Dharwad

ಧಾರವಾಡದಲ್ಲಿ ಸಂಗೊಳ್ಳಿ ರಾಯಣ್ಣನಿಗೆ ಅವಮಾನ ಮಾಡಿದ್ರಾ ಸಚಿವ ಲಾಡ್..?

Share

ಗಣರಾಜೋತ್ಸವ ದಿನದಂದೇ ನಡೆದ ಸಂಗೊಳ್ಳಿ ರಾಯಣ್ಣ ಬಲಿದಾನ ದಿನ ಕಾರ್ಯಕ್ರಮಕ್ಕೆ ಆಹ್ವಾನಿಸಿದ ಆಯೋಜಕರ ಮೇಲೆ ಸಚಿವ ಸಂತೋಷ ಲಾಡ್ ಹರಿಹಾಯ್ದಿದ್ದಾರೆ ಎಂದು ಆರೋಪಿಸಿ ರಾಯಣ್ಣ ಅಭಿಮಾನಿಗಳು ಸಚಿವ ಲಾಡ್ ವಿರುದ್ಧ ಧಾರವಾಡದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವೈ- ಧಾರವಾಡ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಬಳಗದಿಂದ ಅಭಿಮಾನಿಗಳು ಸೋಮವಾರ ರಾಯಣ್ಣ ಹುತಾತ್ಮ ದಿನ ಆಚರಿಸುತ್ತಿದ್ದರು. ಈ ವೇಳೆ ಸಚಿವರು ಪಕ್ಕದಲ್ಲಿದ್ದ ಕೆಫೆಗೆ ಕಾಫಿ ಕುಡಿಯಲು ಬಂದಿದ್ದರು. ಆಗ ಅವರನ್ನು ಕಂಡ ಆಯೋಜಕರು ಪುಷ್ಪಾರ್ಚನೆಗೆ ಆಹ್ವಾನಿಸಿದಾಗ, ‘ಬರೀ ನೀವು ಇದನ್ನೇ ಮಾಡಿ, ಯಾರದ್ದಾದರೂ ಫೋಟೋ ಇಟ್ಟು ಪುಷ್ಪಾರ್ಚನೆಗೆ ನಮ್ಮನ್ನು ಕರೆಯಿರಿ’ ಎಂದು ಸಚಿವರು ಏರು ಧ್ವನಿಯಲ್ಲೇ ಆಯೋಜಕರಿಗೆ ಗದರಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಇದನ್ನು ಖಂಡಿಸಿ ಧಾರವಾಡ ಸಂಗೊಳ್ಳಿ ರಾಯಣ್ಣ ವೃತ್ತದ ಬಳಿ ಪ್ರತಿಭಟನೆ ನಡೆಸಿದ ಕುರುಬ ಸಮಾಜದ ಮುಖಂಡರು ಹಾಗೂ ಮನಸೂರಿನ ಬಸವರಾಜ ದೇವರು ಸಚಿವರ ವಿರುದ್ಧ ಪ್ರತಿಭಟನೆ ನಡೆಸಿ, ಸಚಿವರು ಕ್ಷಮೆ ಕೇಳಬೇಕು, ಇಲ್ಲದಿದ್ದರೆ ದೊಡ್ಡಮಟ್ಟದಲ್ಲಿ ಹೋರಾಟ ರೂಪಿಸುವುದಾಗಿ ಕುರುಬ ಸಮಾಜದ ಮುಖಂಡರು ತಿಳಿಸಿದ್ದಾರೆ.

Tags:

error: Content is protected !!