ದೇಶ ರಕ್ಷಣೆಯಲ್ಲಿ ಮಹಿಳೆಯರ ಪಾತ್ರ ದೋಡ್ಡದಾಗಿದೆ ಎಂದು ಯುವ ಭಾರತ ಮುಖಂಡ ಶರಣೆಗೌಡ ಹೇಳಿದರು.
ರಾಷ್ಟ್ರೀಯ ಸ್ವಯಂ ಸೇವಕ ಸಂಘವು ನೂರು ವರ್ಷ ಕಳೆದ ಹಿನ್ನಲೆಯಲ್ಲಿ ರಾಷ್ಟ್ರಾದ್ಯಂತ ಹಮ್ಮಿಕೊಂಡ ವಿಶಾಲ ಹಿಂದೂ ಸಮಾವೇಶ ವನ್ನು ಶನಿವಾರ ಹುಕ್ಕೇರಿ ನಗರದ ವಿಶ್ವರಾಜ ಕಲ್ಯಾಣ ಮಂಟಪದಲ್ಲಿ ಹಿರೇಮಠದ ಚಂದ್ರಶೇಖರ ಮಹಾಸ್ವಾಮಿಗಳ ದಿವ್ಯ ಸಾನಿಧ್ಯದಲ್ಲಿ , ವಿರಕ್ತಮಠದ ಶಿವ ಬಸವ ಮಹಾಸ್ವಾಮಿಗಳ ಮತ್ತು ಕ್ಯಾರಗುಡ್ಡದ ಮಂಜುನಾಥ ಮಹಾರಾಜರ ಉಪಸ್ಥಿತಿಯಲ್ಲಿ ದೀಪ ಬೆಳಗಿಸುವ ಮೂಲಕ ಉದ್ಯಮಿ ಪೃಥ್ವಿ ಕತ್ತಿ ಮತ್ತು ಯುವ ಭಾರತ ಮುಖಂಡ ಶರಣೆಗೌಡ ಹಾಗೂ ವಿದ್ಯುತ್ ಸಂಘದ ಅದ್ಯಕ್ಷ ಮಹಾವೀರ ನಿಲಜಗಿ ಚಾಲನೆ ನೀಡಿದರು.


ಇದಕ್ಕೂ ಮೊದಲು ಅಡವಿಸಿದ್ದೇಶ್ವರ ಮಠದ ಆವರಣದಿಂದ ಜರುಗಿದ ಶೋಭಾ ಯಾತ್ರೆಯಲ್ಲಿ ಸಾಂಪ್ರದಾಯಕ ವಾದ್ಯ ಮೇಳಗಳೊಂದಿಗೆ ಸಾವಿರಾರು ಮಹಿಳೆಯರ ಕುಂಭ ಮೇಳ, ಮಕ್ಕಳ ಸಾಂಸ್ಕೃತಿಕ ವೇಷ ಭೂಷಣಗಳೊಂದಿಗೆ ಮೇರವಣೆಗೆ ಜರುಗಿತು.
ಯುವ ಭಾರತ ಮುಖಂಡ ಶರಣೆಗೌಡ ಮಾತನಾಡಿ ರಾಷ್ಟ್ರೀಯ ಸ್ವಯಂ ಸೇವಾ ಸಂಘವು ನೂರು ವರ್ಷ ಘಟಿಸಿದ ಹಿನ್ನೆಲೆಯಲ್ಲಿ ಮತಾಂತರ ತಡೆಗಟ್ಟುವುದು, ಗೋಹತ್ಯೆ ನಿಷೇಧ, ದೇವಾಲಯಗಳಲ್ಲಿ ಮುಕ್ತವಾಗಿ ಎಲ್ಲ ಸಮುದಾಯದ ಜನರಿಗೆ ಅವಕಾಶ ನೀಡುವದು,ಮಹಿಳೆಯರ ಸುರಕ್ಷತೆ., ಪರಿಸರ ಸಂರಕ್ಷಣೆ ಕುರಿತು ಜಾಗ್ರತೆ ಹೀಗೆ
ಪಂಚ ಪರಿಕಲ್ಪನೆಗಳು ಜಾರಿಗೆ ತರುವ ನಿಟ್ಟಿನಲ್ಲಿ ದೇಶದ ವಿವಿಧ ಭಾಗಗಳಲ್ಲಿ ವಿರಾಟ್ ಹಿಂದೂ ಯಾತ್ರೆಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು..
ಈ ಸಂದರ್ಭದಲ್ಲಿ ರೈತ ಮುಖಂಡ , ನ್ಯಾಯವಾದಿ ರಾಮಚಂದ್ರ ಜೋಶಿ, ಭಾರತೀಯ ಜನತಾ ಪಕ್ಷದ ಮುಖಂಡರಾದ ಗುರುರಾಜ ಕುಲಕರ್ಣಿ,ಸತ್ಯಪ್ಪ ನಾಯಕ್,ಪ್ರಜ್ವಲ ನಿಲಜಗಿ, ರಾಜು ಮುನ್ನಳ್ಳಿ, ಬಸವರಾಜ್ ಗಂಗನವರ, ಚೆನ್ನಪ್ಪ ಗಜಬರ್, ಮಹಾಂತೇಶ್ ತಳವಾರ್, ಶೀತಲ ಬ್ಯಾಳಿ, ಸುಹಾಸ ನೂಲಿ
ಸೇರಿದಂತೆ ಬಿಜೆಪಿ ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗ ದಳ, ಶ್ರೀ ರಾಮ ಸೇನೆ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.

