Chikkodi

ಚಿಕ್ಕೋಡಿ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿನಿಯರು ನೇಟಬಾಲ್ ನಲ್ಲಿ ಯುನಿವರ್ಸಿಟಿ ಬ್ಲೂ ಆಯ್ಕೆ

Share

ಕೆ. ಎಲ್. ಇ ಇಂಜಿನೀಯರಿಂಗ್ ಕಾಲೇಜಿನ ವಿಧ್ಯಾರ್ಥಿನಿಯರಾದ ನಿಶಾ ಮಾನಗಾಂವೆ, ಶೋಭಾ ಮುರಚಟ್ಟಿ, ಸಪ್ನಾ ಖೋತ ವಿಶ್ವೇಶ್ವರಯ್ಯಾ ತಾಂತ್ರಿಕ ವಿಶ್ವವಿದ್ಯಾಲಯದ ನೇಟಬಾಲ್ ಕ್ರೀಡೆಯಲ್ಲಿ 2025-26ನೇ ಸಾಲಿನ ಯುನಿವರ್ಸಿಟಿ ಬ್ಲೂ ಆಗಿ ಆಯ್ಕೆಯಾಗಿರುವುದು ಕಾಲೇಜಿಗೆ ಹೆಮ್ಮೆಯ ವಿಷಯವೆಂದು ಪ್ರಾಚಾರ್ಯರಾದ ಡಾ. ದರ್ಶನಕುಮಾರ ಬಿಳ್ಳೂರ ತಿಳಿಸಿದ್ದಾರೆ.

ಆಂದ್ರಪ್ರದೇಶದ ಕೃಷ್ಣಾ ವಿಶ್ವವಿದ್ಯಾಲಯ, ಮಚಲಿಪಟ್ಟಣಂದಲ್ಲಿ ಫೆಬ್ರುವರಿ 14 ರಿಂದ 18 ರ ವರೆಗೆ ಜರುಗಲಿರುವ ಅಖಿಲ ಭಾರತ ಅಂತರ ವಿಶ್ವವಿದ್ಯಾಲಯ ನೇಟಬಾಲ್ ಪಂದ್ಯಾವಳಿಯಲ್ಲಿ ಈ ವಿದ್ಯಾರ್ಥಿನಿಯರು ವಿ.ಟಿ.ಯು ತಂಡವನ್ನು ಪ್ರತಿನಿಧಿಸಲಿದ್ದಾರೆ.
ಕಾಲೇಜಿನ ದೈಹಿಕ ನಿರ್ದೆಶಕರಾದÀ ಶ್ರೀ ಗಣಪತಿ ಹುಲಿಗೆಜ್ಜಿ ಮಾರ್ಗದರ್ಶನ ನೀಡಿದ್ದರು. ಕ್ರಿಡಾ ಸಂಯೋಜಕ ಡಾ. ಅರವಿಂದ ದೇಶಿ, ಶೈಕ್ಷಣಿಕ ಸಂಯೋಜಕ ಪ್ರೊ. ಕುಮಾರ ಚೌಗಲಾ ಉಪಸ್ಥಿತರಿದ್ದರು.

Tags:

error: Content is protected !!