ತಾಂತ್ರಿಕ ಬೆಳವಣಿಗೆಯು ರಾಷ್ಟ್ರದ ಸರ್ವತೋಮುಖ ಪ್ರಗತಿಗೆ ಅತ್ಯಂತ ಅವಶ್ಯಕವಾಗಿದೆ. ಭಾರತ ರತ್ನ ಸರ್ ಎಂ. ವಿಶ್ವೇಶ್ವರಯ್ಯ ಅವರ ಹಾದಿಯಲ್ಲಿ ವಿದ್ಯಾರ್ಥಿಗಳು ಆವಿಷ್ಕಾರ ಹಾಗೂ ರಾಷ್ಟ್ರಸೇವೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದು ಕುಲಾಧಿಪತಿಗಳಾದ ಥಾವರಚಂದ್ ಗೆಹ್ಲೋತ್ ಅವರು ಕರೆ ನೀಡಿದರು.


ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ‘ಜ್ಞಾನ ಸಂಗಮ’ ಆವರಣದಲ್ಲಿ ಇಂದು ವಾರ್ಷಿಕ ಘಟಿಕೋತ್ಸವವು ಅತ್ಯಂತ ಯಶಸ್ವಿಯಾಗಿ ನೆರವೇರಿತು. ಕರ್ನಾಟಕದ ಗೌರವಾನ್ವಿತ ರಾಜ್ಯಪಾಲರು ಹಾಗೂ ಕುಲಾಧಿಪತಿಗಳಾದ ಥಾವರಚಂದ್ ಗೆಹ್ಲೋತ್ ಅವರ ಅಧ್ಯಕ್ಷತೆಯಲ್ಲಿ ನಡೆದ ಈ ಸಮಾರಂಭದಲ್ಲಿ ಅರ್ಹ ವಿದ್ಯಾರ್ಥಿಗಳಿಗೆ ಸ್ನಾತಕೋತ್ತರ ಹಾಗೂ ಸಂಶೋಧನಾ ಪದವಿಗಳನ್ನು ಪ್ರದಾನ ಮಾಡಲಾಯಿತು.

ಈ ವೇಳೆ ಮಾತನಾಡಿದ ರಾಜ್ಯಪಾಲರಾದ ಥಾವರ್ ಚಂದ್ ಗೇಹ್ಲೋತ್ ಅವರು ತಾಂತ್ರಿಕ ಬೆಳವಣಿಗೆಯೂ ರಾಷ್ಟ್ರದ ಅಭಿವೃದ್ಧಿಗೆ ಅತ್ಯಂತ ಮುಖ್ಯವಾಗಿದೆ. ವ್ಯವಹಾರಿಕ ಅನುಭವ, ಸೈದ್ಧಾಂತಿಕ ಜ್ಞಾನ, ತಾಂತ್ರಿಕ ಜ್ಞಾನ, ಆವಿಷ್ಕಾರ ಮತ್ತು ನವಾಚಾರದ ಅವಶ್ಯಕತೆ ಅತಿಯಾಗಿದೆ. ಭಾರತ ರತ್ನ ವಿಶ್ವೇಶ್ವರಯ್ಯಾ ಅವರ ಜೀವನವು ಅವಿಷ್ಕಾರ ತಾಂತ್ರಿಕತೆ ಮತ್ತು ರಾಷ್ಟ್ರಸೇವೆ ಮೂರು ಕೂಡಿಕೊಂಡೆ ಪ್ರಗತಿಪಥದೆಡೆ ಹೋಗಬಹುದೆಂಬದನ್ನು ಕಲಿಸುತ್ತವೆ. ಪದವಿ ಪಡೆದ ವಿದ್ಯಾರ್ಥಿಗಳ ಹಿಂದೆ ಅವರ ಶಿಕ್ಷಕರು ಮತ್ತು ಪಾಲಕರ ಶ್ರಮವಿದೆ. ವಿಶ್ವೇಶ್ವರಯ್ಯಾ ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ ಪಡೆದ ಶಿಕ್ಷಣವು ಭವಿಷ್ಯವನ್ನು ಉಜ್ವಲವಾಗಿಸಲಿದೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ನೌಕಾ ನೆಲೆಯ ಫ್ಲ್ಯಾಗ್ ಆಫೀಸರ್ ಕಮಾಂಡಿಂಗ್ ರಿಯರ್ ಅಡ್ಮಿರಲ್ ವಿಕ್ರಂ ಮೆನನ್ ಅವರು ಘಟಿಕೋತ್ಸವ ಭಾಷಣ ಮಾಡಿ ವಿದ್ಯಾರ್ಥಿಗಳಿಗೆ ಹಿತವಚನ ನೀಡಿದರು. ಇಂದಿನ ಯುಗದಲ್ಲಿ ಹೊಸ ಹೊಸ ಸವಾಲುಗಳು ಬದಲಾವಣೆಗಳು ಎದುರಾಗುತ್ತಿವೆ. ಅವುಗಳನ್ನು ಎದುರಿಸಿ ಗುರಿಯನ್ನು ಮುಟ್ಟಲೂ ಪ್ರಯತ್ನಿಸಬೇಕು. ಅಭಿಯಂತರರು ಮತ್ತು ಆಧುನೀಕ ಅಭಿಯಾಂತ್ರಿಕರಣದ ಪರಿಣಾಮಗಳನ್ನು ಅರಿತುಕೊಳ್ಳಬೇಕು. ಎಲ್ಲ ಪದವಿಧರರಿಗೂ ಸಿಗುವ ಅವಕಾಶಗಳ ಸದುಪಯೋಗಪಡಿಸಿಕೊಳ್ಳಬೇಕೆಂದರು.

ಉನ್ನತ ಶಿಕ್ಷಣ ಸಚಿವ ಡಾ. ಎಂ. ಸಿ. ಸುಧಾಕರ್ ಅವರು ಸ್ನಾತಕೋತ್ತರ ಮತ್ತು ಪಿ.ಎಚ್.ಡಿ ಉತ್ತಿರ್ಣರಿಗೆ ಇಂದು ಪದವಿ ಪ್ರದಾನವನ್ನು ಮಾಡಲಾಗುತ್ತಿದ್ದು, ಪದವಿ ಪಡೆದವರ ಭವಿಷ್ಯ ಉತ್ತಮವಾಗಿರಲಿ. ಶೀಘ್ರದಲ್ಲೇ ಕರ್ನಾಟಕ ಸರ್ಕಾರದಿಂದ ಇಂಜಿನಿಯರಿಗ್ ಕಾಲೇಜಿನಲ್ಲಿ 6, ಪಾಲಿಟೆಕ್ನಿಕ್’ಗಳಲ್ಲಿ 941 ಹುದ್ಧೆಗಳು ಹೀಗೆ ಒಟ್ಟು ಸುಮಾರು 2000 ಸಾವಿರ ಹುದ್ಧೆಗಳ ಭರ್ತಿಯನ್ನು ಮಾಡಲಾಗುತ್ತಿದೆ. ಪದವೀಧರರು ಶಿಕ್ಷಣ ಕ್ಷೇತ್ರದಲ್ಲಿ ಬದಲಾವಣೆಯ ಕಾರಣಭೂತರಾಗಿದ್ದು, ವಿಶ್ವೇಶ್ವರಯ್ಯಾ ತಾಂತ್ರಿಕ ವಿಶ್ವವಿದ್ಯಾಲಯವು ನೀಡಿದ ಜ್ಞಾನ ಕೌಶಲ್ಯವನ್ನು ಸರಿಯಾದ ಸಮಯದಲ್ಲಿ ಸದುಪಯೋಗ ಪಡಿಸಿಕೊಳ್ಳಬೇಕೆಂದು ಕರೆ ನೀಡಿದರು.
ಉನ್ನತ ಶಿಕ್ಷಣ ಸಚಿವ ಡಾ. ಎಂ. ಸಿ. ಸುಧಾಕರ್ ಅವರ ಉಪಸ್ಥಿತಿಯಲ್ಲಿ ನಡೆದ ಈ ಪದವಿ ಪ್ರದಾನ ಸಮಾರಂಭದಲ್ಲಿ ಕುಲಪತಿ ಪ್ರೊ. ವಿದ್ಯಾಶಂಕರ ಎಸ್., ಕುಲಸಚಿವ ಪ್ರೊ. ಪ್ರಸಾದ ಬಿ. ರಾಂಪೂರೆ ಹಾಗೂ ಕುಲಸಚಿವ (ಮೌಲ್ಯಮಾಪನ) ಪ್ರೊ. ಯು. ಜೇ. ಉಜ್ವಲ್ ಸೇರಿದಂತೆ ಕಾರ್ಯಕಾರಿ ಪರಿಷತ್ ಸದಸ್ಯರು ಭಾಗವಹಿಸಿದ್ದರು.
ತಂದೆ ಕೃಷಿಕರು, ತಾಯಿ ಅಭಿಯಂತರೆ, ಇವರ ಸುಪುತ್ರಿ ಶಿವಮೊಗ್ಗದ ವಿದ್ಯಾರ್ಥಿನಿ 4 ಚಿನ್ನದ ಪದಕಗಳನ್ನು ಪಡೆದು, ತಮ್ಮ ಸಾಧನೆಯ ಅನುಭವವನ್ನು ಹಂಚಿಕೊಂಡರು. ಸತ್ಯ ಧರ್ಮದಿಂದ ಸತ್ಪ್ರಜೆಯಾಗಿ ಬದುಕುತ್ತೇವೆ ಎಂದರು.
ಇನ್ನು ಸಂಚಿತಾ ಅವರು ತಮ್ಮ ಸಾಧನೆಗೆ ಸಹಾಯಕವಾದ ಶಿಕ್ಷಕರು, ಮಾರ್ಗದರ್ಶಕರು ಮತ್ತು ತಂದೆ ತಾಯಿಗಳಿಗೆ ತಮ್ಮ ಪದವಿಯನ್ನು ಸಮರ್ಪಿಸಿದರು. ಮೂರು ಪದಕಗಳನ್ನು ಪಡೆದಿರುವುದು ಸಂತಸ ತಂದಿದೆ ಎಂದರು.
