ಹುಕ್ಕೇರಿ ನಗರದಲ್ಲಿ ಕೇಂದ್ರ ಸರ್ಕಾರದ ವಿರುದ್ಧ ದಿಕ್ಕಾರ ಕೂಗಿದ ಸಿ ಐ ಟಿ ಯು ಸಂಘಟನೆ.
ಪಟ್ಟಣದ ಅಂಬೇಡ್ಕರ್ ಉದ್ಯಾನವನದಲ್ಲಿ ಹುಕ್ಕೇರಿ ತಾಲೂಕಿನ ಅಂಗನವಾಡಿ,ಆಶಾ ಕಾರ್ಯಕರ್ತರು ಸೇರಿದಂತೆ ಗ್ರಾಮ ಪಂಚಾಯತಿ ವಾಟರಮ್ಯಾನ್ ಮತ್ತು ಸಿ ಐ ಟಿ ಯು ಹಾಗೂ 10 ಕ್ಕೂ ಹೆಚ್ಚು ಕಾರ್ಮಿಕ ಸಂಘಟನೆಗಳು ಭಾರತ್ ಬಂದ್ ಗೆ ಕರೆ ನಿಡಿದ ಹಿನ್ನಲೆಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ಜಮಾವಣೆ ಗೊಂಡು ರ್ಯಾಲಿ ಮುಖಾಂತರ ಆಗಮಿಸಿ ಕೆಲ ಸಮಯ ಕೋರ್ಟ ಸರ್ಕಲ್ ಬಂದ ಮಾಡಿ ಪ್ರತಿಭಟನೆ ನಡೆಸಿದರು.


ನಂತರ ಮಾದ್ಯಮಗಳೊಂದಿಗೆ ಮಾತನಾಡಿದ ಹುಕ್ಕೇರಿ ತಾಲೂಕಾ ಸಿ ಐಟಿ ಯು ಸಂಘಟನೆಯ ಅದ್ಯಕ್ಷೆ ಶ್ರೀಮತಿ ಸಿ ಎಸ್ ಮಗದುಮ್ಮ ಮಾತನಾಡಿ ಕೇಂದ್ರ ಸರ್ಕಾರ ಸಿ ಐ ಟಿ ಯು ಸಂಘಟನೆಯು ವಿವಿಧ ಇಲಾಖೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕಾರ್ಮಿಕ ವರ್ಗದವರ ಹಲವಾರು ಬೇಡಿಕೆಗಳಿಗೆ ಸ್ಪಂದನೆ ನಿಡುತ್ತಿಲ್ಲಾ ಹಾಗೂ ಅಂಗನವಾಡಿ ನೌಕರರಿಗೆ ದ್ರೋಹ ಬಗೆದ ಕಾರ್ಮಿಕ ಸಂಹಿತೆಗಳು ರದ್ದಾಗ ಬೇಕು, ಇ ಎಸ್ ಆಯ್, ಪ ಎಫ್ ನೀಡಬೇಕು ಎಪ್ ಆರ್ ಎಸ್ ರದ್ದಾಗಬೇಕು ಹಿಗೆ ಹತ್ತು ಹಲವಾರು ಬೇಡಿಕೆಗಳನ್ನು ಕೆಂದ್ರ ಸರ್ಕಾರ ಕೂಡಲೆ ನಿಡಬೇಕು ಎಂದು ಇಂದು ಅಂಗನವಾಡಿ ಕೇಂದ್ರಗಳನ್ನು ಬಂದ್ ಮಾಡಿ ಅಖಿಲ ಭಾರತ ಸಾರ್ವತ್ರಿಕ ಮುಷ್ಕರ ಹಮ್ಮಿಕೋಳ್ಳ ಲಾಗಿದೆ ಎಂದರು
ನಂತರ ಪ್ರತಿಭಟನಾ ಕಾರರು ತಾಲೂಕಾ ಪಂಚಾಯತ ಮತ್ತು ತಹಸಿಲಗದಾರ ಕಛೇರಿಗೆ ತೇರಳಿ ತಾಲೂಕಾ ದಂಢಾಧಿಕಾರಿ ಬಲರಾಮ ಕಟ್ಟಿಮನಿ ಮುಖಾಂತರ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಸಿ ಐ ಟಿ ಯು ಅದ್ಯಕ್ಷೆ ಸಿ ಎಸ್ ಮಗದುಮ್ಮ, ಗೋದಾವರಿ ರಾಜಾಪೂರೆ, ಯಲ್ಲಪ್ಪಾ ನಾಯಿಕ, ಶೋಭಾ ಸಂಕನ್ನವರ, ಸುರೇಖಾ ಕಲ್ಮಣಿ, ಲಕ್ಷ್ಮಿ ತಳವಾರ, ಸುನಿತಾ ಚಾಳನ್ನವರ, ರಾಜು ಹುದ್ದಾರ, ಭಾರತಿ ಮುತ್ಯಾಗೋಳ, ಸುನಿತಾ ಗಸ್ತಿ ಸೇರಿದಂತೆ ಹುಕ್ಕೇರಿ ತಾಲೂಕಿನ ಸಿ ಐ ಟಿ ಯು ಸಂಘಟನೆಯ ಸಾವಿರಾರು ಕಾರ್ಯಕರ್ತರು ಉಪಸ್ಥಿತರಿದ್ದರು.
