ಮೋದಿ ವಿರುದ್ಧ ನಿಂದನೆ: ಸದನದಲ್ಲಿ ಭಾರೀ ಗದ್ದಲ.
ನಾಸಿರ್ ಅಹ್ಮದ್ ಕ್ಷಮೆಗೆ ಸಿ.ಟಿ. ರವಿ ಪಟ್ಟು.
ದೇಶಭಕ್ತಿಯುಳ್ಳವರು ಹೀಗೆ ಮಾತನಾಡಲ್ಲ: ಬಿಜೆಪಿ ಆಕ್ರೋಶ.
ಗದ್ದಲ ಹಿನ್ನೆಲೆ: ಕಲಾಪ ಕೆಲಕಾಲ ಮುಂದೂಡಿದ ಸಭಾಪತಿಗಳು
ಇಂದಿನ ಅಧಿವೇಶನದಲ್ಲಿ ಪ್ರಧಾನಿ ಮೋದಿ ವಿರುದ್ಧದ ಅವಹೇಳನಕಾರಿ ಹೇಳಿಕೆ ದೊಡ್ಡ ಮಟ್ಟದ ಸಂಘರ್ಷಕ್ಕೆ ಕಾರಣವಾಯಿತು. ಬಿಜೆಪಿ ಸದಸ್ಯ ಸಿ.ಟಿ. ರವಿ ಅವರು ನಾಸಿರ್ ಅಹ್ಮದ್ ಅವರ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿ, ಅವರ ಉಚ್ಚಾಟನೆಗೆ ಪಟ್ಟು ಹಿಡಿದರು. ‘ದೇಶಭಕ್ತಿಯುಳ್ಳ ನಾಲಿಗೆ ಇಂತಹ ಮಾತುಗಳನ್ನಾಡದು’ ಎಂದು ಗುಡುಗಿದ ಸಿ.ಟಿ. ರವಿ, ಸದನದ ಬಾವಿಗಿಳಿದು ಪ್ರತಿಭಟನೆ ನಡೆಸಿದರು. ಸಭಾಪತಿ ಬಸವರಾಜ್ ಹೊರಟ್ಟಿ ಅವರು ಮಧ್ಯಪ್ರವೇಶಿಸಿ ನಾಸಿರ್ ಅಹ್ಮದ್ ಅವರಿಗೆ ಬೇಷರತ್ ಕ್ಷಮೆಗೆ ಸೂಚಿಸಿದರೂ, ಸದನದಲ್ಲಿ ಆರೋಪ-ಪ್ರತ್ಯಾರೋಪಗಳ ಸುರಿಮಳೆಯೇ ಆಯಿತು.
ಪಿಎಂ ಮೋದಿ ಬಗ್ಗೆ ಅವಹೇಳನಕಾರಿ ಮಾತನಾಡಿದ ಬಗ್ಗೆ ವಿಧಾನ ಪರಿಷತ್ ಸದನದಲ್ಲಿ ಪ್ರಸ್ತಾಪಿಸಿದ ಸದಸ್ಯ ಸಿ.ಟಿ. ರವಿ ಅವರು ದೇಶಭಕ್ತಿಯುಳ್ಳ ನಾಲಿಗೆ ಆ ರೀತಿ ಮಾತನಾಡಲ್ಲ. ಪ್ರಧಾನಿ ಮಂತ್ರಿಗಳ ವಿರುದ್ಧ ಅವಾಚ್ಯ ಶಬ್ದ ಬಳಸಿದ ಸದಸ್ಯ ನಾಸೀರ್ ಅಹ್ಮದ್ ಅವರನ್ನು ಹೊರ ಹಾಕಬೇಕೆಂದು ಸದನದ ಬಾವಿಗಿಳಿದು ಘೋಷಣೆಗಳನ್ನು ಕೂಗಿ ಪ್ರತಿಭಟಿಸಿದರು.
ಕೋಲಹಲವನ್ನು ತಿಳಿಗೊಳಿಸಿ ಸಭಾಪತಿ ಬಸವರಾಜ್ ಹೊರಟ್ಟಿ ಅವರು ವಿಪಕ್ಷ ಸದಸ್ಯರು ನೀಡಿದ ಪತ್ರವನ್ನು ಓದಿ ತಿಳಿಸಿದರು.
ನಂತರ ಸದನದಲ್ಲಿ ಯಾರೇ ಇರಲಿ, ಗೌರವದಿಂದ ನಡೆದುಕೊಳ್ಳಬೇಕು. ಸದಸ್ಯ ನಾಸೀರ್ ಅಹ್ಮದ್ ಅವರು ಬೇಷರತ್ತಾಗಿ ಕ್ಷಮೆ ಕೇಳಬೇಕೆಂದರು.
ಇದಕ್ಕೆ ನಾಸೀರ್ ಅಹ್ಮದ್ ಅವರು ನಾವು ಪಾಕಿಸ್ತಾನದಿಂದ ಬಂದಿಲ್ಲ. ನಾವು ಇಲ್ಲಿಯೇ ಹುಟ್ಟಿ ಬೆಳೆದಿದ್ದು. ನಮ್ಮನ್ನು ಅಮಾನತ್ತು ಮಾಡಿ ಎನ್ನುವ ಬಿಜೆಪಿ ಸದಸ್ಯರನ್ನು ಕೂಡ ಅಮಾನತ್ತು ಮಾಡಿ ಎಂದರು. ಇದರಿಂದಾಗಿ ಪಕ್ಷ-ವಿಪಕ್ಷದವರ ನಡುವೆ ಆರೋಪ ಪ್ರತ್ಯಾರೋಪಗಳು ನಡೆದವು. ರಾಷ್ಟ್ರದ್ರೋಹಿ ಎಂದು ಹೇಳಿದ್ದಕ್ಕೆ ನಾಸೀರ್ ಅಹಮದ್ ಅವರ ಕ್ಷಮೆ ಕೇಳಲೇಬೇಕೆಂದು ಪಟ್ಟು ಹಿಡಿದರು. ಇದಕ್ಕೆ ಸಭಾಪತಿಗಳು ಅವರು ಕ್ಷಮೆ ಕೇಳುವವರೆಗೂ ನಡೆಯಿರಿ. ಇಲ್ಲದಿದ್ದರೇ, ತಾವೂ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದರು.
ಇದನ್ನು ಲೆಕ್ಕಿಸದೇ ಆರೋಪ ಪ್ರತ್ಯಾರೋಪಗಳು ನಡೆದ ಹಿನ್ನೆಲೆ ಸದನದ ಕಲಾಪವನ್ನು ಸಭಾಪತಿಗಳು ಕೆಲ ಕಾಲ ಮುಂದೂಡಿದರು.
