ಬರುವ ಫೆಬ್ರವರಿ 3ರಂದು ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ ತಾಲೂಕಿನಲ್ಲಿರುವ ಶ್ರೀ ಕ್ಷೇತ್ರ ಉಳವಿ ಚೆನ್ನಬಸವೇಶ್ವರ ಜಾತ್ರಾ ಮೊಹೋತ್ಸವ ಜರುಗಲಿದ್ದು, ಈ ಹಿನ್ನಲೆಯಲ್ಲಿ ಈಗ ಧಾರವಾಡದಿಂದ ಎತ್ತು ಸೇರಿದಂತೆ ಚಕ್ಕಡಿಗಳನ್ನು ಸಿಂಗಾರ ಮಾಡಿಕೊಂಡು ಚಕ್ಕಡಿಗಳು ಈಗ ಉಳಿಯ ಕಡೆಗೆ ಮುಖಮಾಡಿವೆ.

ವೈ- ಹೌದು.. ಉತ್ತರ ಕನ್ನಡ ಜಿಲ್ಲೆಯ ದಟ್ಟ ಅಭಯಾರಣ್ಯದ ಮಧ್ಯೆ ನೆಲೆಸಿರುವ ಜ್ಞಾನನಿಧಿ ಉಳವಿ ಚೆನ್ನಬಸವೇಶ್ವರರ ಜಾತ್ರೆಗೆ ಇನ್ನೂ ಕೆಲವೇ ದಿನಗಳ ಬಾಕಿ ಇದ್ದು, ಅನದಾತರು ತಮ್ಮ ತಮ್ಮ ಎತ್ತಿನ ಚಕ್ಕಡಿ ಕಟ್ಟಿಕೊ ಹೋಗುತ್ತಿರುವ ಸಂಭ್ರಮ ಧಾರವಾಡದಲ್ಲಿ ಕಂಡು ಬರುತ್ತಿವೆ. ಫೆ.3 ರಂದು ಶ್ರೀ ಉಳವಿ ಚೆನ್ನಬಸವೇಶ್ವರರ ಜಾತ್ರಾ ಮಹೋತ್ಸವ ನಡೆಯಲಿದ್ದು, ಈ ಜಾತ್ರೆಗೆ ಧಾರವಾಡ, ಬೆಳಗಾವಿ ಸೇರಿದಂತೆ ಅನೇಕ ಜಿಲ್ಲೆಯ ರೈತರು ಎತ್ತು, ಚಕ್ಕಡಿ ತೆಗೆದುಕೊಂಡು ಹೊಗುವ ಸಂಪ್ರದಾಯ ಪಾಲಿಸಿಕೊಂಡು ಬಂದಿದ್ದಾರೆ. ಈಗ ಅದನ್ನು ಈ ವರ್ಷವೂ ಮುಂದುವರೆಸಿಕೊಂಡು ಜೋಗಲಾಗುತ್ತಿದೆ. ಧಾರವಾಡ ಜಿಲ್ಲೆ ಸೇರಿ ಧಾರವಾಡ ತಾಲೂಕಿನ ಅನೇಕ ಹಳ್ಳಿಗಳ ರೈತರು ಸೋಮವಾರ ತಮ್ಮ ಎತ್ತು, ಚಕ್ಕಡಿ ಸಿಂಗರಿಸಿ ಉಳವಿಯತ್ತ ಪ್ರಯಾಣ ಬೆಳೆಸಿದರು. ಮಾರ್ಗ ಮಧ್ಯೆ ಅಲ್ಲಲ್ಲಿ ವಾಸ್ತವ್ಯ ಮಾಡುತ್ತ, ಎತ್ತುಗಳ ದಣಿವಾರಿಸುತ್ತ ರೈತರು ಉಳವಿಗೆ ತಲುಪಿ ಚೆನ್ನಬಸವೇಶ್ವರರ ರಥೋತ್ಸವದಲ್ಲಿ ಪಾಲ್ಗೊಳ್ಳಲಿದ್ದಾರೆ. ರಥ ಎಳೆದ ನಂತರ ಎತ್ತಿನ ಬಂಡಿಗಳು ಮರಳಿವೆ.
