Belagavi

ಬೆಳಗಾವಿಯ ಮಯಾಂಕ್ ಹಲ್ದಾರ್ ಭರ್ಜರಿ ಸಾಧನೆ: ಅಂತರರಾಷ್ಟ್ರೀಯ ಈಜು ಸ್ಪರ್ಧೆಯಲ್ಲಿ ಎರಡು ಚಿನ್ನದ ಪದಕಕ್ಕೆ ಮುತ್ತು!

Share

• ಮಯಾಂಕ್ ಹಲ್ದಾರ್ ಈಗ ‘ಗೋಲ್ಡನ್ ಬಾಯ್’
• ಹತ್ತು ದೇಶಗಳ ಸ್ಪರ್ಧೆಯಲ್ಲಿ ಭಾರತಕ್ಕೆ ಕೀರ್ತಿ
• ಚೆನ್ನೈನಲ್ಲಿ ಮಯಾಂಕ್ ಅಪ್ರತಿಮ ವೇಗದ ಪ್ರದರ್ಶನ
• ಬೆಳಗಾವಿ ರೈಲ್ವೆ ನಿಲ್ದಾಣದಲ್ಲಿ ಅದ್ಧೂರಿ ಸ್ವಾಗತ
ಚೆನ್ನೈನಲ್ಲಿ ಜರುಗಿದ ಅಂತರರಾಷ್ಟ್ರೀಯ ಏಷ್ಯಾ ಪೆಸಿಫಿಕ್ ಡೌನ್ ಸಿಂಡ್ರೋಮ್ ಫೆಡರೇಶನ್ ಈಜು ಸ್ಪರ್ಧೆಯಲ್ಲಿ ಬೆಳಗಾವಿಯ ಮಯಾಂಕ್ ಹಲ್ದಾರ್ ಎರಡು ಚಿನ್ನದ ಪದಕಗಳನ್ನು ಗೆಲ್ಲುವ ಮೂಲಕ ಜಾಗತಿಕ ಮಟ್ಟದಲ್ಲಿ ಭಾರತದ ತ್ರಿವರ್ಣ ಧ್ವಜವನ್ನು ಎತ್ತಿ ಹಿಡಿದಿದ್ದಾರೆ. ಸಾಧನೆ ಮುಗಿಸಿ ತಾಯ್ನಾಡಿಗೆ ಮರಳಿದ ಈ ಸ್ವಿಮ್ಮಿಂಗ್ ಚಾಂಪಿಯನ್‌ಗೆ ಬೆಳಗಾವಿ ರೈಲ್ವೆ ನಿಲ್ದಾಣದಲ್ಲಿ ಅದ್ದೂರಿ ಸ್ವಾಗತ ಕೋರಲಾಯಿತು.

ಈ ಪ್ರತಿಷ್ಠಿತ ಅಂತರರಾಷ್ಟ್ರೀಯ ಕ್ರೀಡಾಕೂಟದಲ್ಲಿ ಭಾರತ ಸೇರಿದಂತೆ ಒಟ್ಟು ಹತ್ತು ದೇಶಗಳ ಖ್ಯಾತ ಈಜುಪಟುಗಳು ಭಾಗವಹಿಸಿದ್ದರು. ಮಯಾಂಕ್ 50 ಮೀಟರ್ ಫ್ರೀಸ್ಟೈಲ್ ಮತ್ತು 25 ಮೀಟರ್ ಬ್ಯಾಕ್ ಸ್ಟ್ರೋಕ್ ಎಂಬ ಎರಡೂ ವಿಭಾಗಗಳಲ್ಲಿ ಪ್ರಥಮ ಸ್ಥಾನ ಗಳಿಸಿ ಚಿನ್ನದ ಪದಕಗಳನ್ನು ಮುಡಿಗೇರಿಸಿಕೊಂಡಿದ್ದಾರೆ. ಈ ಮೂಲಕ ಅಂತರರಾಷ್ಟ್ರೀಯ ಮಟ್ಟದಲ್ಲಿ ಬೆಳಗಾವಿಯ ಹೆಸರನ್ನು ಅಚ್ಚೊತ್ತಿದ್ದಾರೆ. ಮಯಾಂಕ್ ಅವರ ಈ ಅದ್ಭುತ ಸಾಧನೆಯನ್ನು ಗೌರವಿಸಿ ಆಬಾ ಸ್ಪೋರ್ಟ್ಸ್ ಕ್ಲಬ್, ಹಿಂದಿ ಸ್ಪೋರ್ಟ್ಸ್ ಕ್ಲಬ್ ಹಾಗೂ ಕ್ರೀಡಾ ಭಾರತಿ ಬೆಳಗಾವಿ ವತಿಯಿಂದ ರೈಲ್ವೆ ನಿಲ್ದಾಣದಲ್ಲಿ ಭವ್ಯ ಸನ್ಮಾನ ಮಾಡಲಾಯಿತು.ಈ ಸಂದರ್ಭದಲ್ಲಿ ಮಯಾಂಕ್ ಅವರ ಪೋಷಕರು, ತರಬೇತುದಾರರಾದ ವಿಶ್ವಾಸ್ ಪವಾರ್, ವಿಶಾಲ್ ವೇಸನೆ, ಶುಭಾಂಗಿ ಮಂಗಳೂರಕರ್, ಜ್ಯೋತಿ ಪವಾರ್, ಸುಧೀರ್ ಧಾಮಣಕರ್, ಮೋಹನ್ ಪತ್ತಾರ್, ಸೂರ್ಯಕಾಂತ್ ಹಿಂಡಲಗೇಕರ್, ಪದ್ಮಪ್ರಸಾದ್ ಹುಲಿ, ಗಣೇಶ್ ದಡಿಕರ್, ಹರ್ಷಾಲಿ ಪಾಟೀಲ್, ಅನಂತ್ ಪಾಟೀಲ್ ಸೇರಿದಂತೆ ನೂರಾರು ಕ್ರೀಡಾಭಿಮಾನಿಗಳು ಉಪಸ್ಥಿತರಿದ್ದು ಹರ್ಷ ವ್ಯಕ್ತಪಡಿಸಿದರು.

Tags:

error: Content is protected !!