ನಿಪ್ಪಾಣಿ ನಗರ ಹಾಗೂ ಜತ್ರಾಟ್ ವೆಸನಲ್ಲಿ ಗಾಂಜಾ ಸೇವಿಸುತ್ತಿದ್ದ ಯುವಕರನ್ನು ಬಂಧಿಸಿದ ನಿಪ್ಪಾಣಿ ಪೊಲೀಸರು ಕ್ರಮಕೈಗೊಂಡು ತನಿಖೆಯನ್ನು ನಡೆಸುತ್ತಿದ್ದಾರೆ.

ಬಸವೇಶ್ವರ ಪೊಲೀಸ್ ಠಾಣೆಯ ವ್ಯಾಪ್ತಿಯ ದನಗಳ ಪೇಟೆ ಹತ್ತಿರ ಹಾಗೂ ಜತ್ರಾಟವೆಸನಲ್ಲಿ
ಕುಳಿತು ಅಮಲೇರುವಂತಹ ಗಾಂಜಾ ಅಂಬುವ ಮಾಧಕಪದಾರ್ಥಗಳನ್ನು ಸೇವಿಸುತ್ತಿದ್ದ ಯುವಕರನ್ನು ಸಿಪಿಐ ರಮೇಶ ಪವಾರ ನೇತೃತ್ವದಲ್ಲಿ ಕಾರ್ಯಾಚರಣೆಯನ್ನು ಮಾಡಿ ಯುವಕರನ್ನು ಬಂಧಿಸಿ,ವೈದ್ಯಕೀಯ ಚಿಕಿತ್ಸೆಗೆ ಒಳಪಡಿಸಿದಾಗ ಯುವಕರು ಗಾಂಜಾ ಸೇವಿಸಿರುವುದು ದೃಢಪಟ್ಟಿದೆ.
ಕಾರ್ತಿಕ ಮಹಾದೇವ ಜಾಧವ,ಅನಿಕೇತ ಗಂಗಾರಾಮ ಘಸ್ತೆ,ಸಾಹಿಲ್ ಪ್ರತಾಪ ವಾಳಕೆ,ರೋಹನ ಸಂತೋಷ ಕಾಂಬಳೆ ಎಂಬ ಯುವಕರನ್ನು ಬಂಧಿಸಲಾಗಿದೆ.
