Hukkeri

ಹುಕ್ಕೇರಿ : ಮತದಾನದ ಮಹತ್ವ ಅರಿತು ಮತದಾನ ಮಾಡಿ – ನ್ಯಾಯಾಧೀಶ ರಾಜಣ್ಣಾ.

Share

ಸ್ವಾತಂತ್ರ್ಯ ಪೂರ್ವದಲ್ಲಿಯ ಘಟನಾವಳಿಗಳನ್ನು ಅರಿತು ನಾವು ಇಂದು ಪ್ರಜಾಪ್ರಭುತ್ವದಲ್ಲಿ ಮತದಾನದ ಹಕ್ಕು ಮತ್ತು ಕರ್ತವ್ಯವನ್ನು ತಿಳಿದುಕೋಳ್ಳುವದು ಅವಶ್ಯವಾಗಿದೆ ಎಂದು ಹುಕ್ಕೇರಿ ಹಿರಿಯ ನ್ಯಾಯಾಧೀಶ ರಾಜಣ್ಣಾ ಸಂಖಣ್ಣವರ ಹೇಳಿದರು.

ಅವರು ಇಂದು ಹುಕ್ಕೇರಿ ತಸಲೂಕಾ ಆಡಳಿತ, ಪುರಸಭೆ ಮತ್ತು ಶಿಕ್ಷಣ ಇಲಾಖೆ ವತಿಯಿಂದ ಹಮ್ಮಿಕೊಂಡ ರಾಷ್ಟ್ರೀಯ ಮತದಾನ ದಿನಾಚಾರಣೆಯನ್ನು ಸಸಿಗೆ ನೀರು ಹಾಕುವ ಮೂಲಕ ಚಾಲನೆ ನೀಡಿ ಮಾತನಾಡಿದರು.
ವೇದಿಕೆ ಮೇಲೆ ತಹಸಿಲ್ದಾರ ಬಲರಾಮ ಕಟ್ಟಿಮನಿ, ಬಿ ಇ ಓ ಪ್ರಭಾವತಿ ಪಾಟೀಲ, ಪುರಸಭೆ ಮುಖ್ಯಧಿಕಾರಿ ಈಶ್ವರ ಸಿದ್ನಾಳ, ನ್ಯಾಯವಾದಿಗಳ ಸಂಘದ ಅದ್ಯಕ್ಷ ಕಾಡಪ್ಪಾ ಕುರಬೇಟ, ಎಜಿಪಿ ಅನಿಲ ಕರೋಶಿ, ಪ್ರಶಾಂತ ಮುನ್ನೋಳ್ಳಿ, ಯೋಗೇಶ ಕಾಂಬೋಜಿ, ಅನಿತಾ ಏಶಿ, ಎಂ ಡಿ ಬಡಿಗೇರ, ಎಂ ವಿ ಮಾಸ್ತಮರಡಿ.ಸಂತೋಷ ನಾಯಿಕ ಉಪಸ್ಥಿತರಿದ್ದರು.

ನಂತರ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ನೀಡಿ ಗೌರವಿಸಲಾಯಿತು.
ತಹಸಿಲ್ದಾರ ಬಲರಾಮ ಕಟ್ಟಿಮನಿ ಮಾತನಾಡಿ ಮತದಾರರು ಪ್ರಭುಗಳಾದಾಗ ಮಾತ್ರ ಮತದಾನ ನೆಲೆ ಗಟ್ಟಿಯಾಗಲು ಸಾಧ್ಯ ಕಾರಣ ಯಾವದೇ ಆಮಿಷಿಗಳಿಗೆ ಒಳಗಾಗದೆ ಪ್ರತಿಯೊಬ್ಬರು ಮತದಾನ ಮಾಡಬೇಕು ಎಂದರು ..
ನಂತರ ವಿದ್ಯಾರ್ಥಿಗಳು ಮತದಾನ ಜಾಗೃತಿ ಕುರಿತು ಜಾಥಾ ಜರುಗುಸಿದರು.
ಈ ಸಂದರ್ಭದಲ್ಲಿ ವಿವಿಧ ಇಲಾಖೆ ಅಧಿಕಾರಿಗಳು ,ಶಾಲಾ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Tags:

error: Content is protected !!