ಬೆಳಗಾವಿ ತಾಲೂಕಿನ ಅಂಬೇವಾಡಿ ಗ್ರಾಮದಲ್ಲಿ ಶಿವಭಕ್ತಿಯ ಅಲೆ ಎದ್ದಿದೆ. ಜೆ.ಜೆ. ಪಾಟೀಲ್ ಅವರು ಕಲಾತ್ಮಕವಾಗಿ ಕೆತ್ತಿರುವ ಛತ್ರಪತಿ ಶಿವಾಜಿ ಮಹಾರಾಜರ ಭವ್ಯ ಮೂರ್ತಿಯ ಪ್ರತಿಷ್ಠಾಪನೆಗೆ ಕ್ಷಣಗಣನೆ ಆರಂಭವಾಗಿದ್ದು, ಇಂದು ಗ್ರಾಮದಲ್ಲಿ ಅದ್ಧೂರಿ ಮೆರವಣಿಗೆಯ ಮೂಲಕ ಚಾಲನೆ ನೀಡಲಾಗುತ್ತಿದೆ.

ತಾಲೂಕಿನ ಅಂಬೇವಾಡಿ ಗ್ರಾಮದಲ್ಲಿ ಶಿವಭಕ್ತರ ಸಂಘಟಿತ ಹೋರಾಟ ಹಾಗೂ ಧನಸಹಾಯದ ಫಲವಾಗಿ ಅತ್ಯಂತ ಆಕರ್ಷಕವಾದ ಛತ್ರಪತಿ ಶಿವಾಜಿ ಮಹಾರಾಜರ ಮೂರ್ತಿ ಸಿದ್ಧಗೊಂಡಿದೆ. ಕಲಾವಿದ ಜೆ.ಜೆ. ಪಾಟೀಲ್ ಅವರು ಈ ಮೂರ್ತಿಯನ್ನು ಅತ್ಯಂತ ಶ್ರದ್ಧೆಯಿಂದ ನಿರ್ಮಿಸಿದ್ದು, ಗ್ರಾಮಸ್ಥರ ಸಹಕಾರದೊಂದಿಗೆ ಸುಮಾರು 25 ಲಕ್ಷ ರೂಪಾಯಿಗಳ ಅನುದಾನದಲ್ಲಿ ಈ ಬೃಹತ್ ಕಾರ್ಯವನ್ನು ಕೈಗೆತ್ತಿಕೊಳ್ಳಲಾಗಿದೆ. ಪ್ರತಿಷ್ಠಾಪನೆಯ ಅಂಗವಾಗಿ ಇಂದು ಗ್ರಾಮದ ಪ್ರಮುಖ ರಸ್ತೆಗಳಲ್ಲಿ ಭವ್ಯ ಮೆರವಣಿಗೆ ಹಮ್ಮಿಕೊಳ್ಳಲಾಗಿದ್ದು, ಕೇಸರಿ ಪಡೆಗಳ ಸಂಭ್ರಮ ಮನೆಮಾಡಿದೆ.
ಫೆಬ್ರುವರಿ 7 ರಂದು ನಡೆಯಲಿರುವ ಈ ಮಹತ್ವದ ಕಾರ್ಯಕ್ರಮದಲ್ಲಿ ಪ್ರಖ್ಯಾತ ಹಿಂದೂತ್ವವಾದಿ ಸಂಭಾಜಿ ಭಿಡೆ ಗುರುಜೀ ಅವರು ಪಾಲ್ಗೊಳ್ಳಲಿದ್ದಾರೆ. ಅವರ ಶುಭ ಹಸ್ತದಿಂದಲೇ ಮೂರ್ತಿಯ ಅನಾವರಣ ಕಾರ್ಯ ನೆರವೇರಲಿದ್ದು, ಈ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಲು ಸುತ್ತಮುತ್ತಲ ಗ್ರಾಮಗಳ ಸಾವಿರಾರು ಶಿವಭಕ್ತರು ಆಗಮಿಸುವ ನಿರೀಕ್ಷೆಯಿದೆ ಎಂದು ಸಂಘಟಕ ಗಜಾನನ ಘುಗ್ರೇಟಕರ್ ಮಾಹಿತಿ ನೀಡಿದ್ದಾರೆ. ಬೈಟ್
ಅಂಬೇವಾಡಿಯ ಇತಿಹಾಸದಲ್ಲಿ ಇದೊಂದು ಮೈಲಿಗಲ್ಲಾಗಲಿದ್ದು, ಕಾರ್ಯಕ್ರಮದಲ್ಲಿ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಅವರು ಮನವಿ ಮಾಡಿದ್ದಾರೆ.
