಸ್ ಅಧಿಕಾರಿಗಳು ಇಟ್ಟಿಗೆ ತಯಾರಿಕಾ ಘಟಕಗಳ ಮೇಲೆ ಹದ್ದಿನ ಕಣ್ಣೀಡಬೇಕಿದೆ ಅನ್ನೋದು ಸ್ಥಳೀಯರ ಮಾತು…

Tags:

error: Content is protected !!