Vijaypura

ಮೋಸ ಮಾಡೋದೇ ಒಂದು ಉದ್ಯೋಗವಾಗಿದೆ: ಸಂಸದ ಗೋವಿಂದ ಕಾರಜೋಳ ಕಿಡಿ

Share

ಸ್ವಾತಂತ್ರ್ಯ ಭಾರತದ ಇತಿಹಾಸದಲ್ಲಿಯೇ ಇದು ಅತಿ ದೊಡ್ಡ ಬಜೆಟ್ ಎಂದು ಹೇಳಿದ ಅವರು, ಗಾಂಧೀಜಿಯ ಕನಸನ್ನು ನನಸು ಮಾಡುವ ಉದ್ದೇಶದಿಂದ ಪ್ರಧಾನಿ ನರೇಂದ್ರ ಮೋದಿ ಉದ್ಯೋಗ ಸೃಷ್ಟಿಗೆ ಒತ್ತು ನೀಡುವ ಬಜೆಟ್ ಮಂಡಿಸಿದ್ದಾರೆ ಎಂದರು. ಸಬ್ ಕಾ ಸಾತ್, ಸಬ್ ಕಾ ವಿಕಾಸ್ ತತ್ವದಡಿ ಮುಂದಾಲೋಚನೆಯ ಬಜೆಟ್ ಇದಾಗಿದೆ ಎಂದು ಚಿತ್ರದುರ್ಗ ಸಂಸದ ಗೋವಿಂದ ಕಾರಜೋಳ ಹೇಳಿದರು. ವಿಜಯಪುರದಲ್ಲಿ ಚಿತ್ರದುರ್ಗ ಸಂಸದ ಗೋವಿಂದ ಕಾರಜೋಳ ಅವರು ಸುದ್ದಿಗೋಷ್ಟಿ ನಡೆಸಿ ಕೇಂದ್ರ ಬಜೆಟ್‌ ಕುರಿತು ಪ್ರತಿಕ್ರಿಯಿಸಿದರು. ಇನ್ನೂ ರಾಜ್ಯದಲ್ಲಿ ವಿಶೇಷ ಅಧಿವೇಶನ ಕುರಿತು ಟೀಕೆ ಕಾಂಗ್ರೆಸ್ ವಿಶೇಷ ಅಧಿವೇಶನ ವಿಚಾರವಾಗಿ ಆಕ್ರೋಶ ವ್ಯಕ್ತಪಡಿಸಿದ ಕಾರಜೋಳ, ಜವಾಹಾರ್ ರೋಜಗಾರ್ ಯೋಜನೆ ಆರಂಭಿಸಿದಾಗಲೇ ಗಾಂಧೀಜಿ ಹೆಸರು ಇಡಬೇಕಿತ್ತು.

ಆದರೆ ಕಾಂಗ್ರೆಸ್ ಆಡಳಿತದಲ್ಲಿ ಗಾಂಧೀಜಿಯ ಹೆಸರು ಮರೆತುಹೋಗಿದೆ ಎಂದು ಆರೋಪಿಸಿದರು. ಮೋದಿ ಸರ್ಕಾರ ಸಾಬರಮತಿ ಯೋಜನೆಯ ಮೂಲಕ ನದಿಯನ್ನು ಪುನರುಜ್ಜೀವನಗೊಳಿಸಿದೆ ಎಂದು ಹೇಳಿದರು. ಇದೇ ವೇಳೆ ಸಿಎಂ ಸಿದ್ದರಾಮಯ್ಯ ವಿರುದ್ಧ ಆಕ್ರೋಶ ಹೊರ ಹಾಕಿ ರಾಜ್ಯ ಸರ್ಕಾರದ ಕುರಿತು ಮಾತನಾಡಿದ ಅವರು, ಸಿದ್ದರಾಮಯ್ಯ ಅವರು ಗಾಂಧೀಜಿಯ ಹೆಸರಿನಲ್ಲಿ ಒಂದೇ ಒಂದು ಕಾರ್ಯ ಮಾಡಿದ್ದಾರೆವಾ? ಎಂದು ಪ್ರಶ್ನಿಸಿದರು. ನಕಲಿ ಗಾಂಧಿಗಳ ಹೆಸರಿನಲ್ಲಿ ಯೋಜನೆ ರೂಪಿಸಿ ಜನರಿಗೆ ಮೋಸ ಮಾಡಲಾಗುತ್ತಿದೆ. ಮೋಸ ಮಾಡೋದೇ ಒಂದು ಉದ್ಯೋಗವಾಗಿದೆ ಎಂದು ಕಿಡಿಕಾರಿದರು. ಯೋಜನೆಗಳು ಹಾಗೂ ಬಜೆಟ್ ಅಂಶಗಳು
ಮಹಾತ್ಮ ಗಾಂಧೀಜಿ ಹೆಸರನ್ನು ತೆಗೆದು ಮೋದೀಜಿ ಹೆಸರನ್ನು ಇಡಲಿಲ್ಲ ಎಂದು ಸ್ಪಷ್ಟಪಡಿಸಿದ ಅವರು, 100 ದಿನಗಳ ಉದ್ಯೋಗವನ್ನು 120 ದಿನಗಳಾಗಿ ವಿಸ್ತರಿಸಲಾಗಿದೆ ಎಂದರು. ಮುಂಗಾರು ಹಾಗೂ ಹಿಂಗಾರು ಹಂಗಾಮಿನಲ್ಲಿ ತಲಾ 30 ದಿನಗಳ ಉದ್ಯೋಗ ನೀಡಲಾಗಿದೆ. ಗ್ರಾಮ ಪಂಚಾಯತ್ ಅಧಿಕಾರವನ್ನು ಕಿತ್ತುಕೊಂಡಿಲ್ಲ ಎಂದು ತಿಳಿಸಿದರು.

ನಿನ್ನೆ ಮಂಡಿಸಲಾದ ಬಜೆಟ್ ಅತ್ಯುತ್ತಮವಾಗಿದೆ ಎಂದು ಹೇಳಿದ ಅವರು, ಔಷಧಿಗಳ ಮೇಲಿನ ತೆರಿಗೆ ಇಳಿಸಲಾಗಿದೆ, ಆಯುಷ್ಮಾನ್ ಭಾರತ ಯೋಜನೆಯಡಿ ₹5 ಲಕ್ಷ ಆರೋಗ್ಯ ಕವರ್ ಮುಂದುವರಿ ಸಲಾಗಿದೆ ಎಂದು ಹೇಳಿದರು. ದೇಶದಲ್ಲಿ ಡಯಾಬಿಟಿಸ್ ಮತ್ತು ಕ್ಯಾನ್ಸರ್ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆ ಈ ಕ್ರಮಗಳು ಜನಪರವಾಗಿವೆ ಎಂದು ಹೇಳಿದರು. ಸುದ್ದಿಗೋಷ್ಠಿಯಲ್ಲಿ ಮಾಜಿ ವಿಧಾನಪರಿಷತ್ ಸದಸ್ಯ ಅರುಣ ಶಹಾಪುರ, ಜಿಲ್ಲಾ ಅಧ್ಯಕ್ಷ ಗುರುಲಿಂಗಪ್ಪ ಅಂಗಡಿ ಉಪಸ್ಥಿತರಿದ್ದರು.

Tags:

error: Content is protected !!