Dharwad

ಧಾರವಾಡದ ಶಿರಡಿ ನಗರದಲ್ಲಿ 9 ಜನರ ಮೇಲೆ ಹುಚ್ಚು ನಾಯಿ ದಾಳಿ…

Share

ಹುಚ್ಚನಾಯಿ ಒಂದು ಸಿಕ್ಕ ಸಿಕ್ಕವರ ಮೇಲೆ ದಾಳಿ ಮಾಡಿದ ಪರಿಣಾಮ ಬರೊಬ್ಬರಿ 9ಜನ ಗಾಯಗೊಂಡಿರುವ ಘಟನೆ ಧಾರವಾಡದಲ್ಲಿ ಕಳೆದ ದಿನ ಬುಧುವಾರ ನಡೆದಿದ್ದು, ಹುಚ್ಚು ನಾಯಿ ದಾಳಿಯಿಂದ ಸ್ಥಳೀಯರು ಬೆಚ್ಚಿಬಿದಿದ್ದಾರೆ.

ಧಾರವಾಡದ ಶಿರಡಿನಗರದ ಇಡೀ ಬಡಾವಣೆಯಲ್ಲಿ ಓಡಾಡಿರುವ ನಾಯಿ ಸುಮಾರು 9 ಜನರ ಮೇಲೆ ಅಟ್ಯಾಕ್ ಮಾಡಿದೆ. ಶಾಲೆಯಿಂದ ಬರುತ್ತಿದ್ದ ರಿಶೀಕ್ ಎಂಬ ಬಾಲಕನ ಮೇಲೂ ನಾಯಿ ದಾಳಿ ಮಾಡಿದ್ದು, ಆತನ ಕಿವಿಗೆ ಗಂಭೀರ ಗಾಯವಾಗಿದೆ. ಗಂಗವ್ವ ಉಪ್ಪಾರ, ಲಕ್ಷ್ಮೀ ಮಾದರ, ಶೀತಲ ಕಬಾಡಿ, ಸೇರಿದಂತೆ 9 ಜನರ ಮೇಲೆ ನಾಯಿ ದಾಳಿ ನಡೆಸಿದೆ. ನಾಯಿ ಕಡಿತಕ್ಕೆ ಒಳಗಾದವರಿಗೆ ಧಾರವಾಡ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ನಾಯಿ ಈ ರೀತಿ ದಾಳಿ ನಡೆಸಿದ್ದರಿಂದ ಕಂಗಾಲಾದ ಬಡಾವಣೆ ಜನ ಆ ನಾಯಿಯನ್ನು ಬಡಿಗೆ ಮತ್ತು ರಾಡ್‌ನಿಂದ ಹೊಡೆದು ಕೊಂದು ಹಾಕಿದ್ದಾರೆ. ಧಾರವಾಡ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

Tags:

error: Content is protected !!