Belagavi

ಸಿಸಿಇಎ ಕ್ರಿಕೆಟ್ ಪ್ರೀಮಿಯರ್ ಲೀಗ್: ‘ಕಾಂಕ್ರೀಟ್ ಬ್ಲಾಸ್ಟರ್ಸ್’ ತಂಡಕ್ಕೆ ಚಾಂಪಿಯನ್ ಪಟ್ಟ!

Share

• ಬೆಳಗಾವಿ ಎಂಜಿನಿಯರ್‌ಗಳಿಗಾಗಿ ಕ್ರಿಕೆಟ್ ಹಬ್ಬ
• ಆರು ತಂಡಗಳ ನಡುವೆ ರೋಚಕ ಹಣಾಹಣಿ
• ಫೈನಲ್ ಪಂದ್ಯದಲ್ಲಿ ಕಾಂಕ್ರೀಟ್ ಬ್ಲಾಸ್ಟರ್ಸ್ ಜಯ
• ಎಂಜಿನಿಯರ್ ಅನಿಲ್ ಖಡಕಿ ಪಂದ್ಯ ಶ್ರೇಷ್ಠ
ಬೆಳಗಾವಿಯ ಕನ್ಸಲ್ಟಿಂಗ್ ಸಿವಿಲ್ ಎಂಜಿನಿಯರ್ಸ್ ಅಸೋಸಿಯೇಷನ್ ವತಿಯಿಂದ ಆಯೋಜಿಸಲಾಗಿದ್ದ ಮೊದಲ ಆವೃತ್ತಿಯ ‘ಸಿಪಿಎಲ್ ಕ್ರಿಕೆಟ್ ಟೂರ್ನಿ’ಯು ಅದ್ಧೂರಿಯಾಗಿ ಜರುಗಿತು. ಎಂಜಿನಿಯರ್‌ಗಳ ನಡುವಿನ ಈ ಕ್ರೀಡಾ ಸಮರದಲ್ಲಿ ಕಾಂಕ್ರೀಟ್ ಬ್ಲಾಸ್ಟರ್ಸ್ ತಂಡವು ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತು.
ಬೆಳಗಾವಿಯ ಗಣೇಶಪುರ ರಸ್ತೆಯ ಗುಡ್ ಶೆಫರ್ಡ್ ಟರ್ಫ್‌ನಲ್ಲಿ ನಡೆದ ಈ ಟೂರ್ನಿಯಲ್ಲಿ ಒಟ್ಟು ಆರು ತಂಡಗಳು ಭಾಗವಹಿಸಿದ್ದವು. ಎಸ್‌ಎಸ್ ಲ್ಯಾಂಡ್‌ಮಾರ್ಕ್ ಬಿಲ್ಡರ್ಸ್ ಅಂಡ್ ಡೆವಲಪರ್ಸ್‌ನ ವ್ಯವಸ್ಥಾಪಕ ನಿರ್ದೇಶಕ ಸುಭಾಷ್ ಗುಳಶೆಟ್ಟಿ ಅವರು ಟೂರ್ನಿಯನ್ನು ಉದ್ಘಾಟಿಸಿದ್ದರು. ಫೈನಲ್ ಪಂದ್ಯವು ‘ಕಾಂಕ್ರೀಟ್ ಬ್ಲಾಸ್ಟರ್ಸ್’ ಮತ್ತು ‘ಲೋಡ್ ಬೇರಿಂಗ್ ಲೆಜೆಂಡ್ಸ್’ ತಂಡಗಳ ನಡುವೆ ನಡೆಯಿತು. ಎಂಜಿನಿಯರ್ ಮಹೇಶ್ ಅರ್ಬೋಳೆ ಅವರ ನಾಯಕತ್ವದ ಕಾಂಕ್ರೀಟ್ ಬ್ಲಾಸ್ಟರ್ಸ್ ತಂಡವು ಅಮೋಘ ಪ್ರದರ್ಶನ ನೀಡಿ ಪ್ರಶಸ್ತಿ ಗೆದ್ದುಕೊಂಡಿತು.
ಸಮಾರೋಪ ಸಮಾರಂಭದಲ್ಲಿ ರೋಟರಿ ಗವರ್ನರ್ ಅವಿನಾಶ್ ಪೋತದಾರ್ ಬಹುಮಾನ ವಿತರಿಸಿದರು. ಎಂಜಿನಿಯರ್ ಅನಿಲ್ ಖಡಕಿ ‘ಪಂದ್ಯ ಶ್ರೇಷ್ಠ’ ಪ್ರಶಸ್ತಿ ಪಡೆದರೆ, ಎಂಜಿನಿಯರ್ ಕಿರಣ್ ‘ಸರಣಿ ಶ್ರೇಷ್ಠ’ ಗೌರವಕ್ಕೆ ಪಾತ್ರರಾದರು. ಈ ಸಂದರ್ಭದಲ್ಲಿ ಸಿಸಿಇಎ ಅಧ್ಯಕ್ಷ ರಮೇಶ್ ಮಾಳಿಪಾಟೀಲ್, ಕಾರ್ಯದರ್ಶಿ ವೀರೇಶ್ ಶೆಟ್ಟೆಣ್ಣವರ್, ಖಜಾಂಚಿ ಚಂದ್ರಕಾಂತ್ ಮನಗುಟ್ಟಿ ಹಾಗೂ ಈವೆಂಟ್ ಚೇರ್ಮನ್ ಬಸವರಾಜ ಹಮ್ಮಣ್ಣವರ್ ಉಪಸ್ಥಿತರಿದ್ದರು.

Tags:

error: Content is protected !!