ರಾಜ್ಯದ ಮೊದಲ ಜನಪ್ರಿಯ ಮುಖ್ಯಮಂತ್ರಿ ಕೆಂಗಲ್ ಹನುಮಂತಯ್ಯನವರ ಜನ್ಮದಿನದ ಅಂಗವಾಗಿ ಸಿಎಂ ಸಿದ್ದರಾಮಯ್ಯ ಪುಷ್ಪನಮನ ಸಲ್ಲಿಸಿದರು. ಇದೇ ವೇಳೆ ವಿಧಾನ ಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಂಗಲ್ ಅವರ ಆದರ್ಶಗಳನ್ನು ಸ್ಮರಿಸಿದ್ದಲ್ಲದೆ, ಡಿ.ಕೆ. ಶಿವಕುಮಾರ್ ಅವರ ಗೈರು ಹಾಜರಿ ಹಾಗೂ ಪವರ್ ಶೇರಿಂಗ್ ಕುರಿತಾದ ಚರ್ಚೆಗಳಿಗೆ ನೇರವಾಗಿಯೇ ಉತ್ತರಿಸಿದ್ದಾರೆ


ಕರ್ನಾಟಕ ಏಕೀಕರಣದ ರೂವಾರಿ ಹಾಗೂ ವಿಧಾನಸೌಧದ ನಿರ್ಮಾತೃ ದಿವಂಗತ ಕೆಂಗಲ್ ಹನುಮಂತಯ್ಯನವರ ಜನ್ಮದಿನದ ಅಂಗವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು.ನಂತರ ಮಾಧ್ಯಮಗಳೊಂದಿಗೆ ಅವರು ಮಾತನಾಡಿದರು. ದಿ. ಕೆಂಗಲ್ ಹನುಮಂತಯ್ಯನವರು ಪ್ರಾಮಾಣಿಕ ಧಿಮಂತ ರಾಜಕಾರಣಿ…ಈ ಸುಂದರ ವಿಧಾನಸೌಧವನ್ನು ನಿರ್ಮಿಸಿದವರು. ಅವರನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ. ದೇಶಕ್ಕಾಗಿ ಮತ್ತು ಕರ್ನಾಟಕ ಏಕೀಕರಣಕ್ಕಾಗಿ ಹೋರಾಡಿದವರು. ಕೇಂದ್ರದಲ್ಲಿ ರೇಲ್ವೆ ಸಚಿವರಾಗಿ ವಿವಿಧ ಸೇವೆಗಳನ್ನು ಸಲ್ಲಿಸಿದವರು. ಹಲವಾರು ಸಲಹೆಗಳನ್ನು ಅವರು ಸಂವಿಧಾನ ರಚನಾ ಸಮಿತಿಗೆ ನೀಡವರು. ಅವರು ಈ ರಾಜ್ಯದ ಮೊದಲ ಜನರಿಂದ ಆಯ್ಕೆಯಾದ ಮುಖ್ಯಮಂತ್ರಿಯಾಗಿದ್ದರು. ವಿಧಾನ ಸೌಧವನ್ನು ನಿರ್ಮಿಸಲು ಶ್ರಮಿಸಿದ ಅವರು ಮುಖ್ಯಮಂತ್ರಿಯಾಗಿ ಅದನ್ನು ಉದ್ಘಾಟಿಸದಿರುವುದು ನೋವಿನ ಸಂಗತಿ. ಅವರ ಆದರ್ಶಗಳು ಮತ್ತು ಸಿದ್ಧಾಂತ ನಮ್ಮೆಲ್ಲರಿಗೂ ಮಾರ್ಗದರ್ಶಕ ಎಂದರು.
ಎಸ್.ಐ.ಆರ್ ಬಗ್ಗೆ ಮಾತನಾಡಲೂ ನಿರಾಕರಿಸಿದ ಅವರು ಬಜೆಟ್ ಅಧಿವೇಶನದ ಪೂರ್ವ ಸಭೆಗೆ ಡಿಸಿಎಂ ಡಿ.ಕೆ.ಶಿವಕುಮಾರ್ ಅವರ ಗೈರು ಹಾಜರಿಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಸಿಎಂ, ಅಸ್ಸಾಂ ಚುನಾವಣೆ ಹಿನ್ನೆಲೆ ಸಭೆಗೆ ತೆರಳಬೇಕಾಗಿದ್ದು, ದೆಹಲಿಗೆ ಹೋಗಬೇಕಾಗಿದೆ ಎಂದು ಪತ್ರ ಬರೆದು ತಿಳಿಸಿದ್ದಾರೆ ಎಂದರು. ಇನ್ನು ಪವರ್ ಶೇರಿಂಗ್ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ನಾನು ಮತ್ತು ಸಿಎಂ ಕದ್ದು ಮುಚ್ಚಿ ಮಾತನಾಡಿಲ್ಲ ಎಂಬ ಹೇಳಿಕೆಗೆ ನಾವು ಹೈಕಮಾಂಡ್ ತಿರ್ಮಾನಕ್ಕೆ ಬದ್ಧ ಎಂದ ಅವರು ದೆಹಲಿಗೆ ಕರೆದರೇ ಹೋಗುತ್ತೇನೆ ಎಂದರು.
ಇನ್ನು ವರ್ಗಾವಣೆಯಲ್ಲಿ ಯತೀಂದ್ರ ಸಿದ್ಧರಾಮಯ್ಯ ಹಸ್ತಕ್ಷೇಪ ಮಾಡುತ್ತಿದ್ದಾರೆಂಬ ಪ್ರತಾಪ್ ಸಿಂಗ್ ಹೇಳಿಕೆಗೆ, ಪ್ರತಾಪ್ ಸಿಂಗ್’ಗೆ ಟಿಕೇಟ್ ನೀಡಿಯೇ ಇಲ್ಲ ಎಂದು ಹೇಳಿ ಮುನ್ನಡೆದರು.
