ಬೆಳಗಾವಿ ಹೊರವಲಯದ ಹಿರೇಬಾಗೇವಾಡಿಯಲ್ಲಿ ಅಕ್ರಮ ಮಟಕಾ ಜುಗಾರಿ ಆಟದ ಮೇಲೆ ಪೊಲೀಸರು ಮಿಂಚಿನ ದಾಳಿ ನಡೆಸಿದ್ದಾರೆ. ಸಾರ್ವಜನಿಕ ಸ್ಥಳದಲ್ಲಿ ಹಣದ ಆಮಿಷವೊಡ್ಡಿ ಓಸಿ ಆಟವಾಡಿಸುತ್ತಿದ್ದ ವ್ಯಕ್ತಿಯನ್ನು ವಶಕ್ಕೆ ಪಡೆದು ಕಾನೂನು ಕ್ರಮ ಜರುಗಿಸಲಾಗಿದೆ.

ಹಿರೇಬಾಗೇವಾಡಿ ಪೊಲೀಸ್ ಠಾಣಾ ವ್ಯಾಪ್ತಿಯ ಬಸ್ಸಾಪೂರ ರಸ್ತೆಯ ಪಕ್ಕದಲ್ಲಿ ಸಾರ್ವಜನಿಕ ಸ್ಥಳದಲ್ಲಿ ‘ಕಲ್ಯಾಣ ಮಟಕಾ’ ಜುಗಾರಿ ಆಟವಾಡಿಸುತ್ತಿದ್ದ ಖದೀಮನ ಮೇಲೆ ಪೊಲೀಸರು ಯಶಸ್ವಿ ದಾಳಿ ನಡೆಸಿದ್ದಾರೆ. ಹಿರೇಬಾಗೇವಾಡಿಯ ಶಿವಬಸವ ನಗರದ ನಿವಾಸಿ ಮಹ್ಮದಅಲಿ ಗೌಸಸಾಬ ಸನದಿ (40) ಎಂಬಾತನನ್ನು ಬಂಧಿಸಲಾಗಿದೆ. ಹಿರೇಬಾಗೇವಾಡಿ ಠಾಣೆಯ ಪಿಐ ಸುಂದ್ರೇಶ ಕೆ ಹೊಳೆನ್ನವರ ನೇತೃತ್ವದ ತಂಡವು ಈ ಕಾರ್ಯಾಚರಣೆ ನಡೆಸಿದ್ದು, ಆರೋಪಿತನಿಂದ 1,260 ರೂ. ನಗದು ಹಾಗೂ ಮಟಕಾ ಬರೆಯಲು ಬಳಸುತ್ತಿದ್ದ ಓಸಿ ಚೀಟಿಗಳನ್ನು ಜಪ್ತಿ ಮಾಡಿಕೊಳ್ಳಲಾಗಿದೆ.
ಅಕ್ರಮ ಚಟುವಟಿಕೆಗಳ ಮೂಲಕ ಸಾರ್ವಜನಿಕರಿಂದ ಹಣ ವಸೂಲಿ ಮಾಡುತ್ತಿದ್ದ ಈತನ ವಿರುದ್ಧ ಕೆ.ಪಿ. ಕಾಯ್ದೆ ಅಡಿ ಪ್ರಕರಣ ದಾಖಲಿಸಿಕೊಂಡು ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ. ಅಕ್ರಮ ಜುಗಾರಿ ಮತ್ತು ಮಟಕಾ ದಂಧೆಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತಿರುವ ಹಿರೇಬಾಗೇವಾಡಿ ಪೊಲೀಸರ ಈ ಕಾರ್ಯಕ್ಷಮತೆಯನ್ನು ಬೆಳಗಾವಿ ನಗರ ಪೊಲೀಸ್ ಆಯುಕ್ತರು ಹಾಗೂ ಡಿಸಿಪಿ ಅವರು ಶ್ಲಾಘಿಸಿದ್ದಾರೆ. ಬೆಳಗಾವಿ ನಗರದಾದ್ಯಂತ ಇಂತಹ ಅಕ್ರಮ ದಂಧೆಗಳ ವಿರುದ್ಧ ಪೊಲೀಸರು ಹದ್ದಿನ ಕಣ್ಣಿಟ್ಟಿದ್ದಾರೆ.
