Dharwad

ಧಾರವಾಡದ ಸೋಮೇಶ್ವರ ಗುಡ್ಡದಲ್ಲಿ ಅಗ್ನಿ ಅವಘಡ, ಹೊತ್ತಿ ಉರಿದ ಗುಡ್ಡ…

Share

ಧಾರವಾಡದ ಸೋಮೇಶ್ವರ ಗುಡ್ಡದಲ್ಲಿ‌ ಅಗ್ನಿ ಅವಘಡ ಸಂಭವಿಸಿದ ಪರಿಣಾಮ ಅರ್ಧಗುಡ್ಡದಲ್ಲಿ ಗೀಡಗಳು ಬೆಂಕಿಗೆ ಆಹುತಿಯಾಗಿ ಉರಿದ ಘಟನೆ ನಡೆದಿದ್ದು, ಬೆಂಕಿ ಧಗದಗಿಸುವುದನ್ನು ನೋಡಿದ ಸ್ಥಳೀಯರು ಕೆಕಾಲ ಬೆಚ್ಚಿಬಿದಿದ್ದಾರೆ.

ಧಾರವಾಡ ಸೋಮೇಶ್ವರ ನಗರಕ್ಕೆ ಹೊಂದಿಕೊಂಡಿರುವ ಗುಡ್ಡದಲ್ಲಿ ಈ ಅಗ್ನಿ ಅವಘಡ ಸಂಭವಿಸಿದೆ. ಸಮಯ ಕಳೆಯುವುತ್ತಿದಂತೆ ಬೆಂಕಿ ಬಹುತೇಕ ಅರ್ಧಗುಡ್ಡಕ್ಕೆ ವ್ಯಾಪಿಸಿ ಗೀಡಗಳನ್ನು ಸುಟ್ಟು ಹಾಕಿದೆ. ಯಾರೋ ಕಿಡಗೇಡಿಗಳು ಬೆಂಕಿ ಹಚ್ಚಿ ಹೋಗಿರುವ ಶಂಕೆ ವ್ಯಕ್ತವಾಗಿದ್ದು, ಸ್ಥಳೀಯರು ಬೆಂಕಿ ನೋಡಿ ಕೂಡಲೇ ಧಾರವಾಡ ಅಗ್ನಿ ಶಾಮಕದಳಕ್ಕೆ ಮಾಹಿತಿ ನೀಡಿದರು. ‌ತಕ್ಷಣ ಅಲರ್ಟ ಆಗಿ ಘಟನಾ ಸ್ಥಳಕ್ಕೆ ಆಗಮಿಸಿದ ಅಗ್ನಿ ಶಾಮಕದಳದ ಸಿಬ್ಬಂದಿ ಬೆಂಕಿ ನಂದಿಸಲು ಸುಮಾರು ಒಂದು ಗಂಟೆ ಹರಸಾಹಸ ಪಟ್ಟು ಬೆಂಕಿ ನಿಯಂತ್ರಣಕ್ಕೆ ತಂದಿದ್ದಾರೆ ಎಂದು ತಿಳಿದು ಬಂದಿದೆ. ವಿದ್ಯಾಗಿರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಗುಡ್ಡಕ್ಕೆ ಹೊಂದಿಕೊಂಡಿರುವ ಸೋಮೇಶ್ವರ ನಗರದ ನಿವಾಸಿಗಳ ಕೆಲಕಾಲ ಹೋಗೆ ಹಾಗೂ ಬೆಂಕಿಯಿಂದಾಗಿ ಬೆಚ್ಚಿಬಿದ್ದರು. ಈಗ ಅಗ್ನಿ ಶಾಮಕದಳದ ಸಿಬ್ಬಂದಿ ಕಾರ್ಯಾಚರಣೆಯಿಂದ ಸದ್ಯ ಸ್ಥಳೀಯರು ನಿಟ್ಟುಸಿರು ಬಿಟ್ಟಿದ್ದಾರೆ.

Tags:

error: Content is protected !!