Dharwad

ರಾಜ್ಯದ ವಿವಿಧ ಕಡೆಗಳಲ್ಲಿ ಚಿನ್ನದ ಅಂಗಡಿಗಳ ಕಳ್ಳತನ ಹೆಚ್ಚಾದ ಬೆನ್ನಲ್ಲೇ…

Share

ಇತ್ತೀಚಿನ ದಿನಗಳಲ್ಲಿ ರಾಜ್ಯ ಸೇರಿ ಬೇರೆ ರಾಜ್ಯಗಳಲ್ಲಿ ದರೋಡೆ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಹಾಗೂ ಕಳ್ಳತನ ಪ್ರಕರಣಗಳಿಗೆ ಬ್ರೇಕ ಹಾಕುವ ನಿಟ್ಟಿನಲ್ಲಿ, ಧಾರವಾಡ ಎಸಿಪಿ ಪ್ರಶಾಂತ್ ಸಿದ್ಧನಗೌಡರ ನೇತೃತ್ವದಲ್ಲಿ ಗೋಲ್ಡ್ ಶಾಲ ಓನರ್ಸಗಳ ಸಭೆ ನಡೆಸಿ ಹಲವು ಸೂಚನೆಗಳನ್ನು ನೀಡಲಾಯಿತು.

ವೈ- ಧಾರವಾಡ ಶ್ರೀ ದತ್ತಾತ್ರೇಯ ಮಂದಿರದ ಸಭಾಭವನದಲ್ಲಿ ಸಭೆ ನಡೆಸಲಾಗಿದ್ದು, ಧಾರವಾಡ ನಗರದ ವಿವಿಧ ಚಿನ್ನದ ಅಂಗಡಿಗಳ ಮಾಲೀಕರು ಭಾಗಿಯಾಗಿದ್ದರು. ಸಭೆಯನ್ನು ಉದ್ದೇಶಿಸಿ ಮಾತನಾಡಿದ ಧಾರವಾಡ ಎಸಿಪಿ ಪ್ರಶಾಂತ್ ಸಿದ್ಧನಗೌಡರವರು, ಅಂಗಡಿಗಳ ಸುರಕ್ಷತಾ ಕ್ರಮಗಳ ಕುರಿತು ಮಾಲೀಕರಿಂದ ಮಾಹಿತಿ ತೆಗೆದುಕೊಂಡರು. ಜತೆಗೆ ಗೋಲ್ಡ್ ಶಾಪ್‌ಗಳಿಗೆ ಸಿಸಿಟಿವಿ ಅಳವಡಿಸುವುದು ಕಡ್ಡಾಯ, ಸಾಧ್ಯವಾದಷ್ಟು ಭದ್ರತಾ ಸಿಬ್ಬಂದಿ ನೇಮಿಸಿಕೊಳ್ಳಬೇಕು. ಶಾಪ್ ಕ್ಲೋಸ್ ಆಗುವ ಮುನ್ನ ಬೀಗ ಹಾಕುವುದರ ಬಗ್ಗೆ ಎಚ್ಚರಿಕೆ ಇರಬೇಕು‌. ವ್ಯಾಪರ ಮಾಡುವ ವೇಳೆ ಯಾರಾದರೂ ಅನುಮಾನಸ್ಪದ ವ್ಯಕ್ತಿಗಳು ವ್ಯವರಿಸುತ್ತಿರುವಾಗ ಮೈ ಎಲ್ಲಾ ಕಣ್ಣಾಗಿರಬೇಕು. ಅನುಮಾನಸ್ಪದ ವ್ಯಕ್ತಿಗಳು ಕಂಡುಬಂದಾಗ ವ್ಯಾಪ್ತಿಯ ಪೊಲೀಸ್ ಠಾಣೆ ಅಥವಾ 112ಗೆ ಕರೆ ಮಾಡಿ ಮಾಹಿತಿ ನೀಡಬೇಕು ಎಂದು ತಿಳಿ ಹೇಳಿದರು. ಸಿಸಿಟಿವಿ ಅಳವಡಿಸಿಕೊಳ್ಳದ ಶಾಪಗಳ ಮೇಲೆ ಕ್ರಮ ಕೈಗೊಳುವುದಾಗಿ ಎಚ್ಚರಿಕೆ ನೀಡಿದರು. ಈ ಸಂದರ್ಭದಲ್ಲಿ ಧಾರವಾಡ ಎಸಿಪಿ ಪ್ರಶಾಂತ್ ಸಿದ್ಧನಗೌಡ್ರು. ಶಹರ ಸಿಪಿಐ.. ಆಲಿ ಶೇಕ್, ಪಿಎಸ್‌ಐ ನದಾಫ್, ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು.

Tags:

error: Content is protected !!