Vijaypura

ದೊಡ್ಡ ಹೆಡೆ ನಾಗರ ಹಾವು ರಕ್ಷಣೆ ; ಕೊಂಡಗುಳಿಯಲ್ಲಿ ಭೀತಿ ಮೂಡಿಸಿದ್ದ ಉರಗ..!

Share

ವಿಜಯಪುರ ಜಿಲ್ಲೆಯ ಕೊಂಡಗುಳಿ ಗ್ರಾಮದಲ್ಲಿ ಜನರ ಭಯ ಮೂಡಿಸಿದ್ದ ದೊಡ್ಡ ಹೆಡೆ ನಾಗರ ಹಾವನ್ನ ಉರಗ ರಕ್ಷಕ ಸ್ನೇಕ್ ಜಾವೇದ್ ರಕ್ಷಣೆ ಮಾಡಿದ್ದಾರೆ. ಮೊನ್ನೆಯಿಂದ ದೇವರಹಿಪ್ಪರಗಿ ತಾಲೂಕಿನ ಕೊಂಡಗುಳಿ ಗ್ರಾಮದ ಸಂತೋಷ ಮಲ್ಲಾಡ್ ಎಂಬುವರ ಮನೆಯಲ್ಲಿ ಹಾವು ಕಾಣಿಸಿಕೊಂಡಿತ್ತು. ಬಳಿಕ ಆಕಾರದಲ್ಲಿ ದೊಡ್ಡದಿದ್ದ ನಾಗರ ಹಾವು ಕಂಡು ಸ್ಥಳೀಯರು ಬೆಚ್ಚಿಬಿದ್ದಿದ್ದರು. ಮಲ್ಲಾಡ್ ಅವರ ಅಕ್ಕಪಕ್ಕದ ಮನೆಗಳ ಬಳಿಯೂ ನಾಗರ ಕಾಣಿಸಿಕೊಂಡ ಪರಿಣಾಮ ಸ್ಥಳೀಯರಲ್ಲಿ ಆತಂಕ ಹೆಚ್ಚಾಗಿತ್ತು. ಬಳಿಕ ವಿಷಯ ತಿಳಿದ ಉರಗ ರಕ್ಷಕ ಜಾವೇದ್ ಹಾವು ರಕ್ಷಣೆ ಮಾಡಿ ಹೊರವಲಯದ ನಿರ್ಜನ ಪ್ರದೇಶಕ್ಕೆ ಬಿಟ್ಟಿದ್ದಾರೆ.

Tags:

error: Content is protected !!