BELAGAVI

ಕ್ರಾಂತಿ ಸದಾ ಯುವಪೀಳಿಗೆಯಿಂದಲೇ ಸಾಧ್ಯ: ಯೆಳ್ಳೂರು ಸಾಹಿತ್ಯ ಸಮ್ಮೇಳನದಲ್ಲಿ ಡಾ. ರಾಜೇಂದ್ರ ಕುಂಭಾರ್ ಕರೆ

Share

ಬೆಳಗಾವಿಯ ಯೆಳ್ಳೂರಿನ ಸರ್ಕಾರಿ ಮರಾಠಿ ಶಾಲೆಯ ಕ್ರೀಡಾಂಗಣದಲ್ಲಿ ಇಂದು 21ನೇ ಗ್ರಾಮೀಣ ಮರಾಠಿ ಸಾಹಿತ್ಯ ಸಮ್ಮೇಳನವು ಅದ್ಧೂರಿಯಾಗಿ ಚಾಲನೆ ಪಡೆಯಿತು. ಇದಕ್ಕೂ ಮುನ್ನ ಗ್ರಾಮದಲ್ಲಿ ಭವ್ಯ ಗ್ರಂಥ ದಿಂಡಿಯನ್ನು ನಡೆಸಲಾಯಿತು. ಇದರಲ್ಲಿ ಸಾಂಪ್ರದಾಯಿ ವೇಷಭೂಷಣ ತೊಟ್ಟ ಪುಟಾಣಿಗಳು, ಯುವಕ ಯುವತಿಯರು, ವಿವಿಧ ಕಲಾತಂಡಗಳು ಎಲ್ಲರ ಗಮನ ಸೆಳೆದವರು.

ಸಮ್ಮೇಳನದ ಅಧ್ಯಕ್ಷತೆ ವಹಿಸಿ ಮಾತನಾಡಿದ ಹಿರಿಯ ಸಾಹಿತಿ ಡಾ. ರಾಜೇಂದ್ರ ಕುಂಭಾರ್ ಅವರು, “ಯೆಳ್ಳೂರು ಗ್ರಾಮವು ಅತ್ಯಂತ ಸುಸಂಸ್ಕೃತ ಗ್ರಾಮವಾಗಿದ್ದು, ಇಲ್ಲಿನ ಜನರಿಗೆ ಸಾಹಿತ್ಯ ಮತ್ತು ಭಾಷೆಯ ಮೇಲಿರುವ ಅಪಾರ ಪ್ರೀತಿ ಹೆಮ್ಮೆ ತರುವಂತದ್ದು. ಭಾಷೆ ಹಾಗೂ ಸಂಸ್ಕೃತಿಯ ಉಳಿವಿಗಾಗಿ ಈ ಗ್ರಾಮವು ಒಂದು ಮಾದರಿ ಚಳುವಳಿಯನ್ನು ನಡೆಸಬೇಕು” ಎಂದು ಆಶಯ ವ್ಯಕ್ತಪಡಿಸಿದರು.ಯುವಕರಿಲ್ಲದ ಜಾಗದಲ್ಲಿ ಯಾವುದೇ ಕ್ರಾಂತಿ ಅಸಾಧ್ಯ. ಜಗತ್ತಿನ ಯಾವುದೇ ಕ್ರಾಂತಿಯಾದರೂ ಅದು ಯುವಪೀಳಿಗೆಯಿಂದಲೇ ನಡೆಯಲು ಸಾಧ್ಯ. ಆದ್ದರಿಂದ ಭಾಷೆ ಮತ್ತು ಸಾಹಿತ್ಯದ ಸಂರಕ್ಷಣೆಯಲ್ಲಿ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು” ಎಂದು ಕರೆ ನೀಡಿದರು.

ಪುಣೆಯ ಗಿರೀಶ್ ಕುಲಕರ್ಣಿ ಅವರು ‘ಗ್ರಂಥದಿಂಡಿ’ ಮೆರವಣಿಗೆಗೆ ಚಾಲನೆ ನೀಡಿದರು. ಮಹಾತ್ಮ ಫುಲೆ ಅವರ ಕ್ರಾಂತಿಕಾರಿ ವಿಚಾರಗಳಡಿ ನಡೆದ ಈ ಕಾರ್ಯಕ್ರಮದಲ್ಲಿ ಡಾ. ಶಿವಾನಂದ ಶಿರ್ಕೋಳೆ, ಡಾ. ಪ್ರಕಾಶ್ ಬಾಬಲಿಚೆ ಸೇರಿದಂತೆ ಅನೇಕ ಗಣ್ಯರು ಭಾಗವಹಿಸಿದ್ದರು.

Tags:

error: Content is protected !!