Belagavi

ರಾಷ್ಟ್ರಮಟ್ಟದ ಜೂಡೋದಲ್ಲಿ ಬೆಳಗಾವಿಯ ‘ಹ್ಯಾಟ್ರಿಕ್’ ಸಾಧನೆ: ಮೂವರು ಕ್ರೀಡಾಪಟುಗಳಿಗೆ ಕಂಚಿನ ಪದಕದ ಗರಿ!

Share

ರಾಷ್ಟ್ರಮಟ್ಟದ ಕ್ರೀಡಾಕೂಟದಲ್ಲಿ ರಾಜ್ಯದ ಕೀರ್ತಿಪತಾಕೆ ಹಾರಿದೆ. ದೆಹಲಿಯಲ್ಲಿ ನಡೆಯುತ್ತಿರುವ ಯು-19 ಶಾಲಾ ನ್ಯಾಷನಲ್ ಗೇಮ್ಸ್‌ನಲ್ಲಿ ಬೆಳಗಾವಿಯ ಡೈಸ್ ಜೂಡೋ ಪಟುಗಳು ಅಬ್ಬರಿಸಿದ್ದು, ಒಂದೇ ದಿನ ಮೂರು ಪದಕಗಳನ್ನು ಗೆಲ್ಲುವ ಮೂಲಕ ಹ್ಯಾಟ್ರಿಕ್ ಸಾಧನೆ ಮಾಡಿದ್ದಾರೆ.

ಬೆಳಗಾವಿಯ ನೆಹರು ನಗರದ ಡಿವೈಇಎಸ್ ಜೂಡೋ ತರಬೇತಿ ಕೇಂದ್ರದ ಪ್ರತಿಭೆಗಳಾದ ಸ್ಪಂದನಾ ಸಿ.ಎಸ್ (40 ಕೆಜಿ), ಶ್ವೇತಾ ಅಲಕನೂರ (44 ಕೆಜಿ) ಮತ್ತು ಸಂಘಮೇಶ್ ಮದಲಿ (55 ಕೆಜಿ) ದೆಹಲಿಯಲ್ಲಿ ನಡೆಯುತ್ತಿರುವ ಯು-19 ಶಾಲಾ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಕಂಚಿನ ಪದಕಗಳನ್ನು ಮುಡಿಗೇರಿಸಿಕೊಂಡಿದ್ದಾರೆ. ಪಂಜಾಬ್, ಹರಿಯಾಣ ಮತ್ತು ಮಣಿಪುರದಂತಹ ಬಲಿಷ್ಠ ರಾಜ್ಯಗಳ ಸ್ಪರ್ಧಿಗಳ ವಿರುದ್ಧ ಅಪ್ರತಿಮ ಹೋರಾಟ ನೀಡಿದ ಈ ಮೂವರು ಕ್ರೀಡಾಪಟುಗಳು, ಕರ್ನಾಟಕಕ್ಕೆ ಒಟ್ಟು ಮೂರು ಪದಕಗಳನ್ನು ತಂದುಕೊಡುವ ಮೂಲಕ ಬೆಳಗಾವಿಯ ಕೀರ್ತಿಯನ್ನು ರಾಷ್ಟ್ರಮಟ್ಟದಲ್ಲಿ ಹೆಚ್ಚಿಸಿದ್ದಾರೆ.

ವಿಶೇಷವಾಗಿ 55 ಕೆಜಿ ವಿಭಾಗದಲ್ಲಿ ಸ್ಪರ್ಧಿಸಿದ್ದ ಸಂಘಮೇಶ್ ಮದಳಿ, ಇಬ್ಬರು ಅಂತರಾಷ್ಟ್ರೀಯ ಮಟ್ಟದ ಪದಕ ವಿಜೇತರನ್ನು ಸೋಲಿಸಿ ಎಲ್ಲರ ಗಮನ ಸೆಳೆದಿದ್ದಾರೆ. ಈ ಯುವ ಕ್ರೀಡಾಪಟುಗಳ ಸಾಧನೆಗೆ ಎನ್.ಐ.ಎಸ್ ತರಬೇತುದಾರರಾದ ರೋಹಿಣಿ ಪಾಟೀಲ್ ಮತ್ತು ಕುತುಜಾ ಮುಲ್ತಾನಿ ಅವರ ಮಾರ್ಗದರ್ಶನ ಹಾಗೂ ಉಪನಿರ್ದೇಶಕರಾದ ಶ್ರೀನಿವಾಸ ಬಿ. ಅವರ ಬೆಂಬಲವೇ ಕಾರಣವಾಗಿದೆ. ಕಠಿಣ ಪರಿಶ್ರಮ ಮತ್ತು ಶಿಸ್ತಿನಿಂದ ಕೂಡಿದ ಈ ಆಟಗಾರರ ಪ್ರದರ್ಶನಕ್ಕೆ ಈಗ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.

Tags:

error: Content is protected !!