BELAGAVI

ಬೆಳಗಾವಿಯಲ್ಲಿ ಶಿವಸೇನೆಯಿಂದ ಬಾಳಾಸಾಹೇಬ ಠಾಕ್ರೆ ಜನ್ಮಶತಾಬ್ದಿ ಆಚರಣೆ

Share

ಹಿಂದೂಹೃದಯ ಸಾಮ್ರಾಟ್ ಬಾಳಾಸಾಹೇಬ್ ಠಾಕ್ರೆ ಅವರ ಜನ್ಮಶತಾಬ್ದಿ ವರ್ಷದ ಅಂಗವಾಗಿ ಬೆಳಗಾವಿಯ ಶಿವಸೇನೆ ಮಧ್ಯವರ್ತಿ ಕಚೇರಿಯಲ್ಲಿ ಸಂಭ್ರಮದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಜಿಲ್ಲಾಧ್ಯಕ್ಷ ಹಣಮಂತ ಮಜೂಕರ್ ನೇತೃತ್ವದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಬಾಳಾಸಾಹೇಬರ ಸ್ಮರಣೆ ಮಾಡಲಾಯಿತು.

ಬೆಳಗಾವಿಯ ಖಡೆ ಬಜಾರ್‌ನಲ್ಲಿರುವ ಶಿವಸೇನೆ ಮಧ್ಯವರ್ತಿ ಕಚೇರಿಯಲ್ಲಿ ಬಾಳಾಸಾಹೇಬ್ ಠಾಕ್ರೆ ಅವರ ಜನ್ಮಶತಾಬ್ದಿ ವರ್ಷವನ್ನು ಅತ್ಯಂತ ಉತ್ಸಾಹದಿಂದ ಆಚರಿಸಲಾಯಿತು. ಶಿವಸೇನೆ ಜಿಲ್ಲಾಧ್ಯಕ್ಷ ಹಾಗೂ ಆರ್ಯನ್ ಫೌಂಡೇಶನ್ ಸಂಸ್ಥಾಪಕ ಹಣಮಂತ ಮಜೂಕರ್ ಅವರು ಶಿವಪ್ರತಿಮೆ ಹಾಗೂ ಬಾಳಾಸಾಹೇಬರ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಮಜೂಕರ್ ಅವರು, ಗಡಿ ಹೋರಾಟದಲ್ಲಿ ಬಾಳಾಸಾಹೇಬರ ಕೊಡುಗೆ ಮತ್ತು ಅವರ ಮಾರ್ಗದರ್ಶನ ಎಂದಿಗೂ ಅವಿಸ್ಮರಣೀಯ ಎಂದು ಸ್ಮರಿಸಿದರು.
ಕಾರ್ಯಕ್ರಮದಲ್ಲಿ ನೆರೆದಿದ್ದ ಶಿವಸೈನಿಕರು ಬಾಳಾಸಾಹೇಬರ ಪರ ಘೋಷಣೆಗಳನ್ನು ಕೂಗುತ್ತಾ ಸಂಭ್ರಮಿಸಿದರು. ಇದೇ ವೇಳೆ ಸಾರ್ವಜನಿಕರಿಗೆ ಸಿಹಿ ಹಂಚುವ ಮೂಲಕ ಜನ್ಮಶತಾಬ್ಧಿಯ ಸಂತಸವನ್ನು ಹಂಚಿಕೊಳ್ಳಲಾಯಿತು. ಕಾರ್ಯಕ್ರಮದಲ್ಲಿ ಪ್ರಮುಖರಾದ ಪರಶುರಾಮ ಗೊಂದಕರ, ಮೀನಾಕ್ಷಿ ಪಾಟೀಲ, ಭಾರತಿ ರಾಕ್ಷೆ, ಅಮೋಲ್ ಮಜೂಕರ್ ಸೇರಿದಂತೆ ನೂರಾರು ಶಿವಸೇನೆಯ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಪಾಲ್ಗೊಂಡಿದ್ದರು.

Tags:

error: Content is protected !!