Khanapur

‘ಇನ್ ನ್ಯೂಸ್’ ಬಿಗ್ ಇಂಪ್ಯಾಕ್ಟ್: ಎಚ್ಚೆತ್ತ ತಾ.ಪಂ ಅಧಿಕಾರಿಗಳಿಂದ ಸಭಾ ಭವನದಲ್ಲಿ ರಾಷ್ಟ್ರೀಯ ನಾಯಕರ ಭಾವಚಿತ್ರ ಅಳವಡಿಕೆ

Share

ಖಾನಾಪುರ ತಾಲೂಕು ಪಂಚಾಯತ್ ಸಭಾ ಭವನದಲ್ಲಿ ರಾಷ್ಟ್ರೀಯ ನಾಯಕರ ಭಾವಚಿತ್ರ ಅಳವಡಿಸದ ಬಗ್ಗೆ ಇನ್ ನ್ಯೂಸ್ ಪ್ರಸಾರ ಮಾಡಿದ್ದ ಸುದ್ದಿಗೆ ಅಧಿಕಾರಿಗಳು ತಲೆಬಾಗಿದ್ದಾರೆ. ಸಮಾಜ ಸೇವಕ ಜ್ಯೋತಿಬಾ ಬೆಂಡಿಗೇರಿ ಅವರ ಆಕ್ರೋಶಕ್ಕೆ ಕೊನೆಗೂ ಸ್ಪಂದನೆ ಸಿಕ್ಕಿದೆ.

ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕು ಪಂಚಾಯತ್ ಕಾರ್ಯಾಲಯದ ನೂತನ ಸಭಾ ಭವನದಲ್ಲಿ ರಾಷ್ಟ್ರೀಯ ನಾಯಕರ ಭಾವಚಿತ್ರಗಳನ್ನು ಅಳವಡಿಸದೆ ಮಹಾಪುರುಷರಿಗೆ ಅವಮಾನ ಮಾಡಲಾಗುತ್ತಿದೆ ಎಂದು ಸಮಾಜ ಸೇವಕ ಜ್ಯೋತಿಬಾ ಬೆಂಡಿಗೇರಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು. ಈ ಕುರಿತು ‘ಇನ್ ನ್ಯೂಸ್’ ವಾಹಿನಿಯು ಸವಿಸ್ತಾರವಾದ ವರದಿಯನ್ನು ಪ್ರಸಾರ ಮಾಡುವ ಮೂಲಕ ಆಡಳಿತ ಮಂಡಳಿಯ ನಿರ್ಲಕ್ಷ್ಯವನ್ನು ಸಾರ್ವಜನಿಕವಾಗಿ ಅನಾವರಣಗೊಳಿಸಿತ್ತು. ಅಧಿಕಾರಿಗಳ ನಡೆಗೆ ಜನಸಾಮಾನ್ಯರಿಂದಲೂ ತೀವ್ರ ವಿರೋಧ ವ್ಯಕ್ತವಾಗಿತ್ತು.

ನಮ್ಮ ವಾಹಿನಿಯಲ್ಲಿ ಸುದ್ದಿ ಪ್ರಸಾರವಾಗುತ್ತಿದ್ದಂತೆ ಎಚ್ಚೆತ್ತುಕೊಂಡ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ (EO) ರಮೇಶ್ ಮೇತ್ರಿ ಅವರು, ಕೂಡಲೇ ಸಭಾ ಭವನದಲ್ಲಿ ರಾಷ್ಟ್ರೀಯ ನಾಯಕರ ಭಾವಚಿತ್ರಗಳನ್ನು ಅಳವಡಿಸುವಂತೆ ಸೂಚನೆ ನೀಡಿ ಕಾರ್ಯರೂಪಕ್ಕೆ ತಂದಿದ್ದಾರೆ. ಸಮಾಜದ ಓರೆಕೋರೆಗಳನ್ನು ತಿದ್ದುವ ಮತ್ತು ಜನರ ಧ್ವನಿಯಾಗಿ ನಿಲ್ಲುವ ‘ಇನ್ ನ್ಯೂಸ್’ ದಿಟ್ಟತನದ ವರದಿಗೆ ಈಗ ಫಲಶ್ರುತಿ ಸಿಕ್ಕಂತಾಗಿದೆ. ಈ ಯಶಸ್ಸಿಗೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ.

Tags:

error: Content is protected !!