ಬೆಳಗಾವಿಯ ಕ್ರೀಡಾ ಇತಿಹಾಸದಲ್ಲಿ ಮತ್ತೊಂದು ಮೈಲಿಗಲ್ಲು ಸ್ಥಾಪನೆಯಾಗಿದೆ. ನಗರದ ಪ್ರತಿಭಾವಂತ ಕ್ರಿಕೆಟಿಗರಿಗೆ ವೇದಿಕೆ ಕಲ್ಪಿಸುವ ನಿಟ್ಟಿನಲ್ಲಿ ಹಮ್ಮಿಕೊಳ್ಳಲಾಗಿರುವ ‘ಶ್ರೀ ಮುರುಘೇಂದ್ರಗೌಡ ಪಾಟೀಲ್ ಟ್ರೋಫಿ’ಗೆ ಗಣ್ಯರ ಸಮ್ಮುಖದಲ್ಲಿ ವಿದ್ಯುಕ್ತ ಚಾಲನೆ ಸಿಕ್ಕಿದ್ದು, ಸರ್ದಾರ್ಸ್ ಮೈದಾನ ಈಗ ಕ್ರೀಡಾ ಸಂಭ್ರಮಕ್ಕೆ ಸಾಕ್ಷಿಯಾಗಿದೆ.



ಬೆಳಗಾವಿಯ ಸರ್ದಾರ್ಸ್ ಮೈದಾನದಲ್ಲಿ ಬೆಳಗಾವಿಯಲ್ಲಿ ಶ್ರೀ ಮುರುಘೇಂದ್ರಗೌಡ ಪಾಟೀಲ್ ಟ್ರೋಫಿ ಪಂದ್ಯಾವಳಿಗೆ ಕಾರಂಜಿಮಠದ ಶ್ರೀ ಗುರುಸಿದ್ಧ ಸ್ವಾಮಿಜೀಗಳ ದಿವ್ಯ ಸಾನಿಧ್ಯದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ, ದಕ್ಷಿಣ ಶಾಸಕ ಅಭಯ್ ಪಾಟೀಲ್, ಅವಿನಾಶ ಪೋತದಾರ, ಆಯೋಜಕರ ಮುರುಘೇಂದ್ರಗೌಡ ಪಾಟೀಲ್ ಸೇರಿದಂತೆ ವಿವಿಧ ಗಣ್ಯರಿಂದ ವಿದ್ಯುಕ್ತ ಚಾಲನೆಯನ್ನು ನೀಡಲಾಯಿತು.

ಕಾರಂಜಿಮಠದ ಶ್ರೀ ಗುರುಸಿದ್ಧ ಸ್ವಾಮಿಜೀಗಳು ಬೆಳಗಾವಿ ಮಟ್ಟದಲ್ಲಿ ಸರ್ದಾರ ಮೈದಾನದಲ್ಲಿ ಆಯೋಜಿಸುವ ಕ್ರಿಕೆಟ್ ಪಂದ್ಯಾವಳಿ ಬಹುಪ್ರಸಿದ್ಧ. ಕ್ರಿಕೆಟ್ ಪಂದ್ಯಾವಳಿಯನ್ನು ಪ್ರೋತ್ಸಾಹಿಸಿ ಅತ್ಯಂತ ದೊಡ್ಡಮಟ್ಟದ ಬಹುಮಾನವನ್ನು ಮುರುಘೇಂದ್ರಗೌಡ ಪಾಟೀಲ್ ಅವರು ನೀಡುತ್ತಿದ್ದಾರೆ. ನಗರದ ಪ್ರತಿಭೆಗಳಿಗೆ ಇದೊಂದು ವೇದಿಕೆಯಾಗಿದೆ ಎಂದರು.

ದಕ್ಷಿಣ ಶಾಸಕ ಅಭಯ್ ಪಾಟೀಲ್ ಅವರು ಬೆಳಗಾವಿಯಲ್ಲಿ ಇಂತಹ ಕ್ರಿಕೆಟ್ ಪಂದ್ಯಾವಳಿಗಳು ಹೆಚ್ಚಾಗಿ ನಡೆಯಲಿ. ಬೆಳಗಾವಿಯ ಪ್ರತಿಭಾವಂತೆ ಕ್ರಿಕೆಟಿಗರು ರಾಷ್ಟ್ರ ಅಂತರಾಷ್ಟ್ರೀಯ ಮಟ್ಟದಲ್ಲಿ ಮಿಂಚಲಿ ಎಂದು ಆಶಿಸಿದರು.

ಅವಿನಾಶ ಪೋತದಾರ್ ಅವರು ಬೆಳಗಾವಿಯ ಅಭಿವೃದ್ಧಿಗೆ ಐಪಿಎಲ್ ಪಂದ್ಯಾವಳಿಗಳು ಬೆಳಗಾವಿಯಲ್ಲಿ ನಡೆಯಬೇಕು. ಇಂತಹ ಕ್ರೀಡಾಂಗಣ ಬೆಳಗಾವಿಯ ಆಟೋ ನಗರದಲ್ಲಿದೆ. ದೇಶದಲ್ಲಿ ಕ್ರಿಕೆಟ್ ಆಟಕ್ಕೆ ತನ್ನದೇಯಾದ ಸ್ಥಾನವಿದ್ದು, ಕ್ರಿಕೆಟಿಗರನ್ನು ದೇವರಂತೆ ಕಾಣುವ ಪದ್ಧತಿಯನ್ನು ದೇಶದಲ್ಲಿ ಕಾಣಬಹುದಾಗಿದೆ ಎಂದರು.

ಆಯೋಜಕ ಮುರುಘೇಂದ್ರಗೌಡ ಪಾಟೀಲ್ ಅವರು ಮಾತನಾಡಿ, ಬೆಳಗಾವಿಯ ಸರ್ದಾರ್ ಮೈದಾನದಲ್ಲಿ ಕ್ರಿಕೆಟ್ ಆಟವಾಡುವುದು ಎಲ್ಲ ಕ್ರಿಕೆಟಿಗರ ಕನಸಾಗಿದೆ. ಅವರ ಆಸೆಯಂತೆ ಇಂದು ಪಂದ್ಯಾವಳಿಯನ್ನು ಆಯೋಜಿಸಲಾಗಿದೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಅವರು 10 ದಿನದ ಕ್ರಿಕೆಟ್ ಪಂದ್ಯಾವಳಿಯ ಟ್ರೋಫಿಗಳನ್ನು ಅನಾವರಣಗೊಳಿಸಿ ಚಾಲನೆಯನ್ನು ನೀಡಿದ್ದಾರೆ ಎಂದರು. ಇದು ನಮ್ಮ ಶಕ್ತಿಪ್ರದರ್ಶನವನ್ನು ಕ್ರೀಡಾಳುಗಳಿಗೆ ಪ್ರೋತ್ಸಾಹಿಸುವ ಕಾರ್ಯ ಮಾತ್ರ ಎಂದರು.
ಈ ವೇಳೆ ವಿವಿಧ ತಂಡಗಳು ಅತ್ಯುತ್ತಮ ಪ್ರದರ್ಶನ ನೀಡಿದವು.

