Kagawad

ತಮದಡ್ಡಿ ಗ್ರಾಮದಲ್ಲಿ ಶ್ರೀ ಪಾರ್ಶ್ವನಾಥ ತಿರ್ಥಂಕರ ಮೂರ್ತಿಗೆ ಪಂಚಕಲ್ಯಾಣ ಮಹಾಮಹೋತ್ಸವ

Share

ವಿಶ್ವದಲ್ಲಿ ಜೈನ ಸಮಾಜ ಪವಿತ್ರವಾದ ಸಮಾಜವಾಗಿದ್ದು, ವಿಶ್ವಶಾಂತಿಗಾಗಿ ಜೈನ ಮುನಿಗಳಿಂದ ನಿರಂತರ ಐದು ದಿನ ಇಪ್ಪತ್ನಾಲ್ಕು ತೀರ್ಥಂಕರಗಳಿಗೆ ವಿಧಿ ವಿಧಾನಗಳ ಮುಖಾಂತರ ಐದು ದಿನಗಳಲ್ಲಿ ಗರ್ಭಕಲ್ಯಾಣ, ಭಗವದ್ ಜನ್ಮಕಲ್ಯಾಣ, ದೀಕ್ಷಾಕಲ್ಯಾಣ, ಕೇವಲಜ್ಞಾನ ಕಲ್ಯಾಣ, ನಿರ್ವಾಣ ಕಲ್ಯಾಣ ಪೂಜೆ ಅರ್ಚನೆ ಕಾರ್ಯಕ್ರಮ ತಮದಡ್ಡಿ ಗ್ರಾಮದಲ್ಲಿ ನರವೇರಿತು.

ತಮದಡ್ಡಿ ಗ್ರಾಮದಲ್ಲಿ ಸ್ವಸ್ತಿಶ್ರೀ ಜಿನಸೇನ ಭಟ್ಟಾರಕ ಸ್ವಾಮೀಜಿಗಳ ಪಾವನ ಸಾನಿಧ್ಯದಲ್ಲಿ ಪರಮ ಪೂಜ್ಯ ೧೦೮ ಆಚಾರ್ಯ ಶಾಂತಮೂರ್ತಿ ಶ್ರೀ ಶಾಂತಿಸೇನ ಮುನಿಮಹಾರಾಜರ ಮುನಿಗಳ ಸಂಘದ ದಿವ್ಯ ಸಾನಿಧ್ಯದಲ್ಲಿ ಐದು ದಿನ ಪಂಚಕಲ್ಯಾಣ ಮಹಾಪೂಜೆ ನರೇವೇರಿತು.

ತಮದಡ್ಡಿ ಗ್ರಾಮದಲ್ಲಿ ನಿರ್ಮಿಸಿದ ೧೦೦೮ ಭಗವಾನ ಪಾರ್ಶ್ವನಾಥ ತೀರ್ಥಂಕರ ಜಿನಮಂದಿರ ನೂತನ ಶಿಖರಸ್ಥಗೆ ಪಂಚಕಲ್ಯಾಣ ಪೂಜೆ ಅದರೊಂದಿಗೆ ವೇದಿ ಪ್ರತಿಷ್ಠಾ ಮತ್ತು ಪ್ರಪ್ರಥಮ ಬಾರಿಗೆ ವರ್ತಮಾನ ಕಾಲದ ೨೪ ತೀರ್ಥಂಕರಿಗೆ ಪಂಚಕಲ್ಯಾಣ ಪೂಜೆ ಕರ್ಯಕ್ರಮ ಭಕ್ತಿಯಿಂದ ಜರುಗಿತು.

ಪಂಚಕಲ್ಯಾಣ ಮಹಾಪೂಜೆಯ ಪ್ರತಿಷ್ಠಾಚಾರ್ಯರಾದ ವಾಣಿಭೂಷಣ ಪಂಡಿತ ಶ್ರೀ ಬಾಹುಬಲಿ ತ. ಉಪಾಧ್ಯೆ ಸಾ : ಜಮಖಂಡಿ ಮತ್ತು ಪಂಡಿತ ಶ್ರೀ ಭರತೇಶ ಅ ಉಪಾಧ್ಯತೆ, ಸಾ : ಹಳ್ಳೂರ, ಇವರ ನೇತೃತ್ವದಲ್ಲಿಯ ಪೂಜಾ ವಿಧಾನ ಕಾರ್ಯಕ್ರಮದಲ್ಲಿ ತೀರ್ಥಂಕರ ತಂದೆ-ತಾಯಿ ಶ್ರೀ ಪ್ರವೀಣ ಸುರೇಶ ಪಾಟೀಲ ದಂಪತಿ, ಸೌಧರ್ಮ ಇಂದ್ರ ಇಂದ್ರಾಣಿ ಶ್ರೀ ಚಂದ್ರಕಾAತ ಪರಪ್ಪ ಅಕಿವಾಟ ದಂಪತಿ, ಕುಬೇರ ದಂಪತಿಗಳು ಶ್ರೀ ವರ್ಧಮಾನ ಭೂಪಾಲ ಮಲ್ಲನ್ನವರ ದಂಪತಿಗಳು ಐದು ದಿನಗಳ ಕಾಲ ಎಲ್ಲ ವಿಧಾನದಲ್ಲಿ ಪಾಲ್ಗೊಂಡು ಪೂಜೆ ಯಶ್ವಸಿಗೊಳಿಸಿದರು.

ಪೂಜಾ ಕಾರ್ಯಕ್ರಮದಲ್ಲಿ ಸಂಸದ ಸದಸ್ಯನಾದ ಪಿ.ಸಿ.ಗದ್ದಿಗೌಡರ, ಮಾಜಿ ಡಿ.ಸಿ.ಎಮ್. ಲಕ್ಷö್ಮಣ ಸವದಿ, ಶಾಸಕ ಬಸಣ್ಣಗೌಡಾ ಪಾಟೀಲ ಯತ್ನಾಳ, ಮುರಗೇಶ ನಿರಾಣಿ, ವೀಣಾ ಕಾಸಪ್ಪಣ್ಣವರ, ಎಮ್.ಎಲ್.ಸಿ.ಪಿಹೆಚ್.ಪೂಜಾರಿ, ಮಾಜಿ ಶಾಸಕ ಆನಂದ ನ್ಯಾಮಗೌಡರ, ಬಿಂದ್ರಾ ಹೂನ್ನೂರ, ಬಿ.ಜೆ.ಪಿ.ಪಕ್ಷದ ರಾಜ್ಯಾಧ್ಯಕ್ಷ ಬಿ.ವಾಯ್.ವಿಜಯೇಂದ್ರ ಸೇರಿದಂತೆ ಅನೇಕ ಮುಖಂಡರು ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಶುಭ ಹಾರೈಸಿದರು.
ಪಂಚಕಲ್ಯಾಣ ಪೂಜೆ ಯಶ್ವಸಿಗೊಳಿಸಲು ಜೈನ ಸಮಾಜದ ಪೂಜಾ ಕಮೀಟಿಯ ಮುಖಂಡರಾದ ಅಭಯ ಶಿರಹಟ್ಟಿ, ವರ್ಧಮಾನ, ವಂಕಟ ಬಾಬಣ್ಣವರ, ಡಾ||ಅರ್ಚನಾ ಪಾಟೀಲ, ರಾಹುಲ ಸವದತ್ತಿ, ಭಗವಂತ ಸಾಬಣ್ಣವರ, ಕಲ್ಲಪ್ಪಾ ಶಿರಹಟ್ಟಿ, ರಾಜಶೇಖರ ಚವಜ, ಸೇರಿದಂತೆ ಅನೇಕ ಕಾರ್ಯಕರ್ತರು ಸಹಕರಿಸಿದರು. ಸುಮಾರು ೬೦ ಸಾವಿರ ಶ್ರಾವಕ ಶ್ರಾವಕಿಯರು ಪೂಜ ವಿಧಿ ವಿಧಾನದಲ್ಲಿ ಭಾಗವಹಿಸಿದ್ದರು ಎಂದು ಸಂಯೋಜಕರು ತಿಳಿಸಿದರು.

Tags:

error: Content is protected !!