Dharwad

ಕೃಷಿ ಚಟುವಟಿಕೆಗೆ ಸಂಬಂಧಿಸಿದಂತೆ ತಹಶೀಲ್ದಾರರಿಗೆ ಕೆಲವೊಂದಿಷ್ಟು ನೇರ ಅಧಿಕಾರ ನೀಡಲಾಗಿದೆ- ಕೃಷ್ಣ ಭೈರೇಗೌಡ.

Share

ಕೃಷಿ ಚಟುವಟಿಕೆಗೆ ಸಂಬಂಧಿಸಿದಂತೆ ರೈತರ ಪರವಾಗಿ ಕೆಲವೊಂದಿಷ್ಟು ಆದೇಶ ಮಾಡಲು ನೇರವಾಗಿ ತಹಶೀಲ್ದಾರರಿಗೆ ಅಧಿಕಾರ ನೀಡಲಾಗಿದೆ ಎಂದು ಕಂದಾಯ ಸಚಿವ ಕೃಷ್ಣ ಭೈರೇಗೌಡ ಹೇಳಿದರು.

ಧಾರವಾಡದಲ್ಲಿ ಮಾತನಾಡಿದ ಅವರು, ರಸ್ತೆ ಮಾಡಿಕೊಡಲು ನಮಗೆ ಅಧಿಕಾರವಿಲ್ಲ. ಆದರೆ, ರೈತರು ಬೀಜ, ಗೊಬ್ಬರ ಹಾಗೂ ಕಟಾವು ಮಾಡಿದ ಫಸಲನ್ನು ತರಲು ಹಾಗೂ ತೆಗೆದುಕೊಂಡು ಹೋಗಲು ಅವಕಾಶ ಇದೆ. ಇದರ ಸಂಪೂರ್ಣ ಅಧಿಕಾರವನ್ನು ತಹಶೀಲ್ದಾರರಿಗೆ ನಾವು ನೀಡಿದ್ದೇವೆ. ರೈತರು ಕೃಷಿ ಜಮೀನಿನಲ್ಲಿ ರಸ್ತೆ ಕೇಳುತ್ತಾರೆ ಅದಕ್ಕೆ ನಾವು ಸಂಪರ್ಕ ಕೊಡಿಸಬಹುದು. ಇಲ್ಲವೇ ಅವಕಾಶ ಬಿದ್ದರೆ ಐಪಿಸಿ ಹಾಕಲು ಅವಕಾಶ ಇದೆ. ಆದರೆ ರಸ್ತೆ ಘೋಷಣೆ ಮಾಡುವ ಅಧಿಕಾರ ಸಿವಿಲ್‌ ಕೋರ್ಟ್‌ಗೆ ಮಾತ್ರ ಇದೆ ಎಂದರು. ಜತೆಗೆ ಇದು ಕೇಂದ್ರ ಸರ್ಕಾರದ ಕಾಯ್ದೆಯಲ್ಲಿ ಬರಲಿದೆ. ಇದು ನಮ್ಮ ಕಂದಾಯ ಇಲಾಖೆಗೆ ಬರುವುದಿಲ್ಲ. ಜನರಿಗೆ ಸಮಸ್ಯೆ ಆಗುತ್ತದೆ ನಿಜ. ಆದರೆ, ಕಾನೂನು ಪರಿಸ್ಥಿತಿ ಈ ರೀತಿ ಇದೆ. ರೈತರೇ ಮುಂದೆ ಬಂದು ರಸ್ತೆ ಮಾಡಲು ಜಮೀನು ಕೊಟ್ಟೆ ಅದಕ್ಕೆ ಏನು ದಾಖಲೆ ಮಾಡಬೇಕು ಎಂಬುದನ್ನು ತಹಶೀಲ್ದಾರರಿಗೆ ಹೇಳಬಹುದು. ರಸ್ತೆಗೆ ಜಮೀನು ಕೊಟ್ಟ ರೈತರಿಗೆ ಪರಿಹಾರ ಕೊಡಬೇಕು ಎಂದಾದರೆ ಹಳ್ಳಿಗಳಲ್ಲಿ ಇಂತಹ ಲಕ್ಷಾಂತರ ಜಮೀನು ಇವೆ. ಇವತ್ತಿನ ಕಾಲದಲ್ಲಿ ರಾಷ್ಟ್ರೀಯ ಹೆದ್ದಾರಿಗೆ ಜಮೀನು ಸ್ವಾಧೀನ ಮಾಡೋದೆ ಅಸಾಧ್ಯ ಆಗಿದೆ. ಒಂದು ಹಳ್ಳಿಗೆ ಹತ್ತು ರಸ್ತೆ ಮಾಡಬೇಕು ಎಂದರೆ ತಾವೇ ಯೋಚನೆ ಮಾಡಿ ಎಂದು ಅಭಿಪ್ರಾಯಪಟ್ಟರು.

Tags:

error: Content is protected !!