ಬೆಳಗಾವಿ ಪೊಲೀಸ್ ಹೆಡ್ ಕ್ವಾಟರ್ಸ್’ನಲ್ಲಿ ನೂತನ ಪೊಲೀಸ್ ವಸತಿ ಗೃಹಗಳ ನಿರ್ಮಾಣ ಕಾಮಗಾರಿಗ ಉತ್ತರ ಶಾಸಕ ಆಸೀಫ್ ಸೇಠ್ ಅವರು ಭೂಮಿ ಪೂಜೆಯನ್ನು ನೆರವೇರಿಸಿದರು.


ಬೆಳಗಾವಿ ಜಿಲ್ಲಾ ಪೊಲೀಸ್ ನಗರ ಡಿ.ಎ.ಆರ್.ಹೆಡ್ ಕ್ವಾಟರ್ಸ್’ನಲ್ಲಿ ಪೊಲೀಸ್ ಗೃಹ 2025 ಯೋಜನೆ ಹಂತ 5 ಪ್ಯಾಕೇಜ್ 71, 221.00 ಲಕ್ಷದಲ್ಲಿ 6 ಪೊಲೀಸ್ ಅಧಿಕಾರಿಗಳ ವಸತಿ ಗೃಹಗಳ ಕಾಮಗಾರಿಗೆ ಬೆಳಗಾವಿ ಉತ್ತರ ಶಾಸಕ ಆಸೀಫ್ ಸೇಠ್ ಅವರು ಭೂಮಿ ಪೂಜೆ ನೆರವೇರಿಸಿದರು.

ನಂತರ ಮಾತನಾಡಿದ ಶಾಸಕ ಆಸೀಫ್ ಸೇಠ್ ಅವರು, ಬೆಳಗಾವಿಯ ಪೊಲೀಸ್ ಹೆಡ್ ಕ್ವಾಟರ್ಸ್’ನಲ್ಲಿ ಗ್ರೌಂಡ್ ಪ್ಲಸ್ 2, 6 ವಸತಿ ಗೃಹಗಳ ನಿರ್ಮಾಣವನ್ನು ಮಾಡಲಾಗುತ್ತಿದೆ. ಗೃಹವರ್ಷದೊಳಗೆ ಕಾಮಗಾರಿಯನ್ನು ಮುಗಿಸಿ ಪೊಲೀಸ ಕುಟುಂಬಗಳಿಗೆ ಹಸ್ತಾಂತರಿಸಲಾಗುವುದು. ಇದು ಮೊದಲ ಹಂತದ ಕಾಮಗಾರಿಯಾಗಿದೆ. ಪೊಲೀಸ್ ಸಿಬ್ಬಂದಿಗಳ ಕುಟುಂಬಗಳಿಗೆ ವಸತಿ ಗೃಹಗಳು ಅತ್ಯವಶ್ಯವಾಗಿವೆ. ಮುಂದೆ ಮತ್ತೊಂದು ಹಂತದಲ್ಲಿ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗುವುದು ಎಂದರು.

ಎಸ್ಪಿ ಕೆ. ರಾಮರಾಜನ್ ಅವರು ಶಾಸಕರ ಈ ಕಾರ್ಯವನ್ನು ಶ್ಲಾಘಿಸಿದರು.
ಈ ಸಂದರ್ಭದಲ್ಲಿ ಪೊಲೀಸ್ ಅಧಿಕಾರಿಗಳು ಸೇರಿದಂತೆ ಇನ್ನುಳಿದವರು ಉಪಸ್ಥಿತರಿದ್ಧರು.
