Kagawad

ಉಗಾರದಲ್ಲಿ 18 ತೊಲೆ ಚಿನ್ನಬರನ್ನು,350 ಗ್ರಾಮ ಬೆಳ್ಳಿ,25000 ನೆಗದು ಹೀಗೆ 30 ಲಕ್ಷದ ಮನೆ ಕಳ್ಳತನ ನಡೆದಿದೆ.

Share

ಕಾಗವಾಡ ಪೊಲೀಸ್ ಠಾಣೆ ವ್ಯಾಪ್ತಿಯ ಉಗಾರ ಖುರ್ದ್ ಪಟ್ಟಣದಲ್ಲಿ ಮನೆ ಬೀಗ ಮುರಿದು ಸುಮಾರು ೩೦ ಲಕ್ಷ ರೂಪಾಯಿ ಮೌಲ್ಯದ ಚಿನ್ನ-ಬೆಳ್ಳಿ ಆಭರಣ ಹಾಗೂ ನಗದು ಹಣ ಕಳ್ಳತನಗೊಂಡ ಘಟನೆ ನಡೆದಿದೆ. ಪಟ್ಟಣದ ನಿವಾಸಿ ಜಿನ್ನಪ್ಪಾ ಶ್ರೀಪಾಲ ಮಾಕ್ಕನ್ನವರ್ ಅವರ ಮನೆಯಲ್ಲಿ ಈ ಕಳ್ಳತನ ನಡೆದಿದ್ದು, ಮನೆಯಲ್ಲಿದ್ದ ೧೮ ತೊಲೆ ಚಿನ್ನಾಭರಣ, ೩೫೦ ಗ್ರಾಂ ಬೆಳ್ಳಿ ಆಭರಣಗಳು ಹಾಗೂ ರೂ. ೨೫,೦೦೦ ನಗದು ಕಳುವಾಗಿದೆ.

ಜಿನ್ನಪ್ಪಾ ಮಾಕ್ಕನ್ನವರ್ ಅವರು ಮನೆಯಲ್ಲಿನ ಚಿಕ್ಕ ಮಗುವಿನ ಚಿಕಿತ್ಸೆಗೆ ನಿಪ್ಪಾಣಿಗೆ ತೆರಳಿದ್ದು, ಆಸ್ಪತ್ರೆಯಲ್ಲಿ ವೈದ್ಯರ ಭೇಟಿ ವಿಳಂಬವಾದ ಕಾರಣ ರಾತ್ರಿ ಮನೆಗೆ ಮರಳಲು ಸಾಧ್ಯವಾಗದೆ ಅಲ್ಲಿಯೇ ಉಳಿದಿದ್ದರು. ಈ ಸಂದರ್ಭದಲ್ಲಿ ಮನೆಗೆ ಬೀಗ ಹಾಕಿರುವುದನ್ನು ಗಮನಿಸಿದ ಕಳ್ಳರು ತಮ್ಮ ಕೈಚಳಕ ತೋರಿಸಿರುವ ಸಾಧ್ಯತೆ ಇದೆ.

ಇದನ್ನರಿತ ಅವರ ಸುಪುತ್ರ ರಾಹುಲ್ ಬೆಂಗಳೂರಿನಿAದ ಚನ್ನಮ್ಮ ರೈಲು ಮೂಲಕ ಉಗಾರಕ್ಕೆ ಬಂದು ಮನೆಗೆ ತೆರಳಿದಾಗ ಬೀಗ ಮುರಿದ ಸ್ಥಿತಿಯಲ್ಲಿ ಕಂಡು ಬೆಚ್ಚಿಬಿದ್ದಿದ್ದಾರೆ. ಕೂಡಲೇ ತಂದೆಗೆ ಮಾಹಿತಿ ನೀಡಿದರು. ಸ್ಥಳಕ್ಕೆ ಬಂದ ಬಳಿಕ ಮನೆಯಲ್ಲಿದ್ದ ಚಿನ್ನ-ಬೆಳ್ಳಿ ಆಭರಣಗಳು ಹಾಗೂ ನಗದು ಹಣ ಕಳವಾಗಿರುವುದು ದೃಢಪಟ್ಟಿದೆ.

ತಕ್ಷಣ ಕಾಗವಾಡ ಪೊಲೀಸ್ ಠಾಣೆಗೆ ದೂರು ನೀಡಲಾಗಿದ್ದು, ಪಿಎಸ್‌ಐ ರಾಘವೇಂದ್ರ ಖೋತ್ ನೇತೃತ್ವದಲ್ಲಿ ತನಿಖೆ ಕೈಗೊಳ್ಳಲಾಗಿದೆ. ಬೆಳಗಾವಿಯಿಂದ ಶ್ವಾನದಳ ಹಾಗೂ ಬೆರಳಚ್ಚು ತಜ್ಞರನ್ನು ಕರೆಸಿ ಸ್ಥಳ ಪರಿಶೀಲನೆ ನಡೆಸಲಾಗಿದೆ. ತಡರಾತ್ರಿ ಪ್ರಕರಣ ದಾಖಲಾಗಿ ಮುಂದಿನ ತನಿಖೆ ಪ್ರಗತಿಯಲ್ಲಿದೆ.
ನಿಮ್ ಹೆಸರೇನು
ಪ್ರೇಮ ಜಿನ್ನಪ್ಪ ಮಾಕನವರ್, ಉತ್ತರ ರಾಹುಲ್ ಮಾಕನ್ನು ತಮ್ಮ ಆಳಲುವನ್ನು ತೋಡಿಕೊಂಡರು.

Tags:

error: Content is protected !!