BELAGAVI

ಖಾನಾಪುರದಲ್ಲಿ ಜಿಲ್ಲಾಮಟ್ಟದ ಸ್ಕೇಟಿಂಗ್ ಸ್ಪರ್ಧೆ ಯಶಸ್ವಿ: ವಿಜೇತ ಕ್ರೀಡಾಪಟುಗಳಿಗೆ ಪದಕಗಳ ಗೌರವ!

Share

ಬೆಳಗಾವಿ ಜಿಲ್ಲಾ ರೋಲರ್ ಸ್ಕೇಟಿಂಗ್ ಅಸೋಸಿಯೇಷನ್ ಹಾಗೂ ಸಾಯಿ ಸ್ಪೋರ್ಟ್ಸ್ ಅಕಾಡೆಮಿ ವತಿಯಿಂದ ಆಯೋಜಿಸಲಾಗಿದ್ದ ಮುಕ್ತ ಜಿಲ್ಲಾಮಟ್ಟದ ಸ್ಕೇಟಿಂಗ್ ಸ್ಪರ್ಧೆಯು ಖಾನಾಪುರದ ಮರಾಠಾ ಮಂಡಳದಲ್ಲಿ ಅತ್ಯಂತ ಉತ್ಸಾಹದಿಂದ ಜರುಗಿತು. ಜಿಲ್ಲೆಯ ವಿವಿಧ ಭಾಗಗಳ ಪ್ರತಿಭಾನ್ವಿತ ಕ್ರೀಡಾಪಟುಗಳು ಈ ಸ್ಪರ್ಧೆಯಲ್ಲಿ ತಮ್ಮ ಕೌಶಲ್ಯ ಮೆರೆದರು.

ಈ ಕ್ರೀಡಾಕೂಟದ ಉದ್ಘಾಟನೆ ಮತ್ತು ಬಹುಮಾನ ವಿತರಣಾ ಸಮಾರಂಭವನ್ನು ಸಾಯಿ ಸ್ಪೋರ್ಟ್ಸ್ ಅಕಾಡೆಮಿಯ ಪ್ರಸಾದ್ ಜಾಧವ್ ಹಾಗೂ ರಾಜಲಕ್ಷ್ಮಿ ಜಾಧವ್ ನೆರವೇರಿಸಿದರು. ಕಾರ್ಯಕ್ರಮದಲ್ಲಿ ಸೂರ್ಯಕಾಂತ್ ಹಿಂದಲಗೇಕರ್, ಯೋಗೇಶ್ ಕುಲಕರ್ಣಿ, ಹೃಷಿಕೇಶ್ ಪಸಾರೆ ಸೇರಿದಂತೆ ಹಲವು ಗಣ್ಯರು ಹಾಗೂ ಕ್ರೀಡಾಪಟುಗಳ ಪಾಲಕರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದು ಮಕ್ಕಳನ್ನು ಪ್ರೋತ್ಸಾಹಿಸಿದರು. ಸ್ಪರ್ಧೆಯಲ್ಲಿ ಉತ್ತಮ ಪ್ರದರ್ಶನ ನೀಡಿದ ಆಶಿಷ್ ಅಂಗಡಿಕರ್, ಆರೋಹಿ ಕಾಟಗಾಲ್ಕರ್, ಸಾಯಿ ಆನಂದಾಚೆ, ನಕ್ಷ್ ಹಿರೇಮಠ್ ಸೇರಿದಂತೆ ಹಲವು ವಿದ್ಯಾರ್ಥಿಗಳು ಚಿನ್ನ, ಬೆಳ್ಳಿ ಹಾಗೂ ಕಂಚಿನ ಪದಕಗಳನ್ನು ಮುಡಿಗೇರಿಸಿಕೊಂಡರು. ವಿಜೇತರಿಗೆ ಪದಕ ಮತ್ತು ಪ್ರಮಾಣಪತ್ರ ನೀಡಿ ಗೌರವಿಸಲಾಯಿತು. ಈ ಕಾರ್ಯಕ್ರಮದ ಯಶಸ್ಸಿಗಾಗಿ ಯೋಗೇಶ್ ಕುಲಕರ್ಣಿ ಮತ್ತು ಹೃಷಿಕೇಶ್ ಪಸಾರೆ ಹಾಗೂ ತಂಡದವರು ಶ್ರಮಿಸಿದರು.

ಆಶಿಷ್ ಅಂಗಡಿಕರ್, ಆರೋಹಿ ಕಾಟಗಾಲ್ಕರ್, ಸಾಯಿ ಆನಂದಾಚೆ, ನಕ್ಷ್ ಹಿರೇಮಠ್, ಕಾರ್ತಿಕ್ ಚೌಧರಿ, ವಿಕ್ರಾಂತ್ ಚೌಧರಿ, ಸುಜಿತ್ ಸಾಳೋಖೆ, ಶಿವಾಂಗಿ ಮೊದಗೇಕರ್, ಶ್ರೇಯಸ್ ಬಜಂತ್ರಿ, ಆದಿಯಾ ಸಯ್ಯದ್, ಅಭಿನಾ ತಹಶೀಲ್ದಾರ್, ಅಲ್ಮಾಸ್ ತಹಶೀಲ್ದಾರ್, ಅಕ್ಕಿರಾಂಕ್ಷ ಚಿನ್ನದ ಪದಕ ಪಡೆದುಕೊಂಡರೇ, ಸೋಹಮ್ ವಾಘಮಾರೆ, ಮಾಯ್ಶಾ ಜೈನ್, ಸ್ವರಾಜ್ ಪಾಟೀಲ್ ಬೆಳ್ಳಿಯ ಪದಕ ಮತ್ತು ಸಾರ್ಥಕ್ ಮಾರ್ದೋಳ್ಕರ್ ಕಂಚಿನ ಪದಕ ಪಡೆದುಕೊಂಡಿದ್ದಾರೆ.

Tags:

error: Content is protected !!