Kagawad

ಮೋದಿ ಸರ್ಕಾರಕ್ಕೆ ದಿಕ್ಕಾರ ಕೂಗಿದ ಸಿ ಐ ಟಿ ಯೂ ಕಾಗವಾಡ ಸಂಘಟನೆ.

Share

ಕಾಗವಾಡದ ರಾಣಿ ಚೆನ್ನಮ್ಮ ವೃತ್ತದಿಂದ ತಹಶೀಲ್ದಾರ್ ಕಚೇರಿ ಅವರಿಗೆ ಅಂಗನವಾಡಿ,ಆಶಾ ಕಾರ್ಯಕರ್ತರು , ಬಿಸಿ ಊಟದ ಮಹಿಳಾ ಸಂಘಟನೆ, ಸಿ ಐ ಟಿ ಯು ಹಾಗೂ 10 ಕ್ಕೂ ಹೆಚ್ಚು ಕಾರ್ಮಿಕ ಸಂಘಟನೆಗಳು ಭಾರತ್ ಬಂದ್ ಗೆ ಕರೆ ನಿಡಿದ ಹಿನ್ನಲೆಯಲ್ಲಿ ಸುಮಾರು 500 ಕಾರ್ಯಕರ್ತರು ಜಮಾವಣೆ ಗೊಂಡು ರಾಲಿ ಮುಖಾಂತರ ಆಗಮಿಸಿ ಕೆಲ ಸಮಯ ತಹಶೀಲ್ದಾರ್ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ನಂತರ. ತಹಶೀಲ್ದಾರ್ ರವೀಂದ್ರ ಹಾದಿಮನಿ ಇವರಿಗೆ ಮನವಿ ಅರ್ಪಿಸಿ ಕೇಂದ್ರ ಸರ್ಕಾರ ಮಾಡುತ್ತಿರುವ ಅನ್ಯಾಯ ಬಗ್ಗೆ ಅಕ್ರೋಶ ವ್ಯಕ್ತಪಡಿಸಿದರು.

ಮಾದ್ಯಮಗಳೊಂದಿಗೆ ಮಾತನಾಡಿದ ಕಾಗವಾಡ ತಾಲೂಕಾ ಸಿ ಐಟಿ ಯು ಸಂಘಟನೆಯ ಅದ್ಯಕ್ಷೆ ಶ್ರೀಮತಿ ಸುವರ್ಣ ಕಮತೆಗೆ ಕೇಂದ್ರ ಸರ್ಕಾರ ಸಚಿವರಾದ ಕುಮಾರಸ್ವಾಮಿ, ಪ್ರಹ್ಲಾದ ಜೋಶಿ ಇವರು ಹುಬ್ಬಳ್ಳಿಯಲ್ಲಿ ನಮ್ಮ ಕಾರ್ಮಿಕ ಸಂಘಟನೆಗೆ ನಿಮ್ಮ ಬೇಡಿಕೆಗಳು ಈಡೇರಿಸುತ್ತೇವೆ ಎಂದು ಹೇಳಿ, ದಿಲ್ಲಿಗೆ ಹೋಗಲು ಫ್ಲೈಟ್ ಬುಕ್ ಮಾಡಿಕೊಟ್ಟಿದ್ದರು, ಆದರೆ ಅವರಿಂದ ಯಾವುದೇ ಬೇಡಿಕೆಗಳು ಈಡೇರಲಿಲ್ಲ ಒಂದು ರೀತಿ ನಮಗೆ ದ್ರೋಹವಾಗಿದೆ. ಅದರಂತೆ ಸಿ ಐ ಟಿ ಯು ಸಂಘಟನೆಯು ವಿವಿಧ ಇಲಾಖೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕಾರ್ಮಿಕ ವರ್ಗದವರ ಹಲವಾರು ಬೇಡಿಕೆಗಳಿಗೆ ಸ್ಪಂದನೆ ನಿಡುತ್ತಿಲ್ಲಾ ಹಾಗೂ ಅಂಗನವಾಡಿ ನೌಕರರಿಗೆ ದ್ರೋಹ ಬಗೆದ ಕಾರ್ಮಿಕ ಸಂಹಿತೆಗಳು ರದ್ದಾಗ ಬೇಕು, ಇ ಎಸ್ ಆಯ್, ಪ ಎಫ್ ನೀಡಬೇಕು ಎಪ್ ಆರ್ ಎಸ್ ರದ್ದಾಗಬೇಕು ಹಿಗೆ ಹತ್ತು ಹಲವಾರು ಬೇಡಿಕೆಗಳನ್ನು ಕೆಂದ್ರ ಸರ್ಕಾರ ಕೂಡಲೆ ನಿಡಬೇಕು ಎಂದು ಇಂದು ಅಂಗನವಾಡಿ ಕೇಂದ್ರಗಳನ್ನು ಬಂದ್ ಮಾಡಿ ಅಖಿಲ ಭಾರತ ಸಾರ್ವತ್ರಿಕ ಮುಷ್ಕರ ಹಮ್ಮಿಕೋಳ್ಳ ಲಾಗಿದೆ ಎಂದರು.

ಆಶಾ ಕಾರ್ಯಕರ್ತರ ಸಂಘಟನೆಯ ಅಧ್ಯಕ್ಷ ರೂಪಾ ಚರಾಟೆ, ಶಾಂತಾ ಹಿರೇಮಠ, ಪ್ರೇಮಾ ಹುಲವಾನ್ ಕಾರ್ಯಕರ್ತರು ಮನಿವಾರಿಸಿ ತಮ್ಮ ಅಳಲನ್ನು ತೋಡಿಕೊಂಡರು, ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತರನ್ನು ಚುನಾವಣೆಯ ಬಿ ಎಲ್ ಓ, ಕೆಲಸದಿಂದ ಕೈ ಬಿಟ್ಟಿದ್ದರಿಂದ ಸರ್ಕಾರಕ್ಕೆ ಧನ್ಯವಾದ ಸಲ್ಲಿಸಿದರು,

ತಹಸಿಲದಾರ ರವೀಂದ್ರ ಹಾದಿಮನಿ, ಗ್ರೇಡ್ 2 ತಹಶೀಲ್ದಾರ್ ರಶ್ಮಿ ಜಕಾತಿ, ಸಿಡಿಪಿಓ ರವೀಂದ್ರ ಗುದುಗೆನವರ್ ಇವರು ಮನವಿ ಸ್ವೀಕರಿಸಿ ನಿಮ್ಮ ಬೇಡಿಕೆಗಳು ಸರ್ಕಾರ ಗಮನಕ್ಕೆ ತರಲು ಹಿರಿಯ ಅಧಿಕಾರಿಗಳಿಂದ ಪ್ರಯತ್ನಿಸುತ್ತೇವೆ ಎಂದು ಭರವಸೆ ನೀಡಿದರು.
ಪ್ರತಿಭಟನೆಯಲ್ಲಿ ಸುವರ್ಣಾ ಕಮತಿಗೆ, ಸ್ವೇತಾ ಕಾಂಬಳೆ, ನಿರ್ಮಲ ಮಾಳಿ ನಿರ್ಮಲಾ ಮಾಳಿ, ಕವಿತಾ ಸಲಗರ, ಮಾಲಾ ಕಂಮತೆ, ಆಶಾ ಕಾರ್ಯಕರ್ತರಾದ, ಶಾಂತಾ ಹಿರೇಮಠ, ಪ್ರೇಮಾ ಹುಲವಾನ, ಸರಸ್ವತಿ ಪವಾರ್, ರೂಪಾಲಿ ವಡ್ಡರ್, ಮಹಾದೇವಿ ಪಾಟೀಲ್, ಸೇರಿದಂತೆ ಪ್ರತಿಭಟನೆಯಲ್ಲಿ ಸುಮಾರು 500 ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತರು ಪಾಲ್ಗೊಂಡಿದ್ದರು.

Tags:

error: Content is protected !!