Hukkeri

ಕರ್ತವ್ಯದ ಭಾವದಿಂದ ಹೊರಬಂದು ಕ್ರೀಡೆಯಲ್ಲಿ ಭಾಗವಹಿಸಿ – ಜಂಟಿ ನಿರ್ದೆಶಕ ಕನ್ನೋಳ್ಳಿ.

Share

ಸರಕಾರಿ ನೌಕರರು ಕರ್ತವ್ಯದ ಭಾವದಿಂದ ಹೋರ ಬಂದು ಕ್ರೀಡೆಯಲ್ಲಿ ಭಾಗವಹಿಸ ಬೇಕು ಎಂದು ಬೆಳಗಾವಿ ಸಮಾಜ ಕಲ್ಯಾಣ ಇಲಾಖೆ ಒಂಟಿ ನಿರ್ದೆಶಕ ರಾಮನಗೌಡಾ ಕನ್ನೋಳ್ಳಿ ಹೇಳಿದರು.

ಬೆಳಗಾವಿ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ ಖಾಯಂ ನೌಕರರ ಜಿಲ್ಲಾ ಮಟ್ಟದ ಕ್ರೀಡಾ ಕೂಟವನ್ನು ಹುಕ್ಕೇರಿ ತಾಲೂಕಾ ಕ್ರೀಡಾಂಗಣದಲ್ಲಿ ‌ ಕ್ರೀಡಾ ಜ್ಯೋತಿ ಯನ್ನು ಬರಮಾಡಿಕೊಂಡು ಎರಡು ದಿನಗಳ ಕಾಲ ಜರಗುವ ಕ್ರೀಡಾಕೂಟವನ್ನು ಜಂಟಿ ನಿರ್ದೆಶಕರು ಚಾಲನೆ ನೀಡಿದರು.
ಹುಕ್ಕೇರಿ ತಾಲೂಕಾ ಸಮಾಜ ಕಲ್ಯಾಣ ಇಲಾಖೆ ಮೇಲ್ವಿಚಾರಕ ಶಿವಾನಂದ ಶೇಟ್ಟೆನ್ನವರ ಕ್ರೀಡಾ ಪಟುಗಳಿಗೆ ಪ್ರತಿಜ್ಞಾ ವಿಧಿ ಭೊದಿಸಿದರು.
ಮಾದ್ಯಮಗಳೊಂದಿಗೆ ಮಾತನಾಡಿದ ಜೆ ಡಿ ರಾಮನಗೌಡಾ ಸರಕಾರಿ ನೌಕರರು ಕರ್ತವ್ಯ ಭಾವದಿಂದ ಹೋರ ಬಂದು ಕ್ರೀಡೆಯಲ್ಲಿ ಪಾಲ್ಗೊಳ್ಳುವ ಮುಖಾಂತರ ಮನೊ ಸ್ಥೈರ್ಯ ವನ್ನು ಬೆಳೆಸಿ ಕೋಳ್ಳ ಬೇಕು ಎಂದರು ..

ನಂತರ ವಿವಿಧ ತಾಲೂಕಿನಿಂದ ಬಂದ ಕ್ರೀಡಾಪಟುಗಳಿಗೆ ಶುಭ ಹಾರೈಸಿ ಕ್ರೀಡೆಗಳಿಗೆ ಚಾಲನೆ ನೀಡಿದರು.
ಬೆಳಗಾವಿ ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿದರ್ಶಕ ಬಸವರಾಜ ಚನ್ನಯ್ಯನವರ ಮಾತನಾಡಿ ಸಮಾಜ ಕಲ್ಯಾಣ ಆಯುಕ್ತರ ಮತ್ತು ಜಂಟಿ ನಿರ್ದೆಶಕರ ಆದೇಶದಂತೆ ಇಂದು ಜಿಲ್ಲಾ ಮಟ್ಟದ ಕ್ರೀಡಾಕೂಟವನ್ನು ಹುಕ್ಕೇರಿಯ ಕ್ಯಾರಗುಡ್ಡ ತಾಲೂಕಾ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದೆ ಜಿಲ್ಲೆಯ ವಿವಿಧ ಭಾಗಗಳಿಂದ ಸಮಾಜ ಕಲ್ಯಾಣ ಇಲಾಖೆ ನೌಕರರು ಅತಿ ಉತ್ಸಾಹದಿಂದ ಕ್ರೀಡೆಯಲ್ಲಿ ಭಾಗವಹಿಸಿದ್ದಾರೆ ಎಂದರು
ಅಧಿಕಾರಿಗಳು ವಿವಿಧ ಕ್ರೀಡೆಯಲ್ಲಿ ಭಾಗವಹಿಸಿ ತಮ್ಮ ಕ್ರೀಡಾ ಕೌಶಲ್ಯವನ್ನು ಪ್ರದರ್ಶಿಸಿದರು.

ಹುಕ್ಕೇರಿ ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೆಶಕ ಗುರುಶಾಂತ ಪಾವಟೆ ಮಾತನಾಡಿ ಅತಿ ಕಡಿಮೆ ಅವಧಿಯಲ್ಲಿ ಜಿಲ್ಲಾ ಮಟ್ಟದ ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ವನ್ನು ಹುಕ್ಕೇರಿ ಯಲ್ಲಿ ಅಚ್ಚು ಕಟ್ಟಾಗಿ ಆಯೋಜಿಸಲಾಗಿದೆ ನೌಕರರು ಕ್ರೀಡಾ ಮನೋಭಾವದಿಂದ ಭಾಗವಹಿಸಲಿ ಎಂದರು
ಈ ಸಂದರ್ಭದಲ್ಲಿ ಬೆಳಗಾವಿ ಜಿಲ್ಲೆಯ ವಿವಿಧ ತಾಲೂಕಿನ ಸಹಾಯಕ ನಿರ್ದೆಶಕರಾದ ಬಸವರಾಜ ಚನ್ನಯ್ಯನವರ, ಗುರುಶಾಂತ ಪಾವಟೆ, ವಿಠ್ಠಲ ಚಂದರಗಿ,ಪರಶುರಾಮ ಪತ್ತಾರ, ಮಲ್ಲಿಕಾರ್ಜುನ ಉಳ್ಳಾಗಡ್ಡಿ, ಆರ ಆರ್ ಕುಲಕರ್ಣಿ , ಶ್ರೀಮತಿ ಅರ್ಚನಾ ಸಾನೆ, ಮಲ್ಲಿಕಾರ್ಜುನ ಹೋಸಮನಿ, ಎಲ್ ಬಿ ಮಾಲದಾರ, ಶಿವಾನಂದ ಶೆಟ್ಟಣ್ಣವರ, ಶೆಟ್ಟೆಪ್ಪಾ ಹರಿಜನ, ರಾಘವೇಂದ್ರ ಜಕಬಾಳ ಶಶಿಧರ ನಡುಮನಿ , ಶ್ರೀಮತಿ ನಾಗವೇಣಿ ಹೋಳೆಯಾಚೆ ,ಹೇಮಲತಾ ಬಸಲಿಂಗೋಳ ಹಾಗೂ ಇಲಾಖೆ ನೌಕರರು ಉಪಸ್ಥಿತರಿದ್ದರು.

Tags:

error: Content is protected !!