ಬೆಳಗಾವಿಯ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸಫಾಯಿ ಕರ್ಮಚಾರಿ ಘಟಕದ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ಅದ್ದೂರಿಯಾಗಿ ನೆರವೇರಿತು. ಕೆಪಿಸಿಸಿ ಸಫಾಯಿ ಕರ್ಮಚಾರಿ ಘಟಕದ ರಾಜ್ಯಾಧ್ಯಕ್ಷ ಅಶೋಕ್ ಸಾಲಪ್ಪ ಅವರ ಸಮ್ಮುಖದಲ್ಲಿ ಜಿಲ್ಲಾಧ್ಯಕ್ಷರು ಅಧಿಕಾರ ಸ್ವೀಕರಿಸಿದರು.

ಬೆಳಗಾವಿಯ ಜಿಲ್ಲಾ ಕಾಂಗ್ರೆಸ್ ಭವನದಲ್ಲಿಂದುಕೆಪಿಸಿಸಿ ಸಫಾಯಿ ಕರ್ಮಚಾರಿ ಘಟಕದ ಪ್ರಮುಖ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ಜರುಗಿತು. ಕಾರ್ಯಕ್ರಮದಲ್ಲಿ ಕೆಪಿಸಿಸಿ ಸಫಾಯಿ ಕರ್ಮಚಾರಿ ಘಟಕದ ರಾಜ್ಯಾಧ್ಯಕ್ಷರಾದ ಅಶೋಕ್ ಸಾಲಪ್ಪ ಅವರು ಪಾಲ್ಗೊಂಡು ನೂತನ ಪದಾಧಿಕಾರಿಗಳಿಗೆ ಶುಭ ಹಾರೈಸಿದರು. ಇದೇ ಸಂದರ್ಭದಲ್ಲಿ ಬೆಳಗಾವಿ ಜಿಲ್ಲಾ ಗ್ರಾಮೀಣ ಸಫಾಯಿ ಕರ್ಮಚಾರಿ ಘಟಕದ ಅಧ್ಯಕ್ಷರಾಗಿ ರಾಜು ಸಾಖೆ ಅವರು ಅಧಿಕೃತವಾಗಿ ಅಧಿಕಾರ ಸ್ವೀಕರಿಸಿದರು. ಸಮಾಜದ ಕಟ್ಟಕಡೆಯ ವ್ಯಕ್ತಿಗಳ ಏಳಿಗೆಗಾಗಿ ಶ್ರಮಿಸುವ ನಿಟ್ಟಿನಲ್ಲಿ ಈ ಘಟಕವು ಬಲಿಷ್ಠವಾಗಿ ಕೆಲಸ ಮಾಡಲಿದೆ ಎಂದು ಮುಖಂಡರು ಇದೇ ವೇಳೆ ತಿಳಿಸಿದರು.

ಈ ಸಂಭ್ರಮದ ಕಾರ್ಯಕ್ರಮದಲ್ಲಿ ಬೆಳಗಾವಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ವಿನಯ್ ನಾವಲಗಟ್ಟಿ ಅವರು ತಮ್ಮ ಮಾರ್ಗದರ್ಶನ ನೀಡಿದರು.

ಈ ಸಂದರ್ಭದಲ್ಲಿ ಕೆಪಿಸಿಸಿ ಸಫಾಯಿ ಕರ್ಮಚಾರಿ ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ ಅಡ್ವೊಕೇಟ್ ಅದವೇಪ್ಪ ಯರಜರ್ವಿ, ಪ್ರಮುಖರಾದ ಪಿ.ಎಂ. ಅನಂತಪುರ, ಭಂಡಾರಿ ಮುನಿಸ್ವಾಮಿ, ವಿಜಯ್ ನಿರ್ಗಟ್ಟಿ ಮತ್ತು ಷಣ್ಮುಖ ಆದಿಆಂಧ್ರ ಉಪಸ್ಥಿತರಿದ್ದರು. ಅಲ್ಲದೆ ಮಹಾನಗರ ಪಾಲಿಕೆ ಸದಸ್ಯರಾದ ಖುರ್ಷಿದ್ ಮುಲ್ಲಾ ಹಾಗೂ ಸಫಾಯಿ ಕರ್ಮಚಾರಿ ಸಂಘದ ಅನೇಕ ಮುಖಂಡರು
ಮತ್ತು ಕಾರ್ಯಕರ್ತರು ಪಾಲ್ಗೊಂಡು ನೂತನ ಪದಾಧಿಕಾರಿಗಳನ್ನು ಅಭಿನಂದಿಸಿದರು. ಸಫಾಯಿ ಕರ್ಮಚಾರಿಗಳ ಹಕ್ಕುಗಳ ರಕ್ಷಣೆಗಾಗಿ ಪಕ್ಷವು ಸದಾ ಬದ್ಧವಾಗಿದೆ ಎಂದು ಸಮಾರಂಭದಲ್ಲಿ ಆಶಯ ವ್ಯಕ್ತಪಡಿಸಲಾಯಿತು.
