Dharwad

ಕೇಂದ್ರ ವಿತ್ತ ಸಚಿವರಾದ ನಿರ್ಮಲಾ ಸೀತಾಮನ್ ಅವರು ಮಂಡಿಸಿದ ಬಜೆಟ್ ವಿಕಸಿತ ಭಾರತಕ್ಕೆ ಪೂರಕವಾಗಿದೆ.

Share

ಕೇಂದ್ರ ಸರಕಾರವು ಕರ್ನಾಟಕದ ಕರಾವಳಿಯಲ್ಲಿ ಟ್ರಕ್ಕಿಂಗ್ ಮಾರ್ಗ ಅಭಿವೃದ್ಧಿಗೆ ಯೋಜನೆ ರೂಪಿಸಿದೆ. ನೂತನವಾಗಿ ಬೆಂಗಳೂರು- ಹೈದರಾಬಾದ್ ಮತ್ತು ಬೆಂಗಳೂರು- ಚೈನೈ ಹೈಸ್ಪೀಡು ರೈಲುಗಳನ್ನು ಘೋ಼ಷಸಿದ್ದು‌ ಅಭಿನಂದನಾರ್ಹ ಎಂದು ವಿಧಾನಸಭೆ ವಿಪಕ್ಷ ನಾಯಕ ಅರವಿಂದ ಬೆಲ್ಲದ ತಿಳಿಸಿದ್ದಾರೆ.

ಈ‌ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಖನಿಜ ಸಮೃದ್ಧವಾಗಿರುವ ರಾಜ್ಯಗಳಿಗೆ ಕಾರಿಡಾರ್ ಸ್ಥಾಪನೆ, ಕೇಂದ್ರದ ಔಷಧ ಸಾಮರ್ಥ್ಯ ಹೆಚ್ಚಳಕ್ಕೆ ಕ್ರಮ, ಸೆಮಿಕಂಡಕ್ಟರ್ ಮಿಷನ್ ಗೆ 40 ಸಾವಿರ ಕೋಟಿ ರೂ. ಘೋಷಣೆ, ಒನ್ ಪ್ರೊಡಕ್ಟ್ ಒನ್ ಸ್ಟೇಟ್ ಯೋಜನೆ , ಆತ್ಮ ನಿರ್ಭರ ಭಾರತಕ್ಕಾಗಿ 2 ಸಾವಿರ ಕೋಟಿ ರೂ. ಮೀಸಲು. ಕ್ರೆಡಿಟ್ ಗ್ಯಾರಂಟಿ ಸಪೋರ್ಟ್ ವ್ಯವಸ್ಥೆ ಜಾರಿ, ಹಣಕಾಸು ಹಂಚಿಕೆಗೆ ಕ್ರೆಡಿಟ್ ಗ್ಯಾರಂಟಿ ವ್ಯವಸ್ಥೆ ಜಾರಿ ಮಾಡಲಾಗಿದೆ.

ಭಾರತವನ್ನು ಉನ್ನತ ಗುಣಮಟ್ಟದ ಹಾಗೂ ಕೈಗೆಟುಕುವ ಬೆಲೆಯ ಕ್ರೀಡಾ ಸಾಮಗ್ರಿಗಳ ಜಾಗತಿಕ ಹಬ್ ಆಗಿ ರೂಪಿಸುವುದಕ್ಕೆ ಸರ್ಕಾರ ಸನ್ನದ್ಧವಾಗಿದೆ ಎಂದು ಘೋಷಿಸಿದರು.

ಕ್ರೀಡಾ ಸಾಮಗ್ರಿಗಳ ತಯಾರಿಕೆ, ಸಂಶೋಧನೆ ಹಾಗೂ ವಿನ್ಯಾಸ ಕ್ಷೇತ್ರಗಳಿಗೆ ವಿಶೇಷ ಆದ್ಯತೆ ನೀಡಲಾಗಿದೆ.ಈ ಕ್ರಮವು ಉತ್ಪಾದನಾ ಸಾಮರ್ಥ್ಯವನ್ನು ಹೆಚ್ಚಿಸುವುದರ ಜೊತೆಗೆ ಜಾಗತಿಕ ಮಾರುಕಟ್ಟೆಗಳಲ್ಲಿ ಭಾರತೀಯ ಉತ್ಪನ್ನಗಳ ಸ್ಪರ್ಧಾತ್ಮಕತೆಯನ್ನು ಬಲಪಡಿಸಲಿದೆ.

ತೆಂಗು ಕೃಷಿ ಅಭಿವೃದ್ಧಿ ನೂತನ ಯೋಜನೆ, ತೆಂಗಿನಕಾಯಿ ಬೆಳೆ, ಸಂಸ್ಕರಣೆ, ರಫ್ತಿಗೆ ಒತ್ತು ನೀಡಿದ್ದಾರೆ. ಭಾರತದಲ್ಲಿ ಹೂಡಿಕೆ ಮಾಡಲು ಅನುಕೂಲ ಮಾಡುವ ಮೂಲಕ ವಿದೇಶಿ ಹೂಡಿಕೆದಾರರಿಗೆ ಅನುಕೂಲ ಕಲ್ಪಿಸಿದ್ದಾರೆ.

ಮಧ್ಯಮ ಮತ್ತು ಸಣ್ಣ ಉದ್ಯಮಿಗಳಿಗೆ ಸಿಹಿ ಸುದ್ದಿ ನೀಡಿರುವ ಕೇಂದ್ರ ಸರ್ಕಾರ ಸಾಲದ ನೆರವು ಘೋಷಿಸಿದೆ. ಆತ್ಮ ನಿರ್ಭರ ಭಾರತಕ್ಕಾಗಿ 2 ಸಾವಿರ ಕೋಟಿ ರೂ. ಮೀಸಲಿಟ್ಟು, ಭಾರತದ ಡಿಜಿಟಲ್ ಪರಿಸರ ವ್ಯವಸ್ಥೆ ಬಲಪಡಿಸಲು ಬಯೋಫಾರ್ಮ್ ಶಕ್ತಿ ಯೋಜನೆ ಘೋಷಿಸಲಾಗಿದೆ.

AI ಮಿಷನ್ ಮೂಲಕ ದೇಶದಲ್ಲಿ ದೊಡ್ಡ ಕ್ರಾಂತಿ, ವಿದ್ಯಾರ್ಥಿಗಳು, ರೈತರಿಗೆ ಇದರಿಂದ ಅನುಕೂಲವಾಗಲಿದೆ.
ಕೃಷಿ ಮತ್ತು ಪಶುಪಾಲನೆಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ಸುಲಭ ಸಾಲದ‌ ವ್ಯವಸ್ಥೆ, ಡೈರಿಗಳ ಹೆಚ್ಚಳ, ಅಗತ್ಯ ಸಹಾಯಧನ ನೀಡಲು ಮುಂದಾಗಿದ್ದಾರೆ. ಹೊಸದಾಗಿ 3 ಏಮ್ಸ್ ಆಸ್ಪತ್ರೆ ನಿರ್ಮಾಣ, ಮಧುಮೇಹ , ಕ್ಯಾನ್ಸರ್ ಔಷಧಿಗಳ ಬೆಲೆ ಇಳಿಕೆ, ಪ್ರತಿ ಜಿಲ್ಲೆಗಳಲ್ಲೂ ಬಾಲಕಿಯರ ಹಾಸ್ಟೆಲ್ ನಿರ್ಮಾಣ ಮಾಡಲು ಘೋಷಿಸಿದ್ದಾರೆ.

ಮಹಿಳೆಯರಿಗಾಗಿ `SHE ಮಾರ್ಟ್’ ಗ್ರಾಮೀಣ ಮಾರುಕಟ್ಟೆ ಸ್ಥಾಪಿಸುವ ಮುಖಾಂತರ ಮಹಿಳೆಯರ‌ ಸಬಲೀಕರಣಕ್ಕೆ ಒತ್ತು‌ ನೀಡಲಾಗಿದೆ. ಹೊಸ ತೆರಿಗೆ ಕಾಯ್ದೆ ಅನುಷ್ಠಾನ ಮಾಡಲಾಗುತ್ತಿದೆ. ಇದರಲ್ಲಿ ಆದಾಯ ತೆರಿಗೆ ಪಾವತಿಯನ್ನು ಸರಳೀಕರಣ ಮಾಡಲಾಗಿದೆ. ನೇರ ತೆರಿಗೆ ಘೋಷಣೆಗೆ ಅವಕಾಶ ಕಲ್ಪಿಸಲಾಗಿದೆ. ಅಲ್ಲದೇ ಜಿಎಸ್ ಟಿಯನ್ನು ಇನ್ನಷ್ಟು ಸರಳೀಕರಣಗೊಳಿಸಲಾಗಿದೆ. ಅಪಘಾತ ವಿಮೆ ಮೊತ್ತವನ್ನು ತೆರಿಗೆ ಮುಕ್ತಗೊಳಿಸಲು ಕೇಂದ್ರ ತೀರ್ಮಾನಿಸಿದೆ. ಬರುವ ಎಪ್ರಿಲ್‌ನಿಂದ‌ ಹೊಸ ತೆರಿಗೆ ಕಾಯ್ದೆ ಜಾರಿಯಾಗಲಿದ್ದು, ಮಾಚ್೯ 31 ವರೆಗೆ ತೆರಿಗೆ ಪಾವತಿಸಬಹುದಾಗಿದೆ.

16 ನೇ ಹಣಕಾಸು ಆಯೋಗದ ವರದಿಯನ್ನು ಸರಕಾರ ಅಂಗೀಕರಿಸಿದ್ದು, ವರದಿ ಪ್ರಕಾರ ಆದಾಯದ ಶೆ.41 ರಷ್ಟನ್ನು ‌ರಾಜ್ಯಗಳಿಗೆ ನೀಡಲು ಘೋಷಿಸಿರುವುದು ರಾಜ್ಯಗಳಿಗೆ ಆರ್ಥಿಕ ಶಕ್ತಿ ತುಂಬಲಿದೆ. ಒಟ್ಟಾರೆಯಾಗಿ ಎಲ್ಲ ಕುಟುಂಬಗಳಿಗೆ ಹೆಚ್ಚಿನ ಹಣ ಸಿಗುವಂತೆ ಮಾಡುವ ಮೂಲಕ ವಿಕಸಿತ ಭಾರತದ ಗುರಿ ಸಾಧಿಸಲು ಕೇಂದ್ರ ಸರ್ಕಾರ ಬದ್ಧವಾಗಿರುವುದು ಭವಿಷ್ಯದ‌ ಭರವಸೆಯನ್ನು ಹೆಚ್ಚಿಸಿದೆ. ಇದು ಭಾರತ ಜಗತ್ತಿನ ಅತಿದೊಡ್ಡ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮಲು ಪೂರಕ ಬಜೆಟ್ ಆಗಿದೆ.

Tags:

error: Content is protected !!