ಬೆಳಗಾವಿ ಭಡಕಲ್ ಗಲ್ಲಿಯ ಶ್ರೀ ಬನಶಂಕರಿ ದೇವಿಯ ಮೂರ್ತಿಯ ಪುರ್ನಪ್ರತಿಷ್ಠಾಪನೆ ಹಿನ್ನೆಲೆ ಇಂದು ಕುಂಕುಮಾರ್ಚಣೆ ಕಾರ್ಯಕ್ರಮ ನೆರವೇರಿತು. ಫೆಬ್ರುವರಿ 1 ರಂದು ಮಹಾಪ್ರಸಾದ ಕಾರ್ಯಕ್ರಮ ನಡೆಯಲಿದೆ.


ಬೆಳಗಾವಿಯ ದೇವಾಂಗ ಹಟಗಾರ ಸಮಾದ ಶ್ರೀ ಬನಶಂಕರಿ ದೇವಸ್ಥಾನ ಟ್ರಸ್ಟ್ ಕಮೀಟಿಯ ವತಿಯಿಂದ ಶ್ರೀ ಬನಶಂಕರಿ ದೇವಿಯ ಮೂರ್ತಿಯ ಪುರ್ನಪ್ರತಿಷ್ಠಾಪನೆಯ ನಿಮಿತ್ಯ ಇಂದು ಕುಂಕುಮಾರ್ಚಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಇದರಲ್ಲಿ ನೂರಾರು ಮಹಿಳೆಯರು ಭಾಗಿಯಾಗಿ ಕುಂಕುಮಾರ್ಚಣೆ ನೆರವೇರಿಸಿದರು.

ಈ ವೇಳೆ ಮಾತನಾಡಿದ ಟ್ರಸ್ಟ್ ಕಮೀಟಿಯ ಅಧ್ಯಕ್ಷರಾದ ಬಸವರಾಜ್ ಜಡಪಣ್ಣವರ ಜನವರಿ 28 ರಂದು ಸಂಜೆ ಆರತಿ, ಜನವರಿ 29 ರಂದು ದುರ್ಗಾಸಪ್ತಶತಿ ಪಾರಾಯಣ, ಜನವರಿ 30 ರಂದು ಪಠಣ, ಜನವರಿ 31 ರಂದು ನವಚಂಡಿ ಹೋಮ, 1 ರಂದು ಪಲ್ಲಕ್ಕಿ ಉತ್ಸವ ಮತ್ತು ಮಧ್ಯಾನ್ಹ ಮಹಾಪ್ರಸಾದ ನಡೆಯಲಿದೆ ಎಂದರು.
ಇನ್ನು ಉಪಾಧ್ಯಕ್ಷರಾದ ಮಹೇಶ್ ಮುಚ್ಚಂಡಿ ಅವರು ದೇವಿಯ ಮೂರ್ತಿಯ ಪುರ್ನಪ್ರತಿಷ್ಠಾಪನೆಯ ಹಿನ್ನೆಲೆ ಈ ವಿವಿಧ ಕಾರ್ಯಕ್ರಮಗಳನ್ನು ಮತ್ತು ಶ್ರೀಚಕ್ರದ ವಿಶೇಷ ಪೂಜೆ ನಡೆಯಲಿದೆ ಎಂದರು.
ಈ ಸಂದರ್ಭದಲ್ಲಿ ಉಮೇಶ್ ಚಿಟಗಿ, ವಿಜಯ ಅಕ್ಕತಂಗೇರ ಸೇರಿದಂತೆ ಇನ್ನುಳಿದವರು ಭಾಗಿಯಾಗಿದ್ಧರು.
