Dharwad

ಧಾರವಾಡದ ಡಿಮಾನ್ಸ್ ಹಾಸ್ಟೆಲ್‌ನಲ್ಲಿ ಪಿಜಿ ವಿದ್ಯಾರ್ಥಿನಿ ಆತ್ಮಹತ್ಯೆ….ಶಿವಮೊಗ್ಗ ಮೂಲ ವಿದ್ಯಾರ್ಥಿನಿ ಕೊನೆಯುಸಿರು, ಉಪನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ.

Share

ಧಾರವಾಡದ ಡಿಮಾನ್ಸ್ ಹಾಸ್ಟೆಲ್‌ನಲ್ಲಿ ಪಿಜಿ ವಿದ್ಯಾರ್ಥಿನಿಯೊಬ್ಬಳು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.ಡಾ.ಪ್ರಜ್ಞಾ ಪಾಲೇಗರ್ (24) ಎಂಬ ವಿದ್ಯಾರ್ಥಿನಿಯೇ ಆತ್ಮಹತ್ಯೆಗೆ ಶರಣಾದವಳು.

ಮೊದಲನೇ ವರ್ಷದ ಮಾನಸಿಕರೋಗ ಪಿಜಿ ವಿಭಾಗದಲ್ಲಿ ಪ್ರಜ್ಞಾ ಓದುತ್ತಿದ್ದಳು. ಶಿವಮೊಗ್ಗ ಮೂಲದವಳಾದ ಪ್ರಜ್ಞಾ ಕಳೆದ ವಾರವಷ್ಟೇ ಊರಿಗೆ ಹೋಗಿ ಬಂದಿದ್ದಳು.

ಡಾ.ಪ್ರಿಯಾ ಪಾಟೀಲ ಎಂಬ ವಿದ್ಯಾರ್ಥಿನಿ ಜೊತೆ ರೂಮ್ ಶೇರ್ ಮಾಡಿಕೊಂಡಿದ್ದ ಪ್ರಜ್ಞಾಳನ್ನು ನೋಡಲು ನಿನ್ನೆಯಷ್ಟೇ ಅವಳ ಪಾಲಕರು ಬಂದು ಹೋಗಿದ್ದರು. ಪ್ರಜ್ಞಾಳ ತಂದೆ, ತಾಯಿ ಬಂದಿದ್ದಕ್ಕೆ ಪ್ರಿಯಾ ರೂಮು ಬಿಟ್ಟು ನಿನ್ನೆ ಒಂದು ದಿನ ಬೇರೆ ಕಡೆ ವಾಸವಾಗಿದ್ದರು. ನಿನ್ನೆ ರಾತ್ರಿ ಡಾ.ಪ್ರಜ್ಞಾ ಒಬ್ಬಳೇ ತನ್ನ ರೂಮಿನಲ್ಲಿದ್ದಳು. ಬೆಳಿಗ್ಗೆ ಪ್ರಿಯಾ ಎಂಬ ವಿದ್ಯಾರ್ಥಿನಿ ರೂಮಿಗೆ ಬಂದು ನೋಡಿದಾಗ ಪ್ರಜ್ಞಾ ಫ್ಯಾನಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದು ಗೊತ್ತಾಗಿದೆ. ಸದ್ಯ ಘಟನಾ ಸ್ಥಳಕ್ಕೆ ಉಪನಗರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Tags:

error: Content is protected !!